
ಜೈಶಂಕರ್
ನವದೆಹಲಿ: ಲಸಿಕೆ ರಾಷ್ಟ್ರೀಯತೆಯನ್ನು ಬದಿಗಿರಿಸಿ, ಅಂತಾರಾಷ್ಟ್ರೀಯತನ್ನು ಉತ್ತೇಜಿಸಿ ಎಂದು ವಿಶ್ವಸಮುದಾಯಕ್ಕೆ ಭಾರತ ಕರೆ ನೀಡಿದೆ.
ಮೇಡ್ ಇನ್ ಇಂಡಿಯಾ ಕೋವಿಡ್-19 ಲಸಿಕೆಗಳನ್ನು ವಿಶ್ವದ 25 ರಾಷ್ಟ್ರಗಳಿಗೆ ಲಸಿಕೆ ಕಳಿಸಿಕೊಟ್ಟಿದ್ದು, ಅತಿಯಾದ ಪ್ರಮಾಣಗಳು ಡೋಸೇಜ್ ಗಳನ್ನು ಸಂಗ್ರಹಣೆ ಮಾಡಿಕೊಳ್ಳುವುದು ಸಮಗ್ರ ಆರೋಗ್ಯ ಭದ್ರತೆ ಹಾಗೂ ಪ್ಯಾಂಡಮಿಕ್ ನ ವಿರುದ್ಧದ ಹೋರಾಟದ ಶ್ರಮವನ್ನು ವ್ಯರ್ಥಗೊಳಿಸುತ್ತದೆ ಎಂದು ಅಂತಾರಾಷ್ಟ್ರೀಯ ಸಮುದಾಯಕ್ಕೆ ಭಾರತ ಹೇಳಿದೆ.
ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನುದ್ದೇಶಿಸಿ ಮಾತನಾಡಿರುವ ವಿದೇಶಾಂಗ ಸಚಿವ ಎಸ್ ಜೈಶಂಕರ್, ಜಗತ್ತು ಕೋವಿಡ್-19 ನಿಂದ ಪಾರಾಗುವುದಕ್ಕೆ ಅಂತರಾಷ್ಟ್ರೀಯ ಸಮುದಾಯ ಪರಿಗಣಿಸುವುದಕ್ಕಾಗಿ 9 ಒಂಬತ್ತು ಅಂಶಗಳನ್ನು ಮುಂದಿಟ್ಟಿದ್ದಾರೆ.
ಈ ಪೈಕಿ ಲಸಿಕೆ ರಾಷ್ಟ್ರೀಯತೆಯನ್ನು ಬದಿಗಿರಿಸಿ, ಅಂತಾರಾಷ್ಟ್ರೀಯತೆಯನ್ನು ಉತ್ತೇಜಿಸುವುದು ಪ್ರಮುಖವಾಗಿದ್ದು,
ಅತಿಯಾದ ಪ್ರಮಾಣಗಳು ಡೋಸೇಜ್ ಗಳನ್ನು ಸಂಗ್ರಹಣೆ ಮಾಡಿಕೊಳ್ಳುವುದು ಸಮಗ್ರ ಆರೋಗ್ಯ ಭದ್ರತೆ ಹಾಗೂ ಪ್ಯಾಂಡಮಿಕ್ ನ ವಿರುದ್ಧದ ಹೋರಾಟದ ಶ್ರಮವನ್ನು ವ್ಯರ್ಥಗೊಳಿಸುತ್ತದೆ ಎಂದು ಹೇಳಿದ್ದಾರೆ.
COVID-19 ಸಾಂಕ್ರಾಮಿಕದ ಸಂದರ್ಭದಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸುವುದಕ್ಕೆ 2532 (2020) ನಿರ್ಣಯವನ್ನು ಜಾರಿಗೊಳಿಸುವ ಬಗ್ಗೆ ನಡೆದ ಚರ್ಚೆಯಲ್ಲಿ ಜೈಶಂಕರ್ ಮಾತನಾಡುತ್ತಿದ್ದರು.
ಇದೇ ವೇಳೆ ಕೋವಿಡ್ ನೆಪದಲ್ಲಿ ಯಾವುದೇ ದೇಶಗಳು ತಮ್ಮ ಹಿತಾಸಕ್ತಿಯ ಉದ್ದೇಶಗಳು ಮತ್ತು ಚಟುವಟಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕಾಗಿ ತಪ್ಪು ಮಾಹಿತಿ ಹರಡುವುದನ್ನು ಬಿಡಬೇಕು ಎಂದು ಜೈಶಂಕರ್ ಹೇಳಿದ್ದಾರೆ.
ಲಸಿಕೆ ವಿತರಣೆಗೆ ಸಂಬಂಧಿಸಿದಂತೆ ಜಾಗತಿಕ ಸಮನ್ವಯದ ಕೊರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಜೈಶಂಕರ್, ರೆಡ್ ಕ್ರಾಸ್ ನ ಅಂತಾರಾಷ್ಟ್ರೀಯ ಸಮಿತಿಯ ಅಂದಾಜಿನ ಪ್ರಕಾರ 60 ಮಿಲಿಯನ್ ಗಿಂತಲೂ ಹೆಚ್ಚು ಮಂದಿ ಅಪಾಯದ ಪ್ರದೇಶದಲ್ಲಿದ್ದಾರೆ ಎಂಬುದನ್ನು ಉಲ್ಲೇಖಿಸಿದ್ದಾರೆ.