10 ರಾಷ್ಟ್ರಗಳಿಗೆ ಕೊರೋನಾ ಲಸಿಕೆಯ ಶೇ.75 ಭಾಗ ಪೂರೈಕೆ; 130 ರಾಷ್ಟ್ರಗಳಿಗೆ ಇನ್ನೂ ಸಿಕ್ಕಿಲ್ಲ ಸಿಂಗಲ್ ಡೋಸ್!

ಕೊರೋನಾ ಲಸಿಕೆಯ ಪೂರೈಕೆಯಲ್ಲಿ ಭಾರಿ ಪ್ರಮಾಣದ ಅಸಮತೋಲನ ತಲೆದೋರಿದೆ. 

Published: 18th February 2021 12:29 AM  |   Last Updated: 18th February 2021 01:16 PM   |  A+A-


UN Secretary-General Antonio Guterres

ಆಂಟೋನಿಯೊ ಗುಟೆರೆಸ್

Posted By : Srinivas Rao BV
Source : The New Indian Express

ವಿಶ್ವಸಂಸ್ಥೆ: ಕೊರೋನಾ ಲಸಿಕೆಯ ವಿತರಣೆಯಲ್ಲಿ ಭಾರಿ ಪ್ರಮಾಣದ ಅಸಮತೋಲನ ತಲೆದೋರಿದೆ. 

ಒಟ್ಟಾರೆ ಲಸಿಕೆಯ ಶೇ.75 ರಷ್ಟು ಭಾಗವನ್ನು ಕೇವಲ 10 ರಾಷ್ಟ್ರಗಳು ಪಡೆದುಕೊಂಡಿವೆ. 130 ರಾಷ್ಟ್ರಗಳಿಗೆ ಈ ವರೆಗೂ ಒಂದೇ ಒಂದು ಡೋಸ್ ಕೂಡ ಸಿಕಿಲ್ಲ ಎಂಬ ಮಾಹಿತಿಯನ್ನು ವಿಶ್ವಸಂಸ್ಥೆ ಬಹಿರಂಗಪಡಿಸಿದ್ದು, ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. 

ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ "ಕೋವಿಡ್-19 ಲಸಿಕೆ ವಿತರಣೆಯಲ್ಲಿ ಭಾರಿ ಪ್ರಮಾಣದ ಅಸಮತೋಲನ ಕಂಡುಬಂದಿದೆ. ಒಟ್ಟಾರೆ ಲಸಿಕೆಯ ಶೇ.75 ರಷ್ಟು ಭಾಗವನ್ನು ಕೇವಲ 10 ರಾಷ್ಟ್ರಗಳು ಪಡೆದುಕೊಂಡಿವೆ. 130 ರಾಷ್ಟ್ರಗಳಿಗೆ ಈ ವರೆಗೂ ಒಂದೇ ಒಂದು ಡೋಸ್ ಕೂಡ ಸಿಕಿಲ್ಲ, ಶೇ.75 ರಷ್ಟು ಲಸಿಕೆ ಪಡೆದಿರುವ ರಾಷ್ಟ್ರಗಳು ಪ್ರತಿಯೊಂದು ರಾಷ್ಟ್ರದಲ್ಲಿರುವ ಪ್ರತಿಯೊಬ್ಬ ಪ್ರಜೆಗೂ ಶೀಘ್ರವೇ ಕೋವಿಡ್-19 ಲಸಿಕೆಯನ್ನು ನೀಡುವುದಕ್ಕೆ ಒತ್ತಾಯಿಸುತ್ತಿವೆ ಎಂದು ಹೇಳಿದ್ದಾರೆ. 

ಫೆ.18 ರಂದು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮಹ್ವದ ಉನ್ನತ ಮಟ್ಟಾದ ಸಮಿತಿಯ ಸಭೆ ನಡೆಯಿತು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಸಮಾನವಾಗಿ ಲಸಿಕೆ ಹಂಚಿಕೆ ಮಾಡುವುದು ಜಾಗತಿಕ ಸಮುದಾಯದ ಎದುರು ಇರುವ ನೈತಿಕ ಪರೀಕ್ಷೆ ಎಂದು ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. 

ಇದೇ ವೇಳೆ ಜಾಗತಿಕವಾಗಿ ಲಸಿಕೆ ಯೋಜನೆಯನ್ನು ತುರ್ತಾಗಿ ಜಾರಿಗೊಳಿಸುವಂತೆ ಗುಟೆರೆಸ್ ಕರೆ ನೀಡಿದ್ದು, ಜಾಗತಿಕವಾಗಿ ಸಮಾನವಾಗಿ ಲಸಿಕೆ ಹಂಚಿಕೆಯಾಗುವುದನ್ನು ಖಾತ್ರಿಪಡಿಸಿಕೊಳ್ಳುವುದಕ್ಕೆ ಶಕ್ತಿ ಇರುವ ವಿಜ್ಞಾನಿಗಳು, ಲಸಿಕೆ ಉತ್ಪಾದಕರು, ಆರ್ಥಿಕ ನೆರವು ನೀಡಬಲ್ಲವರು ಇದಕ್ಕಾಗಿ ಕೈ ಜೋಡಿಸಬೇಕೆಂದು ಹೇಳಿದ್ದಾರೆ. 

ಇದೇ ವೇಳೆ ಗ್ರೂಪ್ ಆಫ್ 20ಯಲ್ಲಿರುವ ವಿಶ್ವದ ಪ್ರಮುಖ ಆರ್ಥಿಕ ಶಕ್ತಿಗಳು ಲಸಿಕೆಯ ಸಮಾನ ಹಂಚಿಕೆಗೆ ಪೂರಕವಾಗುವಂತೆ ತುರ್ತು ಟಾಸ್ಕ್ ಫೋರ್ಸ್ ರಚನೆ ಮಾಡಿ, ಯೋಜನೆ ರೂಪಿಸಿ ಅದನ್ನು ಜಾರಿಗೊಳಿಸುವ, ಆರ್ಥಿಕ ನೆರವು ನೀಡುವ, ಸಮನ್ವಯ ಸಾಧಿಸುವ ವ್ಯವಸ್ಥೆಗೆ ಮುಂದಾಗಬೇಕೆಂದು ಆಂಟೋನಿಯೊ ಗುಟೆರೆಸ್ ಹೇಳಿದ್ದಾರೆ. 

ಇದೇ ವೇಳೆ ಯುದ್ಧ ಗ್ರಸ್ತ ರಾಷ್ಟ್ರಗಳಲ್ಲಿ ಕೊರೋನಾ ಲಸಿಕೆ ಪೂರೈಕೆಗೆ ಪೂರಕವಾಗುವಂತೆ, ಕದನವಿರಾಮ ಘೋಷಣೆ ಮಾಡಬೇಕು ಎಂದು ಬ್ರಿಟನ್ ನ ವಿದೇಶಾಂಗ ಕಾರ್ಯದರ್ಶಿ ಡೊಮಿನಿಕ್ ರಾಬ್ ಸಭೆಯಲ್ಲಿ ಆಗ್ರಹಿಸಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp