ಹರಿಯಾಣ ಬಿಜೆಪಿ ನಾಯಕಿಯ ಮನೆಯಲ್ಲಿದ್ದ ಚಿನ್ನ, ರಿವಾಲ್ವರ್, 10 ಲಕ್ಷ ರೂ. ನಗದು ಕಳ್ಳತನ

ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರ ಮನೆಯಲ್ಲಿದ್ದ ಚಿನ್ನಾಭರಣ, ಪರವಾನಗಿ ಪಡೆದ ರಿವಾಲ್ವರ್, 10 ಲಕ್ಷ ರೂ. ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

Published: 16th February 2021 04:13 PM  |   Last Updated: 16th February 2021 04:13 PM   |  A+A-


sonali

ಸೋನಾಲಿ ಫೋಗಟ್

Posted By : Lingaraj Badiger
Source : PTI

ಹಿಸಾರ್: ಹರಿಯಾಣದ ಬಿಜೆಪಿ ನಾಯಕಿ ಸೋನಾಲಿ ಫೋಗಾಟ್ ಅವರ ಮನೆಯಲ್ಲಿದ್ದ ಚಿನ್ನಾಭರಣ, ಪರವಾನಗಿ ಪಡೆದ ರಿವಾಲ್ವರ್, 10 ಲಕ್ಷ ರೂ. ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ತಾನು ಚಂಡೀಗಢದಲ್ಲಿದ್ದಾಗ ಹಿಸಾರ್ ನಲ್ಲಿರುವ ತನ್ನ ಮನೆಯಲ್ಲಿ ಕಳ್ಳತನ ನಡೆದಿದೆ ಎಂದು ಫೋಗಾಟ್ ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಕಳ್ಳರು ಸಿಸಿಟಿವಿ ದೃಶ್ಯಗಳು ಸೇರೆಯಾಗಿದ್ದ ಡಿಜಿಟಲ್ ವಿಡಿಯೋ ರೆಕಾರ್ಡರ್(ಡಿವಿಆರ್) ಅನ್ನು ತೆಗೆದುಕೊಂಡು ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾನು ಫೆಬ್ರವರಿ 9ರಂದು ಚಂಡೀಗಢಕ್ಕೆ ತೆರಳಿದ್ದೆ, ವಾಪಸ್ ಫೆಬ್ರವರಿ 15ರಂದು ಬಂದು ನೋಡಿದಾಗ ಮನೆಯ ಕೀ ಹೊಡೆಯಲಾಗಿತ್ತು ಮತ್ತು ಮನೆಯಲ್ಲಿದ್ದ ಚಿನ್ನ ಮತ್ತು ಬೆಳ್ಳಿ ಪಾತ್ರೆ, ಬೆಳ್ಳಿ ಮಡಕೆ, 10 ಲಕ್ಷ ರೂ. ನಗದು, ಆಭರಣ, 22 ಬೋರ್ ಪರವಾನಗಿ ಪಡೆದ ಪಿಸ್ತೂಲ್ ಹಾಗೂ ಎಂಟು ಕಾರ್ಟ್ರಿಜ್ ಗಳುು ಕಳ್ಳತನವಾಗಿವೆ ಎಂದು ಬಿಜೆಪಿ ನಾಯಕಿ ದೂರಿನಲ್ಲಿ ವಿವರಿಸಿದ್ದಾರೆ.

ಕಳ್ಳತನ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಎಚ್‌ಟಿಎಂ ಸ್ಟೇಷನ್ ಹೌಸ್ ಆಫೀಸರ್(ಎಸ್‌ಎಚ್‌ಒ) ಸುಖ್ಜಿತ್ ಅವರು ತಿಳಿಸಿದ್ದಾರೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp