ಜೂಮ್ ಸಂಸ್ಥೆಗೆ ನೊಟೀಸು: ಟೂಲ್ ಕಿಟ್ ಮೀಟಿಂಗ್ ಲ್ಲಿ ಭಾಗವಹಿಸಿದವರ ವಿವರ ಕೇಳಿದ ದೆಹಲಿ ಪೊಲೀಸರು

ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ಟ್ರಾಕ್ಟರ್ ರ್ಯಾಲಿ, ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಲಾಗಿದ್ದ ಟೂಲ್ ಕಿಟ್ ನ್ನು ಖಲಿಸ್ತಾನಿ ಗುಂಪಿನ ಪರವಾಗಿರುವವರು ತಯಾರು ಮಾಡಿದ್ದು ಎಂದು ಹೇಳಲಾಗಿದ್ದು, ಇದಕ್ಕೂ ಮುನ್ನ ವಿಡಿಯೊ ಕಾನ್ಫರೆನ್ಸ್ ಸಂಸ್ಥೆ ಜೂಮ್ ಮೂಲಕ ಜನವರಿ 11 ರಂದು ಮೀಟಿಂಗ್ ನಡೆಸಿದ್ದ ವಿಚಾರ ಸಂಬಂಧವಾಗಿ ದೆಹಲಿ ಪೊಲೀಸರು

Published: 16th February 2021 01:00 PM  |   Last Updated: 16th February 2021 01:26 PM   |  A+A-


Representational image

ಸಾಂದರ್ಭಿಕ ಚಿತ್ರ

Posted By : Sumana Upadhyaya
Source : PTI

ನವದೆಹಲಿ: ದೆಹಲಿಯಲ್ಲಿ ಗಣರಾಜ್ಯೋತ್ಸವ ದಿನ ಟ್ರಾಕ್ಟರ್ ರ್ಯಾಲಿ, ರೈತರ ಪ್ರತಿಭಟನೆಯನ್ನು ಬೆಂಬಲಿಸಿ ಸೋಷಿಯಲ್ ಮೀಡಿಯಾದಲ್ಲಿ ಟ್ವೀಟ್ ಮಾಡಲಾಗಿದ್ದ ಟೂಲ್ ಕಿಟ್ ನ್ನು ಖಲಿಸ್ತಾನಿ ಗುಂಪಿನ ಪರವಾಗಿರುವವರು ತಯಾರು ಮಾಡಿದ್ದು ಎಂದು ಹೇಳಲಾಗಿದ್ದು, ಇದಕ್ಕೂ ಮುನ್ನ ವಿಡಿಯೊ ಕಾನ್ಫರೆನ್ಸ್ ಸಂಸ್ಥೆ ಜೂಮ್ ಮೂಲಕ ಜನವರಿ 11 ರಂದು ಮೀಟಿಂಗ್ ನಡೆಸಿದ್ದ ವಿಚಾರ ಸಂಬಂಧವಾಗಿ ದೆಹಲಿ ಪೊಲೀಸರು ಜೂಮ್ ಸಂಸ್ಥೆಗೆ ವಿವರ ಕೇಳಿದ್ದಾರೆ.

ಈ ಸಂಬಂಧ ಜೂಮ್ ಸಂಸ್ಥೆಗೆ ಪತ್ರ ಬರೆದಿರುವ ದೆಹಲಿ ಪೊಲೀಸರು ಜನವರಿ 11ರಂದು ನಡೆಸಲಾಗಿದ್ದ ವರ್ಚುವಲ್ ಮೀಟಿಂಗ್ ನಲ್ಲಿ ಯಾರ್ಯಾರು ಭಾಗಿಯಾಗಿದ್ದರು ಎಂದು ವಿವರ ಕೇಳಿದ್ದಾರೆ.

ನಿನ್ನೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ದೆಹಲಿ ಸೈಬರ್ ಪೊಲೀಸ್ ಜಂಟಿ ಆಯುಕ್ತ ಪ್ರೇಮ್ ನಾಥ್, ಶಂತನು ಇಮೇಲ್ ಅಕೌಂಟ್ ತಯಾರಿಸಿದ್ದು ಅವರೇ ಗೂಗಲ್ ದಾಖಲೆಯ ಮಾಲಿಕ ಎಂದು ಗೊತ್ತಾಗಿದೆ ಎಂದರು.

ಖಲಿಸ್ತಾನ ಪರ ಗುಂಪು ಪೊಯೆಟಿಕ್ ಜಸ್ಟೀಸ್ ಫೌಂಡೇಶನ್(ಪಿಜೆಎಫ್) ಸ್ಥಾಪಕ ಮೊ ದಲಿವಾಲ್, ಕೆನಡಾ ಮೂಲದ ಮಹಿಳೆ ಪುನಿತ್ ಎಂಬಾಕೆ ಮೂಲಕ ನಿಕಿತಾ ಜಾಕೊಬ್ ಮತ್ತು ಶಂತನುವನ್ನು ಸಂಪರ್ಕಿಸಿದ್ದನು. ನಿಕಿತಾ ಮತ್ತು ಶಂತನು ಜನವರಿ 11ರಂದು ಜೂಮ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದು ಅದರಲ್ಲಿ 'ಗ್ಲೋಬಲ್ ಫಾರ್ಮರ್ ಸ್ಟ್ರೈಕ್' ಮತ್ತು ಗ್ಲೋಬಲ್ ಡೆ ಆಫ್ ಆಕ್ಷನ್ ಶೀರ್ಷಿಕೆಯಲ್ಲಿ ಟೂಲ್ ಕಿಟ್ ನ್ನು ರಚಿಸಲು ನಿರ್ಧರಿಸಿದ್ದರು ಎಂದು ಪ್ರೇಮ್ ನಾಥ್ ವಿವರಿಸಿದ್ದಾರೆ. 

ಮುಂಬೈ ಮೂಲದ ವಕೀಲೆ ನಿಕಿತಾ ಜಾಕೊಬ್ ಮತ್ತು ಪುಣೆಯ ಎಂಜಿನಿಯರ್ ಶಂತನು ಜೂಮ್ ಮೀಟಿಂಗ್ ನಲ್ಲಿ ಭಾಗಿಯಾಗಿದ್ದ ಸುಮಾರು 70 ಮಂದಿಯಲ್ಲಿ ಒಳಗೊಂಡವರಾಗಿದ್ದಾರೆ. ಗಣರಾಜ್ಯೋತ್ಸವ ದಿನ ದೆಹಲಿಯಲ್ಲಿ ನಡೆದಿದ್ದ ಹಿಂಸಾಚಾರದಲ್ಲಿ ಸುಮಾರು 500 ಪೊಲೀಸ್ ಸಿಬ್ಬಂದಿ ಗಾಯಗೊಂಡು ಓರ್ವ ಪ್ರತಿಭಟನಾಕಾರ ಮೃತಪಟ್ಟಿದ್ದರು.

Stay up to date on all the latest ರಾಷ್ಟ್ರೀಯ news
Poll
Mamata1

ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಟಿಎಂಸಿ ಪಕ್ಷಕ್ಕೆ ಗೆಲುವು: ಮಮತಾ ಬ್ಯಾನರ್ಜಿ ಈಗ ಭಾರತದ ಪ್ರಬಲ ಪ್ರತಿಪಕ್ಷ ನಾಯಕಿಯೇ?


Result
ಹೌದು, ನಿರ್ವಿವಾದವಾಗಿ.
ಇಲ್ಲ, ಪ್ರಾದೇಶಿಕ ನಾಯಕಿ ಅಷ್ಟೇ.
flipboard facebook twitter whatsapp