ರಷ್ಯಾ-ಇರಾನ್ ನೌಕಾಪಡೆ ತರಬೇತಿಯಲ್ಲಿ ಭಾರತ ಪಾಲ್ಗೊಳ್ಳುತ್ತಿಲ್ಲ: ಭಾರತೀಯ ನೌಕಾಪಡೆ
ಹಿಂದೂ ಮಹಾಸಾಗರ ಪ್ರದೇಶದಲ್ಲಿ ಇರಾನ್ ಮತ್ತು ರಷ್ಯಾ ಆಯೋಜಿಸಿರುವ ಎರಡು ದಿನಗಳ ತರಬೇತಿಯಲ್ಲಿ ಭಾರತೀಯ ನೌಕಾಪಡೆ ಭಾಗವಹಿಸಿಲ್ಲ ಎಂದು ಭಾರತೀಯ ನೌಕಾಪಡೆ ಗುರುವಾರ ತಿಳಿಸಿದೆ.
Published: 18th February 2021 12:20 PM | Last Updated: 18th February 2021 12:20 PM | A+A A-

ಸಂಗ್ರಹ ಚಿತ್ರ
ನವದೆಹಲಿ: ಹಿಂದೂ ಮಹಾಸಾಗರ ಪ್ರದೇಶದಲ್ಲಿ ಇರಾನ್ ಮತ್ತು ರಷ್ಯಾ ಆಯೋಜಿಸಿರುವ ಎರಡು ದಿನಗಳ ತರಬೇತಿಯಲ್ಲಿ ಭಾರತೀಯ ನೌಕಾಪಡೆ ಭಾಗವಹಿಸಿಲ್ಲ ಎಂದು ಭಾರತೀಯ ನೌಕಾಪಡೆ ಗುರುವಾರ ತಿಳಿಸಿದೆ.
ಇರಾನ್-ರಷ್ಯಾ ಮ್ಯಾರಿಟೈಮ್ ಸೆಕ್ಯುರಿಟಿ ಬೆಲ್ಟ್ 2021 ಎಂದು ಕರೆಯಲ್ಪಡುವ ಇರಾನ್ ಮತ್ತು ರಷ್ಯಾದ ನೌಕಾ ತರಬೇತಿ ಫೆಬ್ರವರಿ 16 ರಂದು ಪ್ರಾರಂಭವಾಗಿದ್ದು, ಈ ತರಬೇತಿ ಕಾರ್ಯಕ್ರಮದಲ್ಲಿ ಭಾರತೀಯ ನೌಕಾಪಡೆ ಪಾಲ್ಗೊಂಡಿಲ್ಲ ಎನ್ನಲಾಗಿದೆ. ಈ ಕುರಿತಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಸುದ್ದಿಗಳು ತಪ್ಪು ಎಂದು ನೌಕಾಪಡೆ ಸ್ಪಷ್ಟನೆ ನೀಡಿದೆ.
ಎರಡು ದಿನಗಳ ಹಿಂದೆ ಟೆಹ್ರಾನ್ನಲ್ಲಿ, ಈ ಡ್ರಿಲ್ನ ವಕ್ತಾರ ಅಡ್ಮಿರಲ್ ಘೋಲಮ್ರೆಜಾ ತಹಾನಿ ಅವರು ಭಾರತೀಯ ನೌಕಾಪಡೆ ಮನವಿ ಮೇರೆಗೆ ಆಯ್ದ ಗುಂಪಿನ ಹಡಗುಗಳೊಂದಿಗೆ ತರಬೇತಿಯಲ್ಲಿ ಪಾಲ್ಗೊಂಡಿದೆ ಎಂದು ಹೇಳಿದ್ದರು. ಟೆಹ್ರಾನ್ನಲ್ಲಿ ಮಾತನಾಡಿದ್ದ ಇರಾನ್ನ ನೌಕಾಪಡೆಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಹೊಸೆನ್ ಖಾನ್ಜಾಡಿ ಭಾರತವನ್ನು ಈ ಪ್ರದೇಶದ ಪ್ರಬಲ ನೌಕಾ ಪಡೆ ಎಂದು ಶ್ಲಾಘಿಸಿದ್ದರು ಮತ್ತು ಭಾರತೀಯ ನೌಕಾಪಡೆಯು ಈ ವ್ಯಾಯಾಮಕ್ಕೆ ಸೇರುತ್ತಿದೆ ಎಂದು ಹೇಳಿದ್ದರು. ಆದರೆ ಈ ಹೇಳಿಕೆಯನ್ನು ಭಾರತೀಯ ನೌಕಾಪಡೆ ತಳ್ಳಿ ಹಾಕಿದೆ.
ಈ ನೌಕಾಪಡೆ ತರಬೇತಿ ಹಿಂದೂ ಮಹಾಸಾಗರದ ಉತ್ತರ ಭಾಗದಲ್ಲಿ ನಡೆಯಿತು. ಈ ತರಬೇತಿ 17,000 ಚದರ ಕಿ.ಮೀ ವಿಸ್ತೀರ್ಣದ ವ್ಯಾಪ್ತಿಯಲ್ಲಿ ನಡೆಯಿತು. ವಾಯು ಗುರಿಗಳನ್ನು ಕೇಂದ್ರವಾಗಿರಿಸಿಕೊಂಡು ಗುರಿನಾಶ ಪಡಿಸುವುದು ಮತ್ತು ಸಮುದ್ರದಲ್ಲಿನ ಗುರಿಗಳನ್ನು ನಾಶಪಡಿಸುವುದು. ಕಡಲ್ಗಳ್ಳರಿಂದ ಅಪಹರಿಸಿದ ಹಡಗುಗಳನ್ನು ಮುಕ್ತಗೊಳಿಸುವುದು, ಜೊತೆಗೆ ಪಾರುಗಾಣಿಕಾ ಮತ್ತು ಶೋಧ ಮತ್ತು ಕಡಲ್ಗಳ್ಳತನ ವಿರೋಧಿ ಕಾರ್ಯಾಚರಣೆಗಳ ತರಬೇತಿಯನ್ನು ಇಲ್ಲಿ ನಡೆಸಲಾಗಿತ್ತು.
2019 ರಲ್ಲಿ ಇರಾನ್, ರಷ್ಯಾ ಮತ್ತು ಚೀನಾ ಇದೇ ರೀತಿಯ ನೌಕಾ ತರಬೇತಿಯನ್ನು ನಡೆಸಿದ್ದವು.