ಟೂಲ್ ಕಿಟ್ ಕೇಸು: ದಿಶಾ ರವಿ ಬಂಧನ ನಂತರ ನಿಕಿತಾ ಜಾಕೊಬ್, ಶಂತನು ವಿರುದ್ಧ ಜಾಮೀನುರಹಿತ ವಾರಂಟ್ ಹೊರಡಿಸಿದ ದೆಹಲಿ ಪೊಲೀಸರು 

ಅಂತಾರಾಷ್ಟ್ರೀಯ ಪರಿಸರವಾದಿ ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರು ಮೂಲದ ದಿಶಾ ರವಿ(21ವ)ಯನ್ನು ಬಂಧಿಸಿದ ನಂತರ ಮುಂಬೈ ಹೈಕೋರ್ಟ್ ನ ವಕೀಲರಾದ ನಿಕಿತಾ ಜಾಕೊಬ್ ಮತ್ತು ಶಂತನು ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ನ್ನು ದೆಹಲಿ ಪೊಲೀಸರು ಸೋಮವಾರ ಪಡೆದಿದ್ದಾರೆ.

Published: 15th February 2021 12:52 PM  |   Last Updated: 15th February 2021 01:34 PM   |  A+A-


Representational image

ದೆಹಲಿ ಪೊಲೀಸ್ ವಾಹನದ ಸಾಂದರ್ಭಿಕ ಚಿತ್ರ

Posted By : Sumana Upadhyaya
Source : The New Indian Express

ಬೆಂಗಳೂರು/ನವದೆಹಲಿ: ಅಂತಾರಾಷ್ಟ್ರೀಯ ಪರಿಸರವಾದಿ ಗ್ರೇಟಾ ಥನ್ಬರ್ಗ್ ಟೂಲ್ ಕಿಟ್ ವಿವಾದಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬೆಂಗಳೂರು ಮೂಲದ ದಿಶಾ ರವಿ(21ವ)ಯನ್ನು ಬಂಧಿಸಿದ ನಂತರ ಮುಂಬೈ ಹೈಕೋರ್ಟ್ ನ ವಕೀಲರಾದ ನಿಕಿತಾ ಜಾಕೊಬ್ ಮತ್ತು ಶಂತನು ವಿರುದ್ಧ ಜಾಮೀನುರಹಿತ ಬಂಧನ ವಾರಂಟ್ ನ್ನು ದೆಹಲಿ ಪೊಲೀಸರು ಸೋಮವಾರ ಪಡೆದಿದ್ದಾರೆ.

ಸ್ವೀಡನ್ ಮೂಲದ ಗ್ರೆಟಾ ಥನ್ಬರ್ಗ್ ದೆಹಲಿಯಲ್ಲಿ ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಶೇರ್ ಮಾಡಿದ್ದ ಟೂಲ್ ಕಿಟ್ ನ್ನು ಸೃಷ್ಟಿಸುವಲ್ಲಿ ವಕೀಲರಾಗಿದ್ದ ಜಾಕೊಬ್ ಮತ್ತು ಶಂತನು ಭಾಗಿಯಾಗಿದ್ದರು ಎಂದು ಮೂಲಗಳಿಂದ ಮಾಹಿತಿ ಸಿಕ್ಕಿರುವುದಾಗಿ ದೆಹಲಿ ಪೊಲೀಸರು ತಿಳಿಸಿದ್ದಾರೆ.

ದಾಖಲೆಯ ರಚನೆ ಮತ್ತು ಅದನ್ನು ಹೊರಹಾಕುವಲ್ಲಿ ಟೂಲ್ ಕಿಟ್ ಗೂಗಲ್ ದಾಖಲೆಯನ್ನು ಸೃಷ್ಟಿಸಿ ಅದನ್ನು ಸಂಕಲನ ಮಾಡುವಲ್ಲಿ ದಿಶಾ ಪ್ರಮುಖ ಪಿತೂರಿಕೋರರಾಗಿದ್ದಾರೆ ಎಂದು ಪೊಲೀಸರು ಆರೋಪಿಸುತ್ತಾರೆ. ಟೂಲ್ ಕಿಟ್ ಪ್ರಶ್ನೆಯನ್ನು ಖಲಿಸ್ತಾನ ಪರ ಸಂಘಟನೆ ತಯಾರಿಸಿದ್ದು ಭಾರತ ಸರ್ಕಾರ ವಿರುದ್ಧ ಅಪಪ್ರಚಾರ ನಡೆಸಲು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂಬ ಸಂಘಟನೆ ಇದರ ಹಿಂದಿನ ಪ್ರಮುಖ ಸೂತ್ರಧಾರನಾಗಿದೆ ಎಂದು ಪೊಲೀಸರು ಆರೋಪಿಸಿದ್ದಾರೆ.

ಈ ಮಧ್ಯೆ, ಕೆಲವು ವಿದ್ಯಾರ್ಥಿ ಸಂಘಟನೆಗಳು ಮತ್ತು ಕಾರ್ಯಕರ್ತರ ಗುಂಪು ಬೆಂಗಳೂರಿನಲ್ಲಿ ಇಂದು ಸಂಜೆ ದಿಶಾ ಬಂಧನ ವಿರುದ್ಧ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.

ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಅಡ್ವೊಕೇಟ್ ವಿನಯ್ ಕೆ ಶ್ರೀನಿವಾಸ್, ದೆಹಲಿ ಪೊಲೀಸರು ದಿಶಾರನ್ನು ಅಕ್ರಮವಾಗಿ ಬಂಧಿಸಿದ್ದಾರೆ. ಈ ಬಗ್ಗೆ ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿರಲಿಲ್ಲವೇಕೆ, ಬೆಂಗಳೂರಿನಲ್ಲಿ ಅವರ ಪರ ವಕೀಲರ ಮೂಲಕ ಮಾತನಾಡಲು ಬಿಡಲಿಲ್ಲವೇಕೆ ಅಥವಾ ಸ್ಥಳೀಯ ನ್ಯಾಯಾಲಯ ಮುಂದೆ ಹಾಜರುಪಡಿಸಲಿಲ್ಲವೇಕೆ, ಆಕೆಯ ಬಂಧನ ಬಗ್ಗೆ ಕುಟುಂಬದವರಿಗೆ ಮೊದಲೇ ವಿಷಯ ತಿಳಿಸಲಿಲ್ಲವೇಕೆ ಎಂದು ಕೇಳಿದ್ದಾರೆ.

ನಿಕಿತಾ ಜಾಕೊಬ್ ಮತ್ತು ಶಂತನು ವಿರುದ್ಧ ಬಂಧನ ವಾರಂಟ್ ಏಕೆ?: ತನಿಖೆಯಿಂದ ಥನ್ಬರ್ಗ್ ಹಂಚಿಕೊಂಡಿದ್ದ ಟೂಲ್ ಕಿಟ್ ನ್ನು ಆವಿಷ್ಕರಿಸಿದ್ದ ಮೊ ದಾಲಿವಾಲ್ ಎಂಬ ಸಂಘಟನೆ ನಿಕಿತಾ ಜಾಕೊಬ್ ರನ್ನು ಸಂಪರ್ಕಿಸಿ ಮೊನ್ನೆ ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ರೈತರ ಟ್ರ್ಯಾಕ್ಟರ್ ರ್ಯಾಲಿಗೆ ಮುನ್ನ ಟ್ವೀಟ್ ಮಾಡಿ ವಿವಾದ ಸೃಷ್ಟಿಸುವಂತೆ ಸೂಚಿಸಿತ್ತು ಎಂದು ತಿಳಿದುಬಂದಿದೆ. ಈ ಸಂಘಟನೆ ಖಲಿಸ್ತಾನಿ ಗುಂಪು ಆಗಿದೆ ಎಂದು ದೆಹಲಿ ಪೊಲೀಸರು ಹೇಳುತ್ತಾರೆ.

ಗಣರಾಜ್ಯೋತ್ಸವ ದಿನದ ಸಮಾರಂಭಕ್ಕೆ ಮುನ್ನ ಜೂಮ್ ಮೀಟಿಂಗ್ ನಡೆದಿದ್ದು ಅದರಲ್ಲಿ ಮೊ ದಲಿವಾಲ್, ನಿಕಿತಾ, ದಿಶಾ ಮತ್ತು ಇತರರು ಭಾಗಿಯಾಗಿದ್ದರು. ನಾಲ್ಕು ದಿನಗಳ ಹಿಂದೆ ನಿಕಿತಾ ಜಾಕೊಬ್ ರ ಮನೆಗೆ ವಿಶೇಷ ತಂಡ ಹೋಗಿ ಆಕೆಯ ಎಲೆಕ್ಟ್ರಾನಿಕ್ ಗ್ಯಾಜೆಟ್ ಗಳನ್ನು ತನಿಖೆ ಮಾಡಲಾಗಿತ್ತು. ಮತ್ತೊಮ್ಮೆ ಆಕೆಯ ಮನೆಗೆ ಹೋಗಿ ದೆಹಲಿ ಪೊಲೀಸರು ತನಿಖೆ ನಡೆಸುವುದರಲ್ಲಿತ್ತು, ಆದರೆ ಈಗ ಪೊಲೀಸರ ಕೈಗೆ ಸಿಗುತ್ತಿಲ್ಲ. 

ತನ್ನ ವಿರುದ್ಧ ಬಂಧನ ವಾರಂಟ್ ಹೊರಡಿಸಿರುವುದು ಗೊತ್ತಾದ ಕೂಡಲೇ ನಿಕಿತಾ ಜಾಕೊಬ್ ಮುಂಬೈ ಹೈಕೋರ್ಟ್ ನಲ್ಲಿ ವರ್ಗಾವಣೆ ಜಾಮೀನು ಅರ್ಜಿಯನ್ನು ಸಲ್ಲಿಸಿದ್ದು ಅದರ ವಿಚಾರಣೆ ನಾಳೆ ನಡೆಯಲಿದೆ ಎಂದು ತಿಳಿದುಬಂದಿದೆ. 

#Toolkit case. After #DishaRavi Warrant for arrest of lawyer activist #nikitajacob #Shantanu. #DelhiPolice #GretaThunberg @XpressBengaluru @gsvasu_TNIE @santwana99

 

Stay up to date on all the latest ರಾಷ್ಟ್ರೀಯ news
Poll
The grand Central Vista project is estimated to cost `20,000 crore

ಕೋವಿಡ್ ಬಿಕ್ಕಟ್ಟಿನ ದೃಷ್ಟಿಯಿಂದ ಪ್ರಧಾನಿ ಮೋದಿ ಸೆಂಟ್ರಲ್ ವಿಸ್ಟಾ ಯೋಜನೆಯನ್ನು ತಡೆಹಿಡಿಯಬೇಕೇ?


Result
ಹೌದು
ಬೇಡ
flipboard facebook twitter whatsapp