ಛತ್ತೀಸ್ ಘಡ: ದಂಪತಿಗಳು ಸೇರಿ ಆರು ನಕ್ಸಲರು ಪೊಲೀಸರಿಗೆ ಶರಣು!

ನಕ್ಸಲ್ ಪೀಡಿತ ದಾಂತೇವಾಡದಲ್ಲಿ ಇಬ್ಬರು ದಂಪತಿಗಳ ಸಹಿತ ಆರು ಮಂದಿ ನಕ್ಸಲರು ಪೊಲೀಸರ ಬಳಿ ಶರಣಾಗತರಾಗಿದ್ದಾರೆ.

Published: 19th February 2021 05:09 PM  |   Last Updated: 19th February 2021 05:10 PM   |  A+A-


Naxals surrender

ಸಾಂದರ್ಭಿಕ ಚಿತ್ರ

Posted By : Srinivasamurthy VN
Source : PTI

ದಾಂತೇವಾಡ: ನಕ್ಸಲ್ ಪೀಡಿತ ದಾಂತೇವಾಡದಲ್ಲಿ ಇಬ್ಬರು ದಂಪತಿಗಳ ಸಹಿತ ಆರು ಮಂದಿ ನಕ್ಸಲರು ಪೊಲೀಸರ ಬಳಿ ಶರಣಾಗತರಾಗಿದ್ದಾರೆ.

ದಾಂತೇವಾಡ ಜಿಲ್ಲೆಯಲ್ಲಿ ಶುಕ್ರವಾರ ಇಬ್ಬರು ದಂಪತಿ ಸಹಿತ ಆರು ಮಂದಿ ನಕ್ಸಲರು ಶರಣಾಗತರಾಗಿದ್ದು, ಶರಣಾಗತ ನಕ್ಸಲರ ಮೇಲೆ ಒಟ್ಟು 15 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಈ ಕುರಿತಂತೆ ಮಾಹಿತಿ ನೀಡಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಪಲ್ಲವ ಅವರು, 'ಮಾವೊವಾದಿಗಳ ಪೊಳ್ಳು ತತ್ವಗಳಿಂದ ನಿರಾಶೆಗೊಂಡಿದ್ದ ನಕ್ಸಲರು ಇದೀಗ ಶರಣಾಗಿದ್ದಾರೆ. ಪೊಲೀಸರು ಮೊದಲಿನಿಂದಲೂ ನಕ್ಸಲರು ಮರಳಿ ಮನೆಗೆ ಬರಲು ಪ್ರೋತ್ಸಾಹ ನೀಡುತ್ತಿದ್ದರು. ಈ ಕುರಿತ . ಪೊಲೀಸರ ‘ಲೋನ್‌ ವರೋತು‘(ಮರಳಿ ಮನೆಗೆ) ಅಭಿಯಾನ ನಮ್ಮನ್ನು ಹಿಂಸೆ ತೊರೆಯುವಂತೆ ಪ್ರೇರೇಪಿಸಿದೆ ಎಂದು ಹೇಳಿರುವ ನಕ್ಸಲ್ ಕಾರ್ಯಕರ್ತರು ಸಿಆರ್‌ಪಿಎಫ್ ಅಧಿಕಾರಿಗಳ ಎದುರು ಶರಣರಾಗತರಾದರು ಎಂದು ಹೇಳಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ ಮಾವೋವಾದಿಗಳ ಇಂದ್ರಾವತಿ ಪ್ರದೇಶ ಸಮಿತಿಯ ಕಮ್ಲು ಅಲಿಯಾಸ್ ಸಂತೋಷ್ ಪೋಡಿಯಮ್ (25 ವರ್ಷ), ಆತನ ಪತ್ನಿ ಪಾಯ್ಕೆ ಕೊವಾಸಿ (22 ವರ್ಷ), ಪೂರೈಕೆ ತಂಡದ ಸದಸ್ಯರಾದ ಲಿಂಗಾ ರಾಮ್ ಯುಕಿ (36 ವರ್ಷ), ಆತನ ಪತ್ನಿ ಭೂಮೆಯುಕಿ (28 ವರ್ಷ), ಕಾಟೆಕೇಲ್ಯನ್‌ ಪ್ರದೇಶ ಸಮಿತಿಯ ಕುಮಾರಿ ಜೋಗಿ (36 ವರ್ಷ), ಚೇತನಾ ನಾಟ್ಯ ಮಂಡಿಯ ಪಾಂಡೆ ಕವಾಸಿ ಶರಣಾದವರೆಂದು ತಿಳಿದುಬಂದಿದೆ.

ಇವರು ಕಳೆದ 15 ವರ್ಷಗಳಿಂದ ನಿಷೇಧಿತ ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು ಮತ್ತು ಇವರ ಮಾಹಿತಿ ನೀಡಿದವರಿಗೆ ಪೊಲೀಸರು 15 ಲಕ್ಷ ರೂ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದರು.
 

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp