ಫೆ.18ರಂದು ಪಶ್ಚಿಮ ಬಂಗಾಳದ 1263 ಮಂಡಲಗಳಲ್ಲಿ ಬಿಜೆಪಿಯಿಂದ 'ಕೃಷಿಕರಿಗೆ ಸಹ ಭೋಜನ' ಆಯೋಜನೆ

ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೃಷಿಕರನ್ನು ತಲುಪಲು ಬಿಜೆಪಿ ಮೆಗಾ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದೇ 18 ರಂದು 1,263 ಮಂಡಲಗಳಲ್ಲಿ  ಕೃಷಿಕರಿಗೆ ಸಹ ಭೋಜನವನ್ನು ಬಿಜೆಪಿ ಕಿಸಾನ್ ಮೋರ್ಚಾ ಆಯೋಜಿಸಿದೆ.

Published: 15th February 2021 12:09 PM  |   Last Updated: 15th February 2021 12:55 PM   |  A+A-


JP_Nadda1

ಇತ್ತೀಚಿಗೆ ಹಳ್ಳಿಯೊಂದಕ್ಕೆ ಭೇಟಿ ನೀಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ಊಟ ಮಾಡುತ್ತಿರುವ ಚಿತ್ರ

Posted By : Nagaraja AB
Source : ANI

ಕೊಲ್ಕತ್ತಾ: ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕೃಷಿಕರನ್ನು ತಲುಪಲು ಬಿಜೆಪಿ ಮೆಗಾ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ. ಇದೇ 18 ರಂದು 1,263 ಮಂಡಲಗಳಲ್ಲಿ  ಕೃಷಿಕರಿಗೆ ಸಹ ಭೋಜನವನ್ನು ಬಿಜೆಪಿ ಕಿಸಾನ್ ಮೋರ್ಚಾ ಆಯೋಜಿಸಿದೆ. 48,751 ರಾಜ್ಯಗಳ ಪೈಕಿಯಲ್ಲಿ ಬಹುತೇಕ 40 ಸಾವಿರ ಹಳ್ಳಿಗಳಲ್ಲಿ ಈವರೆಗೂ ಕೃಷಿಕರಿಗೆ ಸುರಕ್ಷಾ ಅಭಿಯಾನ ನಡೆದಿದೆ.

ಕೇಂದ್ರ ಸರ್ಕಾರದಿಂದ ದೊರೆಯುವ ಎಲ್ಲಾ ಯೋಜನೆಗಳನ್ನು ಕೃಷಿಕರಿಗೆ ತಲುಪಿಸುವುದು ನಮ್ಮ ಉದ್ದೇಶವಾಗಿದೆ. ಪಶ್ಚಿಮ ಬಂಗಾಳದಲ್ಲಿ 70 ಲಕ್ಷ ರೈತರಿದ್ದಾರೆ. ಆದರೆ, ರೈತರಿಗೆ ಪ್ರಯೋಜನಕಾರಿಯಾದ ಯಾವುದೇ ಸೂಕ್ತ ಯೋಜನೆ ರಾಜ್ಯ ಸರ್ಕಾರದಿಂದ ಜಾರಿಯಾಗಿಲ್ಲ. ಕೇಂದ್ರದ ಕಲ್ಯಾಣ ಕಾರ್ಯಕ್ರಮಗಳಿಂದ ರಾಜ್ಯದ ರೈತರು ವಂಚಿತರಾಗಿದ್ದಾರೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಕಿಶಾನ್ ಮೋರ್ಚಾ ಅಧ್ಯಕ್ಷ ಮಹದೇವ್ ಸರ್ಕಾರ್ ತಿಳಿಸಿದ್ದಾರೆ.

ಜನವರಿ 9 ರಿಂದ ಕೃಷಿಕರಿಗೆ ಸುರಕ್ಷಾ ಅಭಿಯಾನ ನಡೆಯುತ್ತಿದೆ. ಈ ಕಾರ್ಯಕ್ರಮದ ಮೂಲಕ  25 ಲಕ್ಷ ರೈತ ಕುಟುಂಬವನ್ನು ತಲುಪಲಾಗಿದೆ. ಸುಮಾರು 7 ಸಾವಿರ ಕೃಷಿಕರೊಂದಿಗೆ ಸಹ ಭೋಜನ ನಡೆಸಲಾಗುತ್ತಿದೆ. ಈ ಅಭಿಯಾನದಡಿ 3,354 ಗ್ರಾಮ ಪಂಚಾಯಿತಿಗಳಲ್ಲಿ ಸಹ ಭೋಜನ ಏರ್ಪಡಿಸಲಾಗುತ್ತಿದೆ. ಇದರಲ್ಲಿ ಯಶಸ್ವಿಯಾದ ನಂತರ ಮಂಡಲಗಳಲ್ಲಿ ಆಯೋಜಿಸುತ್ತೇವೆ.

ಸಹ ಭೋಜನ ಕಾರ್ಯಕ್ರಮದಲ್ಲಿ ಕುಟುಂಬದ ಎಲ್ಲಾ ರೈತರಿಗೆ ಬೇಯಿಸದ ಅಕ್ಕಿ ಜೊತೆಗೆ ಇನ್ನಿತರ ಸಾಮಾಗ್ರಿಗಳನ್ನು ನೀಡಲಾಗುತ್ತದೆ. ಅಡುಗೆಯಾದ ನಂತರ  ಕುಟುಂಬದ ಎಲ್ಲಾ ಸದಸ್ಯರು ಕುಳಿತು ಊಟ ಮಾಡುವುದಾಗಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾನೂನುಗಳ ರದ್ಧತಿಗಾಗಿ ದೆಹಲಿಯಲ್ಲಿ ರೈತರು ನವೆಂಬರ್ ನಿಂದ ಪ್ರತಿಭಟನೆ ನಡೆಸುತ್ತಿರುವಂತೆಯೇ ಪಶ್ಚಿಮ ಬಂಗಾಳದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ರೈತರನ್ನು ತಲುಪಲು ಬಿಜೆಪಿ ಮೆಗಾ ಪ್ಲಾನ್ ಮಾಡಿದೆ.


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp