ಪ್ಯಾಂಗಾಂಗ್ ತ್ಸೋ ನಲ್ಲಿ ಸೇನಾಪಡೆಯ ಹಿಂಪಡೆತ: ಆರ್ಟಿಲರಿ ಗನ್, ಬಂಕರ್ ಗಳನ್ನು ಕೆಳಗಿಳಿಸಿ ಕೊಂಡೊಯ್ದ ಪಿಎಲ್ಎ

ಲಡಾಖ್ ಘರ್ಷಣೆಯ ನಂತರ ಪ್ಯಾಂಗಾಂಗ್ ತ್ಸೋ ಉತ್ತರ ತೀರದಲ್ಲಿ ಚೀನಾ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. 

Published: 16th February 2021 01:30 AM  |   Last Updated: 16th February 2021 01:00 PM   |  A+A-


Indian and Chinese troops and tanks disengaging from the banks of Pangong lake area in Eastern Ladakh Thursday Feb. 11 2021.

ಗಡಿ ಭಾಗದಲ್ಲಿ ಭಾರತ-ಚೀನಾ ಸೇನಾಧಿಕಾರಿಗಳು

Posted By : Srinivas Rao BV
Source : The New Indian Express

ನವದೆಹಲಿ: ಲಡಾಖ್ ಘರ್ಷಣೆಯ ನಂತರ ಪ್ಯಾಂಗಾಂಗ್ ತ್ಸೋ ಉತ್ತರ ತೀರದಲ್ಲಿ ಚೀನಾ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಚುರುಕುಗೊಳಿಸಿದೆ. 

ಸೇನಾ ಹಿಂತೆಗೆತದ ಭಾಗವಾಗಿ ಆರ್ಟಿಲರಿ ಗನ್ ಗಳನ್ನು ಹಿಂತೆಗೆದುಕೊಂಡಿದ್ದು ಬಂಕರ್ ಗಳನ್ನು ಚೀನಾ ಸೇನೆ ಗುಡ್ಡಗಳಿಂದ ಕೆಳಗೆ ಇಳಿಸಿದೆ. 

ಫೆ.20 ರ ವೇಳೆಗೆ ಸೇನಾ ಹಿಂತೆಗೆತ ಪ್ರಕ್ರಿಯೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಭಾರತೀಯ ಸೇನಾ ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಪಿಎಲ್ಎ ಸೈನಿಕರು ಬಂಕರ್ ಗಳನ್ನು ಕೆಳಗೆ ಇಳಿಸಿ, ಶೆಡ್ ಗಳನ್ನು ಹೊರಗೆಳೆದಿದ್ದಾರೆ. ಫಿಂಗರ್ 8 ನಿಂದ ಆರ್ಟಿಲರಿ ಗನ್ ಗಳನ್ನು ಪೂರ್ವಕ್ಕೆ ಕೊಂಡೊಯ್ಯಲಾಗಿದೆ. 

ದಕ್ಷಿಣ ತೀರದಲ್ಲಿ ಸ್ಥಾಪಿಸಲಾಗಿದ್ದ ಪೋಸ್ಟ್ ಗಳನ್ನೂ ಸಹ ತೆಗೆದು ಹಾಕಲಾಗಿದ್ದು ಟ್ಯಾಂಕ್ ಗಳು ಇನ್ಫಾಂಟ್ರಿ ಯುದ್ಧ ವಾಹನಗಳನ್ನೂ ಚೀನಾ ಹಿಂದಕ್ಕೆ ಕರೆಸಿಕೊಂಡಿದೆ. 

ಹಂತ ಹಂತವಾಗಿ ಸೇನೆ ಹಿಂತೆಗೆತ ಪ್ರಕ್ರಿಯೆ ಜಾರಿಗೊಳ್ಳುತ್ತಿದ್ದು, ಸೇನಾ ವಾಹನಗಳು, ಆರ್ಟಿಲರಿ ಹಾಗೂ ಇನ್ಫಾಂಟ್ರಿ ಸೈನಿಕರು ಕ್ರಮವಾಗಿ ಹಿಂದೆ ಸರಿಯಲಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp