ಟೂಲ್ ಕಿಟ್ ವಿಚಾರವಾಗಿ ದಿಶಾ ರವಿ ಬಂಧನ: ಪೊಲೀಸರ ಕ್ರಮಕ್ಕೆ ಕಾಂಗ್ರೆಸ್ ವಿರೋಧ, ಬಿಜೆಪಿ ಸ್ವಾಗತ
ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಬಂಧನಕ್ಕೀಡಾಗಿರುವ ಪರಿಸರವಾದಿ ದಿಶಾರವಿ ವಿಚಾರವಾಗಿ ರಾಜಕೀಯ ಕೆಸರೆರಚಾಟ ಆರಂಭವಾಗಿದೆ.
Published: 15th February 2021 11:33 AM | Last Updated: 15th February 2021 12:54 PM | A+A A-

ದಿಶಾ ರವಿ (ಸಂಗ್ರಹ ಚಿತ್ರ)
ಬೆಂಗಳೂರು: ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರಿಂದ ಬಂಧನಕ್ಕೀಡಾಗಿರುವ ಪರಿಸರವಾದಿ ದಿಶಾರವಿ ವಿಚಾರವಾಗಿ ರಾಜಕೀಯ ಕೆಸರೆರಚಾಟ ಆರಂಭವಾಗಿದೆ.
ಹೌದು..ದಿಶಾ ರವಿ ಬಂಧನವನ್ನು ವಿಪಕ್ಷ ಕಾಂಗ್ರೆಸ್ ಮುಖಂಡರು ವಿರೋಧಿಸಿದ್ದು, ಆಡಳಿತಾ ರೂಢ ಬಿಜೆಪಿ ಪೊಲೀಸರ ಕ್ರಮವನ್ನು ಸ್ವಾಗತಿಸಿದೆ. ಮಾಜಿ ಹವಾಮಾನ ಸಚಿವರು, ಅನೇಕ ಕಾರ್ಯಕರ್ತರು ಮತ್ತು ಶಿಕ್ಷಣ ತಜ್ಞರು ಸೇರಿದಂತೆ ಹಲವಾರು ವಿರೋಧ ಪಕ್ಷದ ನಾಯಕರು 21 ವರ್ಷದ ಕಾರ್ಯಕರ್ತ ದಿಶಾ ರವಿ ಅವರನ್ನು ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದು, ಈ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರು, ಇದು ನೀಚ ಕೃತ್ಯ. ಇದು ಅನಪೇಕ್ಷಿತ ಕಿರುಕುಳ ಬೆದರಿಕೆ.. ದಿಶಾ ರವಿ ಬಂಧನವನ್ನು ದೌರ್ಜನ್ಯದ ಕ್ರಮ ಎಂದು ಬಣ್ಣಿಸಿದ್ದಾರೆ. ಅಲ್ಲದೆ ಇದು ಅನಗತ್ಯ ಕಿರುಕುಳ ಮತ್ತು ಬೆದರಿಕೆ ಎಂದು ಹೇಳಿರುವ ಜೈರಾಮ್ ರಮೇಶ್, ದಿಶಾ ರವಿ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ.
The arrest and the manner of arrest of green activist Disha Ravi shows clearly the intensifying Murder Of Democracy in India. But the young in India cannot be silenced. More power to them!
— Jairam Ramesh (@Jairam_Ramesh) February 15, 2021
ಇದೇ ವಿಚಾರವಾಗಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಮುಖಂಡ ಮತ್ತು ಸಂಸದ ಶಶಿ ತರೂರ್ ಸಹ ದಿಶಾ ಬಂಧನವನ್ನು ಖಂಡಿಸಿದ್ದು, ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರು ಜೈಲಲ್ಲಿದ್ದಾರೆ. ಭಯೋತ್ಪಾದನೆ ಆರೋಪ ಹೊತ್ತಿರುವವರು ಜಾಮೀನಿನ ಮೇಲೆ ಹೊರಗಿದ್ದಾರೆ. ದಿಶಾರವಿ ಅವರ ಬಂಧನವು ಭಾರತದ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಶ್ನಿಸುತ್ತಿದೆ. ರಾಜಕೀಯ ಭಿನ್ನಾಭಿಪ್ರಾಯದ ಮೇಲಿನ ದೌರ್ಜನ್ಯದ ಇತ್ತೀಚಿನ ಉದಾಹರಣೆ. ಇದು ರೈತರ ಬೃಹತ್ ಪ್ರತಿಭಟನೆಯನ್ನು ಹತ್ತಿಕ್ಕುವ ಪ್ರಯತ್ನ ಎಂದು ಡೈಲಿ ಟೆಲಿಗ್ರಾಫ್ ಪತ್ರಿಕೆಯ ವರದಿಯನ್ನು ಟ್ವೀಟ್ ನಲ್ಲಿ ಉಲ್ಲೇಖಿಸಿದ್ದಾರೆ.
DishaRavi's arrest is the latest escalation in India’s crackdown on free expression&political dissent as it seeks2stifle the farmers’ mass protests, says the @dailytelegraph UK. Doesn’t GoI care about the damage it’s doing to its own global image? https://t.co/TILH9XKYkg
— Shashi Tharoor (@ShashiTharoor) February 14, 2021
ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಅವರೂ ಕೂಡ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, 'ದಿಶಾ ರವಿ ಬಂಧನವನ್ನು ನಾನು ಬಲವಾಗಿ ಖಂಡಿಸುತ್ತೇನೆ. ಸರ್ವಾಧಿಕಾರಿ ಧೋರಣೆಯ ಆಡಳಿತದ ವಿರುದ್ಧ ಪ್ರತಿಭಟಿಸಲು ಎಲ್ಲಾ ವಿದ್ಯಾರ್ಥಿಗಳು ಹಾಗು ಯುವ ಜನತೆ ಒಗ್ಗೂಡಿ ಧ್ವನಿ ಎತ್ತಬೇಕೆಂದು ಕೋರುತ್ತೇನೆ' ಎಂದು ಟ್ವೀಟ್ ನಲ್ಲಿ ಮನವಿ ಮಾಡಿದರು. ಸಿಪಿಎಂ ಮುಖಂಡ ಸೀತಾರಾಮ್ ಯೆಚೂರಿ ಸಹ ಸ್ವರ ಎತ್ತಿದ್ದು, 'ಮೋದಿ ಆಡಳಿತವು ರೈತರ ಮೊಮ್ಮಗಳನ್ನು ದೇಶದ್ರೋಹದ ಆರೋಪದಡಿಯಲ್ಲಿ ಬಂಧಿಸುವ ಮೂಲಕ ಹೋರಾಟವನ್ನು ದುರ್ಬಲಗೊಳಿಸಬಹುದು ಎಂದು ಅಂದುಕೊಂಡಿದ್ದಾರೆ. ಆದರೆ ವಾಸ್ತವವಾಗಿ, ಇದರಿಂದ ಯುವಜನತೆ ಮತ್ತಷ್ಟು ಜಾಗೃತರಾಗಲಿದ್ದು, ಪ್ರಜಾಪ್ರಭುತ್ವ ಹೋರಾಟವನ್ನು ಬಲಗೊಳಿಸಲಿದ್ದಾರೆ' ಎಂದು ಹೇಳಿದರು.
I strongly condemn the arrest of Disha Ravi and urge all students and youth to raise their voices to protest against the authoritarian regime#ReleaseDishaRavi
— P. Chidambaram (@PChidambaram_IN) February 14, 2021
The Indian state must be standing on very shaky foundations if Disha Ravi, a 22 year old student of Mount Carmel college and a climate activist, has become a threat to the nation
— P. Chidambaram (@PChidambaram_IN) February 14, 2021
ಕೇಂದ್ರ ಮಾಜಿ ಸಚಿವ ಆನಂದ್ ಶರ್ಮಾ ಕೂಡಾ 'ದಿಶಾ ರವಿ ಅವರ ಬಂಧನ ಅತ್ಯಂತ ದುರದೃಷ್ಟಕರ ಹಾಗೂ ಆಘಾತಕಾರಿ ಎಂದು ಹೇಳಿದ್ದಾರೆ. ಯಾವುದೇ ಕ್ರಿಮಿನಲ್ ಹಿನ್ನೆಲೆ ಇಲ್ಲದ ಯುವತಿಯ ಬಂಧನ ಹಾಗೂ ವಿಚಾರಣೆಯನ್ನು ಸಮರ್ಥಿಸಲಾಗುವುದಿಲ್ಲ' ಎಂದು ಹೇಳಿದ್ದಾರೆ.
ಭಾರಿ ವಾದ-ವಿವಾದಗಳ ನಡುವೆಯೂ ದಿಶಾ ರವಿ ಬಂಧನವನ್ನು ಬಿಜೆಪಿ ನಾಯಕರು ಸಮರ್ಥಿಸಿಕೊಂಡಿದ್ದು, ಈ ಕುರಿತಂತೆ ಟ್ವೀಟ್ ಮಾಡಿರುವ ಬಿಜೆಪಿ ವಕ್ತಾರ ಗೌರವ್ ಭಾಟಿಯಾ, 'ಕೆಲವು ದೇಶದ್ರೋಹಿಗಳು ಪೊಲೀಸ್ ಕ್ರಮವನ್ನು ಟೀಕಿಸುತ್ತಿದ್ದಾರೆ. ದೆಹಲಿ ಪೊಲೀಸರ ಪ್ರಯತ್ನವನ್ನು ಇಡೀ ದೇಶ ಶ್ಲಾಘಿಸುತ್ತಿದೆ. 130 ಕೋಟಿ ಜನರಿರುವ ದೇಶದಲ್ಲಿ, ಕೆಲವು ದೇಶದ್ರೋಹಿಗಳನ್ನು ಹೊರತುಪಡಿಸಿ ಪ್ರತಿಯೊಬ್ಬ ಭಾರತೀಯರು ಈ ಕ್ರಮವನ್ನು ಸ್ವಾಗತಿಸುತ್ತಾರೆ ಎಂದು ಹೇಳಿದ್ದಾರೆ.
ಇದೇ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ಸಂಸದ ಪಿಸಿ ಮೋಹನ್ ಅವರು, ಬುರ್ಹಾನ್ ವಾನಿ, ಅಜ್ಮಲ್ ಕಸಬ್ ಕೂಡ 21 ವರ್ಷದವರೇ.. ವಯಸ್ಸು ಕೇವಲ ಸಂಖ್ಯೆ ಮಾತ್ರ. ಅಪರಾಧಕ್ಕೂ ವಯಸ್ಸಿಗೂ ಸಂಬಂಧವಿಲ್ಲ.. ತಪ್ಪು ಯಾರು ಮಾಡಿದರೂ ತಪ್ಪೇ... ಕಾನೂನು ತನ್ನ ಕಾರ್ಯ ನಿರ್ವಹಿಸಲಿದೆ ಎಂದು ಟ್ವೀಟ್ ಮಾಡಿದ್ದಾರೆ. ಅಂತೆಯೇ ಸಂಸದೆ ಶೋಭಾ ಕರಂದ್ಲಾಜೆ ಅವರೂ ಕೂಡ ಈ ಕುರಿತಂತೆ ಟ್ವೀಟ್ ಮಾಡಿದ್ದು, ತನ್ನದೇ ದೇಶದ ವಿರುದ್ಧ ಪಿತೂರಿ ನಡೆಸಿದ್ದಕ್ಕಾಗಿ ದಿಶಾ ರವಿಯನ್ನು ಬಂಧಿಸಲಾಗಿದೆ. ರೈತರ ಹೋರಾಟಕ್ಕೂ, ಪರಿಸರ ಸಂಬಂಧಿತ ಅಭಿಯಾನಗಳಿಗೂ ಈ ಬಂಧನಕ್ಕೂ ಯಾವುದೇ ಸಂಬಂಧವಿಲ್ಲ. ದಿಶಾ ಭಾರತದ ವಿರುದ್ಧದ ಜಾಗತಿಕ ಅಭಿಯಾನದ ಒಂದು ಭಾಗವಾಗಿದ್ದರು. ಸುಳ್ಳು ಹೇಳುವುದನ್ನು ನಿಲ್ಲಿಸಿ ಮತ್ತು ತಪ್ಪುದಾರಿಗೆಳೆಯಬೇಡಿ ಎಂದು ಟ್ವೀಟ್ ಮಾಡಿದ್ದಾರೆ.
Burhan Wani was a 21-year-old.
— P C Mohan (@PCMohanMP) February 14, 2021
Ajmal Kasab was a 21-year-old.
Age is just a number!
No one is above the law.
Law will take its own course.
A Crime is a crime is a crime is a crime.#DishaRavi pic.twitter.com/m6eRwAnMuf
Dear, you seem to be ill informed!
— Shobha Karandlaje (@ShobhaBJP) February 15, 2021
She was arrested for conspiring against her own country.
This has nothing to do with #FarmersProtests or the environmental related campaigns.
She was a part of global campaigns against India.
STOP LYING & MISLEADING THE MASSES! https://t.co/MxDiv8Q0qc
A criminal is a criminal, gender and age are immaterial if not a juvenile. Just for your knowledge Kasab was 21 when he attacked Mumbai.
— Gaurav Bhatia गौरव भाटिया
Supporting "farmers" is not a crime but conspiring against India and inciting others surely is. https://t.co/7irLZ2xxP3