ಮಧ್ಯ ಪ್ರದೇಶದ ಸಿಧಿಯಲ್ಲಿ ಬಸ್ ಅಪಘಾತ: ಸಾವಿನ ಸಂಖ್ಯೆ 51ಕ್ಕೆ ಏರಿಕೆ

ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತ ಸ್ಥಳದಲ್ಲಿ ಬುಧವಾರ ಬೆಳಗ್ಗೆ ಮತ್ತೆ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದರೊಂದಿಗೆ ಮಂಗಳವಾರ ಸಂಭವಿಸಿದ...

Published: 17th February 2021 04:03 PM  |   Last Updated: 17th February 2021 04:03 PM   |  A+A-


BUS-mp

ಕಾಲುವೆಗೆ ಬಿದ್ದ ಬಸ್

Posted By : Lingaraj Badiger
Source : UNI

ಸಿಧಿ: ಮಧ್ಯ ಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದ ಭೀಕರ ಅಪಘಾತ ಸ್ಥಳದಲ್ಲಿ ಬುಧವಾರ ಬೆಳಗ್ಗೆ ಮತ್ತೆ ನಾಲ್ವರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ಇದರೊಂದಿಗೆ ಮಂಗಳವಾರ ಸಂಭವಿಸಿದ ಬಸ್ ಅಪಘಾತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 51ಕ್ಕೆ ಏರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಿನ್ನೆ ತಡರಾತ್ರಿ ಸ್ಥಗಿತಗೊಂಡಿದ್ದ ರಕ್ಷಣಾ ಮತ್ತು ಪರಿಹಾರ ಕಾರ್ಯ ಬೆಳಗ್ಗೆ ಮತ್ತೆ ಆರಂಭವಾಯಿತು. ಘಟನಾ ಸ್ಥಳದಿಂದ ಸ್ವಲ್ಪ ದೂರದಲ್ಲಿ ಕೊಚ್ಚಿಹೋಗಿದ್ದ ಇನ್ನೂ ನಾಲ್ಕು ಮೃತದೇಹಗಳು ಬುಧವಾರ ಪತ್ತೆಯಾಗಿವೆ. ಮಂಗಳವಾರ ಸಂಜೆ ತನಕ, 24 ಪುರುಷರು, 21 ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ 47 ಮೃತದೇಹಗಳನ್ನು ಹೊರತೆಗೆಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ಬುಧವಾರ ಬೆಳಗ್ಗೆ, ಸ್ವಾತಿ (22), ದೀಪು (20), ಖುಷ್ಬೂ (23) ಮತ್ತು ಐದು ತಿಂಗಳ ಮಗು ಶುಭಿ ಎಂದು ಗುರುತಿಸಲಾದ ನಾಲ್ವರ ಮೃತದೇಹಗಳು ಪತ್ತೆಯಾಗಿವೆ. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ ಎನ್ನಲಾಗಿದೆ.

ಮಂಗಳವಾರ ಬೆಳಗ್ಗೆ ಅಧಿಕ ಸಂಖ್ಯೆಯ ಪ್ರಯಾಣಿಕರನ್ನು ತುಂಬಿಕೊಂಡಿದ್ದ ಸಿಧಿಯಿಂದ ಹೊರಟ ಬಸ್ ಸಧ್ನಾಕ್ಕೆ ಹೋಗುವ ಮಾರ್ಗದಲ್ಲಿ ರಸ್ತೆಯೊಂದನ್ನು ಬಿಟ್ಟು ಮತ್ತೊಂದು ರಸ್ತೆಯಲ್ಲಿ ಸಾಗಿ ಸರ್ದಾ ಗ್ರಾಮದ ಬಳಿಯ ನೀರು ಹರಿಯುವ ಕಾಲುವೆಗೆ ಉರುಳಿಬಿದ್ದು ಅಪಘಾತ ಸಂಭವಿಸಿತ್ತು.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp