ಲಾಂಗೆವಾಲಾ ನಿರ್ಣಾಯಕ ಯುದ್ಧವನ್ನು ನೆನಪಿಕೊಂಡ ಐಎಎಫ್ ಮುಖ್ಯಸ್ಥ ಬದೌರಿಯಾ!

ಲಾಂಗೆವಾಲಾ ನಿರ್ಣಾಯಕ ಯುದ್ಧವನ್ನು ಸ್ಮರಿಸಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ,  ಪಾಕಿಸ್ತಾನ ಸೇನಾ ಯೋಜನೆ ಅದ್ಬುತವಾಗಿತ್ತು. ಅದು 1971ರ ಯುದ್ಧದ ಕಾರ್ಯತಂತ್ರವನ್ನು ತಂತ್ರವನ್ನು ಬದಲಾಯಿಸಿತು ಆದರೆ, ಭಾರತದ ವಾಯುಸೇನೆಯ ಶಕ್ತಿಯ ಅಂಶವನ್ನು ಮರೆತಿತ್ತು ಎಂದು ಗುರುವಾರ ಹೇಳಿದ್ದಾರೆ.

Published: 18th February 2021 04:38 PM  |   Last Updated: 18th February 2021 06:43 PM   |  A+A-


IAF_chief_Air_Chief_Marshal_R_K_S_Bhadauria1

ಐಎಎಫ್ ಚೀಪ್ ಏರ್ ಮಾರ್ಷಲ್ ಕೆಎಸ್ ಬದೌರಿಯಾ

Posted By : Nagaraja AB
Source : The New Indian Express

ನವದೆಹಲಿ: ಲಾಂಗೆವಾಲಾ ನಿರ್ಣಾಯಕ ಯುದ್ಧವನ್ನು ಸ್ಮರಿಸಿರುವ ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಆರ್ ಕೆಎಸ್ ಬದೌರಿಯಾ,  ಪಾಕಿಸ್ತಾನ ಸೇನಾ ಯೋಜನೆ ಅದ್ಬುತವಾಗಿತ್ತು. ಅದು 1971ರ ಯುದ್ಧದ ಕಾರ್ಯತಂತ್ರವನ್ನು ತಂತ್ರವನ್ನು ಬದಲಾಯಿಸಿತು ಆದರೆ, ಭಾರತದ ವಾಯುಸೇನೆಯ ಶಕ್ತಿಯ ಅಂಶವನ್ನು ಮರೆತಿತ್ತು ಎಂದು ಗುರುವಾರ ಹೇಳಿದ್ದಾರೆ.

ಜೈಸಲ್ಮೇರ್‌ನಲ್ಲಿದ್ದ  ಹಂಟರ್ ವಿಮಾನದ ಅರ್ಧ ಸ್ಕ್ವಾಡ್ರನ್ ಏನು ಮಾಡಬಹುದೆಂದು ಪಾಕಿಸ್ತಾನ ಸೇನೆಯು ಮರೆತಿತ್ತು.  ಅದು ಬಹುಶಃ ಅವರ "ಏಕೈಕ ತಪ್ಪು ಎಂದಿದ್ದಾರೆ. 1971ರಲ್ಲಿ ಪಾಕಿಸ್ತಾನ ವಿರುದ್ಧ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ  50 ನೇ ವಿಜಯೋತ್ಸವನ್ನು ದೇಶ ಆಚರಿಸುತ್ತಿದೆ.

ನಿವೃತ್ತ ಏರ್ ಮಾರ್ಷಲ್  ಭರತ್  ಕುಮಾರ್ ಬರೆದಿರುವ ' ದಿ ಎಪಿಕ್ ಬ್ಯಾಟಲ್ ಆಫ್ ಲಾಂಗೆವಾಲಾ ಕೃತಿ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಭಾರತೀಯ ವಾಯುಪಡೆ ಮುಖ್ಯಸ್ಥರು, ಯುದ್ಧದ ವೇಳೆಯಲ್ಲಿ ಪಾಕಿಸ್ತಾನ ಸೇನೆಯ ಟಿ-59 ಟ್ಯಾಂಕುಗಳು ಸಾರ್ವಜನಿಕ ಸಮಾರಂಭವೊಂದರ ವೇದಿಕೆ, ಕುರ್ಚಿಗಳನ್ನು ಹಾನಿಗೊಳಿಸಿತ್ತು. ಹಂಟರ್ ಮತ್ತು ಕೃಶಾಕ್ ಮತ್ತಿತರ ವಿಮಾನಗಳು ಆ ಸಂದರ್ಭದಲ್ಲಿ ಪ್ರಮುಖ ಪಾತ್ರ ವಹಿಸಿದ್ದವು ಎಂದು ಅವರು ಹೇಳಿದರು.

ವಾಯುಶಕ್ತಿಯನ್ನು ಸರಿಯಾದ ವೇಳೆಯಲ್ಲಿ ಸೂಕ್ತ ರೀತಿಯಲ್ಲಿ ಬಳಸಿದರೆ ಅಸಾಧಾರಣ ಫಲಿತಾಂಶ ಬರಲಿದೆ ಎಂಬುದನ್ನು ಲಾಂಗೆವಾಲಾ ಯುದ್ಧ ತಿಳಿಸಿದೆ. ಹತ್ತು ವರ್ಷಗಳ ಅವಧಿಯಲ್ಲಿ ವಾಯುಪಡೆ ಶಕ್ತಿ ಬಗ್ಗೆ ಚೆನ್ನಾಗಿ ತಿಳಿದಿದ್ದೇವೆ. ಮುಂದಿನ ಪೀಳಿಗೆಗೆ ಯುದ್ಧದ ಬಗ್ಗೆ ತಿಳಿಸಲು ಇದೊಂದು ಪ್ರಮುಖ ದಾಖಲೆಯಾಗಿದೆ ಎಂದು ಭಾರತೀಯ ವಾಯುಪಡೆ ಮುಖ್ಯಸ್ಥರು ತಿಳಿಸಿದರು.
 

Stay up to date on all the latest ರಾಷ್ಟ್ರೀಯ news
Poll
Mamata_PM_Modi1

ಕೋವಿಡ್ ಉಲ್ಬಣದ ಕಾರಣ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಮತ್ತು ಟಿಎಂಸಿ ಸಾಮೂಹಿಕ ಚುನಾವಣಾ ಪ್ರಚಾರವನ್ನು ಸ್ಥಗಿತಗೊಳಿಸಬೇಕೇ?


Result
ಹೌದು
ಬೇಡ
flipboard facebook twitter whatsapp