ನೇಪಾಳ, ಶ್ರೀಲಂಕಾದಲ್ಲೂ ಬಿಜೆಪಿ ವಿಸ್ತರಿಸಲು ಅಮಿತ್ ಶಾ ಪ್ಲಾನ್: ಬಿಪ್ಲಬ್ ಕುಮಾರ್ ದೆಬ್
ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೆಬ್ ರಾಜಕೀಯ ಮತ್ತು ನೀತಿ ಬಗ್ಗೆ ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ. ಈ ಬಾರಿ ಅದು ಅಂತಾರಾಷ್ಟ್ರೀಯ ರಾಜಕೀಯಕ್ಕೆ ಸಂಬಂಧಿಸಿದ್ದಾಗಿದೆ.
Published: 15th February 2021 11:27 AM | Last Updated: 15th February 2021 12:53 PM | A+A A-

ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೆಬ್
ಗುವಾಹಟಿ: ತ್ರಿಪುರಾ ಮುಖ್ಯಮಂತ್ರಿ ಬಿಪ್ಲಬ್ ಕುಮಾರ್ ದೆಬ್ ರಾಜಕೀಯ ಮತ್ತು ನೀತಿ ಬಗ್ಗೆ ಹೇಳಿಕೆ ನೀಡುವ ಮೂಲಕ ಮತ್ತೊಂದು ವಿವಾದವನ್ನು ಮೈ ಮೇಲೆ ಎಳೆದುಕೊಂಡಿದ್ದಾರೆ.ಈ ಬಾರಿ ಅದು ಅಂತಾರಾಷ್ಟ್ರೀಯ ರಾಜಕೀಯಕ್ಕೆ ಸಂಬಂಧಿಸಿದ್ದಾಗಿದೆ.
ರಾಜಧಾನಿ ಅಗರ್ತಲಾದಲ್ಲಿ ನಡೆದ ಬಿಜೆಪಿ ಸಮಾರಂಭದಲ್ಲಿ ಮಾತನಾಡಿದ ಬಿಪ್ಲಬ್ ಕುಮಾರ್ ದೆಬ್, ದೇಶದಲ್ಲಿ ಮಾತ್ರವಲ್ಲ, ನೆರೆಹೊರೆಯ ದೇಶಗಳಲ್ಲಿಯೂ ಪಕ್ಷವನ್ನು ವಿಸ್ತರಿಸುವ ಯೋಜನೆ ಇದೆ.ನೇಪಾಳ ಮತ್ತು ಶ್ರೀಲಂಕಾದಲ್ಲಿಯೂ ಬಿಜೆಪಿ ಸರ್ಕಾರ ಸ್ಥಾಪಿಸಲು ಗೃಹ ಸಚಿವ ಅಮಿತ್ ಶಾ ಪ್ಲಾನ್ ಮಾಡಿದ್ದಾರೆ ಎಂದು ಹೇಳಿದ್ದಾರೆ.
2018ರ ವಿಧಾನಸಭಾ ಚುನಾವಣೆ ಸಿದ್ಧತೆಯ ಸಂದರ್ಭದಲ್ಲಿ ಕಾರ್ಯಕರ್ತರೊಂದಿಗೆ ಬಿಪ್ಲಬ್ ಕುಮಾರ್ ದೆಬ್ ನಡೆಸಿರುವ ಸಂಭಾಷಣೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ. ಎಲ್ಲಾ ರಾಜ್ಯಗಳಲ್ಲಿ ಬಿಜೆಪಿ ಗೆದ್ದ ನಂತರ ವಿದೇಶಗಳಲ್ಲಿ ಪಕ್ಷ ವಿಸ್ತರಿಸುವ ಬಗ್ಗೆ ಸಭೆಯೊಂದರಲ್ಲಿ ತಮ್ಮೊಂದಿಗೆ ಮಾತನಾಡಿರುವುದಾಗಿ ಬಿಪ್ಲಬ್ ಕುಮಾರ್ ದೇಬ್ ಹೇಳಿದ್ದಾರೆ.
ಗೆಸ್ಟ್ ಹೌಸ್ ನಲ್ಲಿ ನಡೆದ ಮಾತುಕತೆ ವೇಳೆಯಲ್ಲಿ ಶ್ರೀಲಂಕಾ, ನೇಪಾಳದಲ್ಲಿಯೂ ಗೆಲುವು ಮೂಲಕ ಸರ್ಕಾರ ಸರ್ಕಾರ ರಚಿಸುವ ಪ್ಲಾನ್ ಇರುವುದಾಗಿ ಅಮಿತ್ ಶಾ ಹೇಳಿರುವುದಾಗಿ ಬಿಪ್ಲಬ್ ಕುಮಾರ್ ದೆಬ್ ತಿಳಿಸಿದ್ದಾರೆ. ಆದರೆ, ಇದು ಸ್ಪಷ್ಟವಾಗಿಲ್ಲ. ಈ ಸಂಬಂಧ ಪಕ್ಷದಿಂದ ಅಧಿಕೃತ ಪ್ರತಿಕ್ರಿಯೆ ಹೊರಬಿದ್ದಿಲ್ಲ.