ಬಿಜೆಪಿ ವಿರುದ್ಧ ಹೋರಾಡಲು ಕಾಂಗ್ರೆಸ್-ಸಿಪಿಐ ಜೊತೆ ಮೈತ್ರಿ ಪ್ರಸ್ತಾಪ ಮುಂದಿಟ್ಟ ಟಿಎಂಸಿಗೆ ತೀವ್ರ ಮುಖಭಂಗ!
ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗ ಟಿಎಂಸಿಯಿಂದ ಜನಪ್ರಿಯ ನಾಯಕರು ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ.
Published: 14th February 2021 01:19 AM | Last Updated: 14th February 2021 01:19 AM | A+A A-

ಮಮತಾ ಬ್ಯಾನರ್ಜಿ
ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ ವಿಧಾನಸಭೆ ಚುನಾವಣೆ ಹತ್ತಿರದಲ್ಲಿರುವಾಗ ಟಿಎಂಸಿಯಿಂದ ಜನಪ್ರಿಯ ನಾಯಕರು ಬಿಜೆಪಿಗೆ ವಲಸೆ ಹೋಗುತ್ತಿದ್ದಾರೆ.
ಈ ಬೆಳವಣಿಗೆಯಿಂದ ಕಂಗೆಟ್ಟಿರುವ ತೃಣಮೂಲ ಕಾಂಗ್ರೆಸ್ ಬಿಜೆಪಿಯನ್ನು ಎದುರಿಸುವುದಕ್ಕಾಗಿ ಕಾಂಗ್ರೆಸ್- ಎಡಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಆಲೋಚನೆಯಲ್ಲಿದೆ. ಆದರೆ ಇಲ್ಲಿಯೂ ಟಿಎಂಸಿಗೆ ಮುಖಭಂಗ ಉಂಟಾಗಿದೆ.
ಬಿಜೆಪಿಯಂತಹ ಅಪಾಯಕ್ಕೆ ರಾಜ್ಯದಲ್ಲಿ ಅವಕಾಶ ಮಾಡಿಕೊಡದೇ ಇರುವುದಕ್ಕಾಗಿ ಟಿಎಂಸಿ ಕಾಂಗ್ರೆಸ್- ಎಡಪಕ್ಷಗಳಿಗೆ ಕರೆ ನೀಡಿದೆ. ಆದರೆ ಟಿಎಂಸಿ ಕರೆಯನ್ನು ತಿರಸ್ಕರಿಸಿರುವ ಕಾಂಗ್ರೆಸ್ ಟಿಎಂಸಿಯನ್ನು ಪಶ್ಚಿಮ ಬಂಗಾಳದಲ್ಲಿನ ಬಿಜೆಪಿಯ ಬಿ ಟೀಎಂ ಎಂದು ಹೇಳುವ ಮೂಲಕ ಮೈತ್ರಿ ಪ್ರಸ್ತಾವವನ್ನು ತಿರಸ್ಕರಿಸಿದೆ.
ಬಿಜೆಪಿ ವಿರುದ್ಧದ ಹೋರಾಟದಲ್ಲಿ ಕೈ ಜೋಡಿಸುವಂತೆ ಕಳೆದ ಟಿಎಂಸಿ ಒಂದು ತಿಂಗಳಲ್ಲಿ ಎರಡನೇ ಬಾರಿಗೆ ಕಾಂಗ್ರೆಸ್ ಹಾಗೂ ಎಡಪಕ್ಷಗಳಿಗೆ ಕರೆ ನೀಡಿದೆ. ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಪಶ್ಚಿಮ ಬಂಗಾಳದಲ್ಲಿ ಟಿಎಂಸಿಗೆ ಬಿಜೆಪಿಯೊಂದೇ ಪರ್ಯಾಯ ಎಂಬುದನ್ನು ಈ ಘಟನೆ ಸೂಚಿಸುತ್ತದೆ ಎಂದು ಹೇಳಿದೆ.
ಏಪ್ರಿಲ್-ಮೇ ತಿಂಗಳಲ್ಲಿ ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ನಿಜವಾಗಿಯೂ ಬಿಜೆಪಿಯನ್ನು ವಿರೋಧಿಸುವುದಾದರೆ ಮಮತಾ ಬ್ಯಾನರ್ಜಿ ಬೆನ್ನಿಗೆ ನಿಂತು ಬಿಜೆಪಿ ವಿರುದ್ಧದ ಅವರ ಹೋರಾಟದಲ್ಲಿ ಕೈ ಜೋಡಿಸಬೇಕಿದೆ ಎಂದು ಟಿಎಂಸಿ ನಾಯಕ, ಸಚಿವ ತಪಸ್ ರಾಯ್ ಹೇಳಿದ್ದಾರೆ.