ಭೋಪಾಲ್: ಪ್ರೇಮಿಗಳ ದಿನದಂದು ಬಿಜೆವೈಎಂ, ಶಿವಸೇನೆ ಕಾರ್ಯಕರ್ತರಿಂದ ಹುಕ್ಕಾ ಬಾರ್, ರೆಸ್ಟೋರೆಂಟ್ ಗಳು ಧ್ವಂಸ!
ಪ್ರೇಮಿಗಳ ದಿನಾಚರಣೆಯ ದಿನದಂದು ಬಿಜೆಪಿ ಯುವ ಮೋರ್ಚಾದ ಹಾಗೂ ಶಿವಸೇನೆ ಕಾರ್ಯಕರ್ತರು ರೆಸ್ಟೋರೆಂಟ್ ಹಾಗೂ ಹುಕ್ಕಾ ಬಾರ್ ಲಾಂಜ್ ಗಳಿಗೆ ನುಗ್ಗಿ ಧ್ವಂಸಗೊಳಿಸಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.
Published: 15th February 2021 12:53 AM | Last Updated: 15th February 2021 12:53 AM | A+A A-

ಭೋಪಾಲ್: ಪ್ರೇಮಿಗಳ ದಿನದಂದು ಬಿಜೆವೈಎಂ, ಶಿವಸೇನೆ ಕಾರ್ಯಕರ್ತರಿಂದ ಹುಕ್ಕಾ ಬಾರ್, ರೆಸ್ಟೋರೆಂಟ್ ಗಳು ಧ್ವಂಸ!
ಭೋಪಾಲ್: ಪ್ರೇಮಿಗಳ ದಿನಾಚರಣೆಯ ದಿನದಂದು ಬಿಜೆಪಿ ಯುವ ಮೋರ್ಚಾದ ಹಾಗೂ ಶಿವಸೇನೆ ಕಾರ್ಯಕರ್ತರು ರೆಸ್ಟೋರೆಂಟ್ ಹಾಗೂ ಹುಕ್ಕಾ ಬಾರ್ ಲಾಂಜ್ ಗಳಿಗೆ ನುಗ್ಗಿ ಧ್ವಂಸಗೊಳಿಸಿರುವ ಘಟನೆ ಭೋಪಾಲ್ ನಲ್ಲಿ ನಡೆದಿದೆ.
ಭೋಪಾಲ್ ನಗರದ ಐಷಾರಾಮಿ ಪ್ರದೇಶವಾದ ಶ್ಯಾಮಲ ಹಿಲ್ಸ್ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತರು ಹುಕ್ಕಾ ಬಾರ್, ರೆಸ್ಟೋರೆಂಟ್ ಗಳ ಮೇಲೆ ದಾಳಿ ನಡೆಸಿದ್ದರೆ, ಅರೇರಾ ಕಾಲೋನಿ ಏರಿಯಾದಲ್ಲಿ ಶಿವಸೇನೆ ಕಾರ್ಯಕರ್ತರು ಈ ದಾಳಿ ನಡೆಸಿದ್ದಾರೆ.
ಕೇವಲ ದಾಳಿ ನಡೆಸಿ ಧ್ವಂಸಗೊಳಿಸುವುದಷ್ಟೇ ಅಲ್ಲದೇ, ಮಹಿಳೆಯರೂ ಸೇರಿ ಅಲ್ಲಿದ್ದ ಗ್ರಾಹಕರೊಂದಿಗೆ ಕಠಿಣವಾಗಿ ವರ್ತಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಹಿಬಾಬ್ ಗಂಜ್ ಹಾಗೂ ಶ್ಯಾಮಲ ಹಿಲ್ಸ್ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದು, ಬಿಜೆಪಿಯ ಮಾಜಿ ಶಾಸಕ ಸುರೇಂದ್ರ ನಾಥ್ ಸಿಂಗ್ ಸೇರಿದಂತೆ 17 ಮಂದಿಯನ್ನು ಬಂಧಿಸಲಾಗಿದೆ.
Saffron brigade on the rampage on Valentine Day in Bhopal. Shiv Sena and BJYM (BJP's youth wing) activists vandalized property at separate restaurants and hookah bar-lounge.17 persons, icluding ex BJP MLA Surendra Nath Singh 'Mamma' held. @NewIndianXpress pic.twitter.com/PloSOiXqvG
— Anuraag Singh (@anuraag_niebpl) February 14, 2021
ವಿಶೇಷವೆಂದರೆ ಶಿವಸೇನೆಯ ಮಹಿಳಾ ಕಾರ್ಯಕರ್ತರೂ ಈ ದಾಳಿಯಲ್ಲಿ ಭಾಗಿಯಾಗಿದ್ದು ಅವರನ್ನೂ ವಶಕ್ಕೆ ಪಡೆಯಲಾಗಿದೆ. ಕೇಸರಿ ಪಡೆಯ ಕಾರ್ಯಕರ್ತರು ಹುಕ್ಕಾ ಬಾರ್ ಗಳನ್ನು ಧ್ವಂಸಗೊಳಿಸುತ್ತಿರುವ ವಿಡಿಯೋ ವೈರಲ್ ಆಗತೊಡಗಿದೆ.
ಈ ಬಗ್ಗೆ ಮಾತನಾಡಿರುವ ಬಿಜೆಪಿಯ ಮಾಜಿ ಶಾಸಕ ಸುರೇಂದ್ರ ಸಿಂಗ್, ಭೋಪಾಲ್ ನಲ್ಲಿ ಇಂತಹ ಹುಕ್ಕಾ ಬಾರ್ ಲಾಂಜ್ ಗಳನ್ನು ಮುಚ್ಚಬೇಕು, ಇಂತಹ ತಾಣಗಳಲ್ಲಿ ಯುವತಿಯರಿಗೆ ಡ್ರಗ್ಸ್ ನೀಡಲಾಗುತ್ತದೆ ಹಾಗೂ ಲವ್ ಜಿಹಾದ್ ನ್ನು ಉತ್ತೇಜಿಸಲಾಗುತ್ತದೆ ಎಂದು ಆರೋಪಿಸಿದ್ದಾರೆ.