ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತೀಯ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಸರಾಗ: ಚೀನಾ

ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತೀಯ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಸರಾಗವಾಗಿ ಸಾಗುತ್ತಿದೆ ಎಂದು ಚೀನಾ ಹೇಳಿದೆ. 

Published: 18th February 2021 09:23 PM  |   Last Updated: 18th February 2021 09:23 PM   |  A+A-


China says disengagement of Chinese, Indian troops in eastern Ladakh going on smoothly

ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತೀಯ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಸರಾಗ: ಚೀನಾ

Posted By : Srinivas Rao BV
Source : The New Indian Express

ಬೀಜಿಂಗ್: ಈಶಾನ್ಯ ಲಡಾಖ್ ನಲ್ಲಿ ಚೀನಾ-ಭಾರತೀಯ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಸರಾಗವಾಗಿ ಸಾಗುತ್ತಿದೆ ಎಂದು ಚೀನಾ ಹೇಳಿದೆ. 

ಪತ್ರಕರ್ತರೊಂದಿಗೆ ಮಾತನಾಡಿರುವ ಚೀನಾದ ರಕ್ಷಣಾ ಸಚಿವಾಲಯದ ವಕ್ತಾರ ಸೀನಿಯರ್ ಕರ್ನಲ್ ವು ಕಿಯಾನ್, ಈಶಾನ್ಯ ಲಡಾಖ್ ನಲ್ಲಿ ಸೇನಾ ಸಿಬ್ಬಂದಿ ಹಿಂತೆಗೆತ ಪ್ರಕ್ರಿಯೆ ಸರಾಗವಾಗಿ ನಡೆಯುತ್ತಿದೆ, ಉಭಯ ಪಕ್ಷಗಳು ಗುರಿಯನ್ನು ಸಾಧಿಸುವುದಕ್ಕಾಗಿ ಸಂಘಟಿತ ಪ್ರಯತ್ನ ಮಾಡಲಿವೆ ಎಂದು ಅವರು ತಿಳಿಸಿದ್ದಾರೆ. 

ಚೀನಾ ಹಾಗೂ ಭಾರತದ ಮುನ್ನೆಲೆ ಸೇನಾ ಸಿಬ್ಬಂದಿಗಳು ಈಶಾನ್ಯ ಲಡಾಖ್ ನ ಪ್ಯಾಂಗಾಂಗ್ ಸರೋವರದ ದಕ್ಷಿಣ ಹಾಗೂ ಉತ್ತರ ತೀರಗಳಲ್ಲಿ ಭಾರತೀಯ ಸೇನೆ ಹಾಗೂ ಚೀನಾ ಸೇನೆ ಸಂಘಟಿತ ಹಿಂತೆಗೆತವನ್ನು ಪ್ರಾರಂಭಿಸಿವೆ ಎಂದು ಅವರು ತಿಳಿಸಿದ್ದಾರೆ.

ಹಲವು ಸುತ್ತಿನ ಮಾತುಕತೆ ಹಾಗೂ ಒಮ್ಮತದ ನಂತರ ಸೇನಾ ಹಿಂತೆಗೆತ ಪ್ರಕ್ರಿಯೆ ಪ್ರಾರಂಭವಾಗುದೆ. ನಮ್ಮ ಒಪ್ಪಂದಗಳ ಪ್ರಕಾರ ಪ್ರಕ್ರಿಯೆ ನಡೆಯುತ್ತಿರುವುದರ ಬಗ್ಗೆ ಉಭಯ ಪಕ್ಷಗಳೂ ನಿಗಾ ವಹಿಸಲಿವೆ ಎಂದು ಕರ್ನಲ್ ವು ಕಿಯಾನ್ ಮಾಹಿತಿ ನೀಡಿದ್ದಾರೆ. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp