ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಬೇಕು ಎಂದ ರಾಹುಲ್ ಗಾಂಧಿ: ಇಟಲಿ ಭಾಷೆಯಲ್ಲಿ ಬಿಜೆಪಿ ನಾಯಕರ ತಿರುಗೇಟು
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುದುಚೆರಿಯಲ್ಲಿ ಮೀನುಗಾರರನ್ನು ಭೇಟಿ ಮಾಡಿ ಅವರ ಕಷ್ಟಸುಖಗಳನ್ನು ಆಲಿಸುತ್ತಾ ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ಬೇಕು ಎಂದು ಹೇಳಿರುವುದು ಸಾಕಷ್ಟು ವೈರಲ್ ಆಗಿದ್ದು ಟೀಕೆಗೆ ಗುರಿಯಾಗಿದ್ದಾರೆ.
Published: 18th February 2021 01:06 PM | Last Updated: 18th February 2021 01:06 PM | A+A A-

ಪುದುಚೆರಿಯಲ್ಲಿ ಮೀನುಗಾರರೊಂದಿಗೆ ರಾಹುಲ್ ಗಾಂಧಿ ಸಂವಾದ
ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪುದುಚೆರಿಯಲ್ಲಿ ಮೀನುಗಾರರನ್ನು ಭೇಟಿ ಮಾಡಿ ಅವರ ಕಷ್ಟಸುಖಗಳನ್ನು ಆಲಿಸುತ್ತಾ ಮೀನುಗಾರರಿಗೆ ಪ್ರತ್ಯೇಕ ಸಚಿವಾಲಯ ಬೇಕು ಎಂದು ಹೇಳಿರುವುದು ಸಾಕಷ್ಟು ವೈರಲ್ ಆಗಿದ್ದು ಟೀಕೆಗೆ ಗುರಿಯಾಗಿದ್ದಾರೆ.
ಕೇಂದ್ರ ಮೀನುಗಾರಿಕಾ ಸಚಿವ ಗಿರಿರಾಜ್ ಸಿಂಗ್ ಮತ್ತು ಹಲವು ಬಿಜೆಪಿ ನಾಯಕರು ರಾಹುಲ್ ಗಾಂಧಿಯವರನ್ನು ತರಾಟೆಗೆ ತೆಗೆದುಕೊಂಡು ಪ್ರತ್ಯೇಕ ಮೀನುಗಾರಿಕೆ ಸಚಿವಾಲಯ ಇರುವುದು ತಮ್ಮ ಗಮನಕ್ಕೆ ಬಂದಿಲ್ಲವೇ, 2019ರಲ್ಲಿ ಪ್ರಧಾನಿ ಮೋದಿಯವರು ಮೀನುಗಾರಿಕೆ, ಪಶು ಸಂಗೋಪನೆ ಮತ್ತು ಡೈರಿ ಉತ್ಪಾದನೆಗಳಿಗೆ ಪ್ರತ್ಯೇಕ ಸಚಿವಾಲಯಗಳನ್ನು ಸ್ಥಾಪಿಸಿದ್ದು ನಾನು ಸಚಿವನಾಗಿ ಪ್ರಮಾಣ ವಚನ ತೆಗೆದುಕೊಂಡಿದ್ದೆ. ಈ ನಿಟ್ಟಿನಲ್ಲಿ ಪುದುಚೆರಿ ಮತ್ತು ದೇಶದ ಇತರ ಭಾಗಗಳಲ್ಲಿ ಕೆಲಸಗಳು ಮುಂದುವರಿದಿವೆ ಎಂದು ಸಚಿವ ಗಿರಿರಾಜ್ ಸಿಂಗ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಕೇಳಿದ್ದಾರೆ.
ರಾಹುಲ್ ಗಾಂಧಿಯವರು ಇಟಲಿಯ ಛಾಯೆಯಿಂದ ಹೊರಬರುತ್ತಿಲ್ಲ ಎಂದು ಬೇಸರವಾಗುತ್ತಿದೆ. ಅವರು ದೇಶದ ರೈತರನ್ನು ತಮ್ಮ ಹೇಳಿಕೆಗಳ ಮೂಲಕ ತಪ್ಪುದಾರಿಗೆಳೆಯುತ್ತಿದ್ದಾರೆ. ದೇಶದ ಮಾನ ಮರ್ಯಾದೆಯನ್ನು ಜಗತ್ತಿನ ಮುಂದೆ ಹರಾಜು ಹಾಕುತ್ತಿದ್ದಾರೆ ಎಂದು ಸಚಿವ ಗಿರಿರಾಜ್ ಸಿಂಗ್ ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ.
Caro Raul (@RahulGandhi),
— Shandilya Giriraj Singh (@girirajsinghbjp) February 17, 2021
Non esiste un Ministero della pesca separato in Italia. Viene sotto Ministero delle Politiche Agricole e Forestali. https://t.co/Lv9x3r8ozK
ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ಕಾಂಗ್ರೆಸ್ ನಾಯಕನನ್ನು ಟ್ವಿಟ್ಟರ್ ನಲ್ಲಿ ಟೀಕಿಸಿದ್ದಾರೆ. ನಿನ್ನೆ ರಾಹುಲ್ ಗಾಂಧಿಯವರು ಪುದುಚೆರಿ ಸಿಎಂ ನಾರಾಯಣಸಾಮಿ ಅವರ ಜೊತೆಗೂಡಿ ಮೀನುಗಾರರ ಜೊತೆ ಮಾತನಾಡುತ್ತಾ, ಮೀನುಗಾರರನ್ನು ಸಮುದ್ರದ ರೈತರು ಎಂದು ಕರೆದರು, ಭೂಮಿಯ ರೈತರಿಗೆ ಕೇಂದ್ರದಲ್ಲಿ ಪ್ರತ್ಯೇಕ ಸಚಿವಾಲಯ ಇರುವಾಗ, ಸಮುದ್ರದ ರೈತರಿಗೆ ಏಕಿಲ್ಲ, ಮೀನುಗಾರರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಎಲ್ಲಿಗೆ ಹೋಗಬೇಕು ಎಂದು ಕೇಳಿದ್ದರು.
This is beyond my comprehension! Rahul Gandhi is demanding for a separate Ministry for Fisheries whereas hon'ble PM @narendramodi Ji has already created the Ministry for Fisheries in 2019 itself! https://t.co/8BPgkQvSk1
— Kiren Rijiju (@KirenRijiju) February 17, 2021
ಮೇ ತಿಂಗಳಲ್ಲಿ ನಡೆಯಲಿರುವ ಚುನಾವಣೆಗೆ ಪಕ್ಷದ ಪ್ರಚಾರ ನಡೆಸಲು ರಾಹುಲ್ ಗಾಂಧಿ ನಿನ್ನೆ ಪುದುಚೆರಿಗೆ ಭೇಟಿ ನೀಡಿದ್ದರು. ಈಗಾಗಲೇ ಕಾಂಗ್ರೆಸ್ ನ ನಾಲ್ವರು ಶಾಸಕರು ರಾಜೀನಾಮೆ ಸಲ್ಲಿಸಿ ಸರ್ಕಾರ ಅಧಿಕಾರ ಕಳೆದುಕೊಳ್ಳುವ ಹಂತಕ್ಕೆ ತಲುಪಿದೆ.