ಖಾಸಗೀಕರಣ ವಿರೋಧಿಸಿ ಬ್ಯಾಂಕ್ ಯೂನಿಯನ್ ಗಳ ಧರಣಿ: ಮುಂದಿನ ತಿಂಗಳು ಸಂಸತ್ ಮುಂಭಾಗ ಪ್ರತಿಭಟನೆ
ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಇಂದು ಬ್ಯಾಂಕ್ ಗಳು ಯೂನಿಗಳು ಪ್ರತಿಭಟನಾ ಧರಣಿ ನಡೆಸಿದವು.
Published: 19th February 2021 03:25 PM | Last Updated: 19th February 2021 04:04 PM | A+A A-

ಸಾಂದರ್ಭಿಕ ಚಿತ್ರ
ನವದೆಹಲಿ: ಕೇಂದ್ರ ಸರ್ಕಾರದ ಖಾಸಗೀಕರಣ ನೀತಿ ವಿರೋಧಿಸಿ ಎಲ್ಲಾ ರಾಜ್ಯಗಳ ರಾಜಧಾನಿಗಳಲ್ಲಿ ಇಂದು ಬ್ಯಾಂಕ್ ಗಳು ಯೂನಿಗಳು ಪ್ರತಿಭಟನಾ ಧರಣಿ ನಡೆಸಿದವು. ಒಂದು ವೇಳೆ ತಮ್ಮ ಬೇಡಿಕೆಗಳು ಈಡೇರದಿದ್ದಲಿ ಮುಂದಿನ ತಿಂಗಳು ಸಂಸತ್ ಕಡೆಗೆ ಜಾಥಾ ನಡೆಸಲು ಯೋಜಿಸಲಾಗಿದೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಅಸೋಸಿಯೇಷನ್ ಹೇಳಿದೆ.
ಬಜೆಟ್ ಭಾಷಣದ ವೇಳೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಎರಡು ಸಾರ್ವಜನಿಕ ಕ್ಷೇತ್ರಗಳ ಬ್ಯಾಂಕ್ ಗಳ ಖಾಸಗೀಕರಣ ಯೋಜನಯನ್ನು ಪ್ರಸ್ತಾಪಿಸಿದ್ದಾರೆ. ಯುನೈಟೆಡ್ ಪೋರಂ ಆಫ್ ಯೂನಿಯನ್ ಅಡಿಯಲ್ಲಿ 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳಿರುವುದಾಗಿ ಎಐಬಿಇಎ ಹೇಳಿಕೆಯಲ್ಲಿ ತಿಳಿಸಿದೆ.
ಬ್ಯಾಂಕ್ ಯೂನಿಯನ್ ಗಳು ಇಂದು ಧರಣಿ ನಡೆಸಿದ ಬಳಿಕ ಮುಂದಿನ 15 ದಿನಗಳ ಕಾಲ ದೇಶಾದ್ಯಂತ ಧರಣಿ ಪ್ರತಿಭಟನೆ ನಡೆಯಲಿದೆ. ಮುಂದಿನ ತಿಂಗಳು 10 ರಂದು ಸಂಸತ್ ಎದುರುಗಡೆ ಪ್ರತಿಭಟನೆ ನಡೆಸಲಾಗುವುದು, ತದನಂತರ ಮಾರ್ಚ್ 15-16 ರಂದು 10 ಲಕ್ಷ ಬ್ಯಾಂಕ್ ನೌಕರರು ಮತ್ತು ಅಧಿಕಾರಿಗಳು ನಿರಂತರವಾಗಿ ಮುಷ್ಕರ ನಡೆಸಲಾಗುವುದು ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಅಸೋಸಿಯೇಷನ್ ತಿಳಿಸಿದೆ.