ಹಿಂದೂ ವಿರೋಧಿ ಟ್ವೀಟ್: ನೌಕರಿ ಕಳೆದುಕೊಂಡ ಗಾನಾ ಉದ್ಯೋಗಿ; ಕ್ಷಮೆ ಯಾಚನೆ!

ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ಉದ್ಯೋಗಿಯನ್ನು ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಒದಗಿಸುವ ಗಾನಾ ಸಂಸ್ಥೆ ಕೆಲಸದಿಂದ ವಜಾ ಮಾಡಿದೆ. 

Published: 15th February 2021 01:25 AM  |   Last Updated: 15th February 2021 12:47 PM   |  A+A-


Twitter

ಟ್ವೀಟರ್

Posted By : Srinivas Rao BV
Source : The New Indian Express

ನವದೆಹಲಿ: ಹಿಂದೂಗಳ ಭಾವನೆಗಳಿಗೆ ನೋವುಂಟು ಮಾಡುವ ರೀತಿಯಲ್ಲಿ ಟ್ವೀಟ್ ಮಾಡಿದ್ದ ಉದ್ಯೋಗಿಯನ್ನು ಮ್ಯೂಸಿಕ್ ಸ್ಟ್ರೀಮಿಂಗ್ ಸೇವೆ ಒದಗಿಸುವ ಗಾನಾ ಸಂಸ್ಥೆ ಕೆಲಸದಿಂದ ವಜಾ ಮಾಡಿದೆ. 

ಬಜರಂಗದಳದ ಕಾರ್ಯಕರ್ತ ರಿಂಕು ಶರ್ಮಾ ಹತ್ಯೆಗೆ ಸಂಬಂಧಿಸಿದಂತೆ ತಾನ್ಜಿಲಾ ಆನಿ ಎಂಬುವವರು ಮಾಡಿದ್ದ ಟ್ವೀಟ್ ವೈರಲ್ ಆಗತೊಡಗಿದ್ದು, ಇದರಿಂದ ಹಿಂದೂಗಳ ಭಾವನೆಗೆ ಧಕ್ಕೆ ಉಂಟಾಗಲಿದೆ ಎಂಬ ಅಸಮಾಧಾನ ವ್ಯಕ್ತವಾಗಿತ್ತು. 

ತಾನ್ಜಿಲಾ ಅವರದ್ದು ಲಾಕ್ಡ್ ಪ್ರೊಫೈಲ್ ಆಗಿದ್ದು, ಗಾನಾ ತಕ್ಷಣವೇ ಕ್ರಮ ಕೈಗೊಂಡಿದ್ದು, ಉದ್ಯೋಗಿಯನ್ನು ಕೆಲಸದಿಂದ ವಜಾಗೊಳಿಸಿ ಬೇಷರತ್ ಕ್ಷಮೆ ಕೋರಿದೆ. 

"ಗಾನಾ ದೇಶದ ಎಲ್ಲಾ ಸಮುದಾಯ ಹಾಗೂ ಧರ್ಮಗಳನ್ನು ಗೌರವಿಸುತ್ತದೆ. ಇತ್ತೀಚೆಗಷ್ಟೇ ಸಂಸ್ಥೆ ಸೇರಿದ್ದ ಉದ್ಯೋಗಿಯೊಬ್ಬರ ಸಾಮಾಜಿಕ ಜಾಲತಾಣದ ಪೋಸ್ಟ್ ನಮ್ಮ ಮೌಲ್ಯಗಳನ್ನು ಪ್ರತಿನಿಧಿಸುವುದಿಲ್ಲ ಎಂದು ಸ್ಪಷ್ಟನೆ ನೀಡುದ್ದು, ಬೇಷರತ್ ಕ್ಷಮೆ ಕೋರಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ತಾನ್ಜಿಲಾ ಸಹ ಬೇಷರತ್ ಕ್ಷಮೆ ಕೋರಿದ್ದು, ದುರುದ್ದೇಶದಿಂದ ಈ ಟ್ವೀಟ್ ಮಾಡಿಲ್ಲ ಎಂದು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
representation purpose only

ಕೋವಿಡ್ ಲಸಿಕೆ ವಿತರಿಸುವಲ್ಲಿ ಮೋದಿ ಸರ್ಕಾರ ಪಕ್ಷಪಾತ ಮಾಡುತ್ತಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನೀವು ಏನಂತೀರಿ?


Result
ಇಲ್ಲ, ಇದು ಅಸಂಬದ್ಧ ಆರೋಪ
ಹೌದು, ಪಕ್ಷಪಾತ ಮಾಡುತ್ತಿದೆ
flipboard facebook twitter whatsapp