180 ಐಕ್ಯೂ ಮಟ್ಟ ಹೊಂದಿರುವ ಬೆಂಗಳೂರು ಮೂಲದ ರಿಷಿ ಶಿವ್ ಪ್ರಸನ್ನಗೆ ಯಂಗ್ ಜೀನಿಯಸ್ ಮಾನ್ಯತೆ!

ಈ 6-ವರ್ಷದ ಪುಟ್ಟ ಬೆಂಗಳೂರಿನ ಹುಡುಗನಿಗೆ ಜ್ಞಾನದ ಅಪಾರ ಹಸಿವಿದೆ ಮತ್ತು ನಿಜವಾದ ಅರ್ಥದಲ್ಲಿ ಜೀನಿಯಸ್.

Published: 19th February 2021 11:18 PM  |   Last Updated: 19th February 2021 11:18 PM   |  A+A-


Bengaluru based Rishi Shiv Prasanna with IQ level 180 recognized as Young Genius!

180 ಐಕ್ಯೂ ಮಟ್ಟ ಹೊಂದಿರುವ ಬೆಂಗಳೂರು ಮೂಲದ ರಿಷಿ ಶಿವ್ ಪ್ರಸನ್ನಗೆ ಯಂಗ್ ಜೀನಿಯಸ್ ಮಾನ್ಯತೆ!

Posted By : Srinivas Rao BV
Source : Online Desk

ಮಗುವಾಗಿ ನಮ್ಮಲ್ಲಿ ಬಹಳಷ್ಟು ಮಂದಿಗೆ ಕುತೂಹಲಿಗಳಾಗಿರುತ್ತಾರೆ ಮತ್ತು ಹಲವು ವಿಷಯಗಳ ಕುರಿತು ಹಲವಾರು ಪ್ರಶ್ನೆಗಳನ್ನು ಹೊಂದಿರುತ್ತಾರೆ, ಆದರೆ ರಿಷಿ ಶಿವ್ ಪ್ರಸನ್ನ ತನ್ನ ಜ್ಞಾನದಿಂದ ಪ್ರತಿಯೊಬ್ಬರನ್ನೂ ಆಶ್ಚರ್ಯಚಕಿತರಾಗಿಸುತ್ತಾನೆ. ಈ 6-ವರ್ಷದ ಪುಟ್ಟ ಬೆಂಗಳೂರಿನ ಹುಡುಗನಿಗೆ ಜ್ಞಾನದ ಅಪಾರ ಹಸಿವಿದೆ ಮತ್ತು ನಿಜವಾದ ಅರ್ಥದಲ್ಲಿ ಜೀನಿಯಸ್.

ರಿಷಿ 180 ಐಕ್ಯೂ ಮಟ್ಟದ ಪ್ರಮಾಣಪತ್ರ ಪಡೆದಿದ್ದಾನೆ. ಮತ್ತು ಮೆನ್ಸಾ ಹೈ ಐಕ್ಯೂ ಸೊಸೈಟಿಗೆ ಪ್ರವೇಶ ಪಡೆದಿದ್ದಾನೆ. ಆತ ಅತ್ಯಂತ ಕಿರಿಯ ಪ್ರಮಾಣೀಕೃತ ಆಂಡ್ರಾಯಿಡ್ ಅಪ್ಲಿಕೇಷನ್ ಡೆವಲಪರ್‌ಗಳಲ್ಲಿ ಒಬ್ಬನಾಗಿದ್ದಾನೆ(೩ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದು ಗೂಗಲ್ ಪ್ಲೇಸ್ಟೋರ್‌ನಲ್ಲಿ “ಐಕ್ಯೂ ಟೆಸ್ಟ್ ಆ್ಯಪ್” ಫಾರ್ ಕಿಡ್ಸ್, “ಕಂಟ್ರೀಸ್ ಆಫ್ ದಿ ವರ್ಲ್ಡ್” ಮತ್ತು ಸಿಎಚ್‌ಬಿ ಅಂದರೆ ಕೋವಿಡ್ ಹೆಲ್ಪ್ ಫಾರ್ ಬೆಂಗಳೂರಿಯನ್ಸ್) ಎಂದು ಪಟ್ಟಿಯಾಗಿವೆ ಮತ್ತು ಪುಸ್ತಕವೊಂದನ್ನೂ ಬರೆದಿದ್ದಾನೆ.

ರಿಷಿ ಶಿವ್ ಪ್ರಸನ್ನನ ಅಸಾಧಾರಣ ಪ್ರತಿಭೆಯನ್ನು ಅದ್ಭುತ ಬುದ್ಧಿಶಕ್ತಿಯ ಮಕ್ಕಳಿಗಾಗಿ ರೂಪಿಸಲಾದ ಕಾರ್ಯಕ್ರಮ ಯಂಗ್ ಜೀನಿಯಸ್‌ನಲ್ಲಿ ಈಗ ಗುರುತಿಸಲಾಗುತ್ತಿದೆ. ರಿಷಿ ಭಾರತದ ಮಾಜಿ ಹಾಕಿ ಆಟಗಾರ ಪದ್ಮಶ್ರೀ ಪುರಸ್ಕೃತ ಸರ್ದಾರ್ ಸಿಂಗ್ ಅವರನ್ನು ಭೇಟಿಯಾಗಿ ತಮ್ಮ ಜ್ಞಾನದಿಂದ ಅವರನ್ನು ಪ್ರಭಾವಿಸಿದ್ದಾನೆ. ಸರ್ದಾರ್ ಸಿಂಗ್ ಭಾರತವನ್ನು ೩೫೦ ಅಂತಾರಾಷ್ಟಿçÃಯ ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು ಮತ್ತು ಅತ್ಯಂತ ಕಿರಿಯ ಹಾಕಿ ಕ್ಯಾಪ್ಟನ್ ಆಗಿದ್ದ ಅವರು ರಿಷಿಯನ್ನು ಭೇಟಿಯಾದಾಗ ವಿಸ್ಮಯಗೊಂಡರು.

ರಿಷಿ ತನ್ನ ಬುದ್ಧಿಶಕ್ತಿಯನ್ನು ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಪ್ರದರ್ಶಿಸಲು ಪ್ರಾರಂಭಿಸಿದನು. ರಿಷಿಯ ತಾಯಿ ರೇಚೇಶ್ವರಿ ಎಸ್. “3 ನೇ ವಯಸ್ಸಿನಲ್ಲಿ ರಿಷಿ ಸೌರ ವ್ಯವಸ್ಥೆ, ವಿಶ್ವ, ಗ್ರಹಗಳು, ಆಕಾರಗಳು ಮತ್ತು ಸಂಖ್ಯೆಗಳನ್ನು ವಿವರಿಸಲು ಪ್ರಾರಂಭಿಸಿದನು. ನಾವು ಆತನ ಜ್ಞಾನ ನೋಡಿ ಆಶ್ಚರ್ಯಗೊಂಡೆವು” ಎನ್ನುತ್ತಾರೆ. ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ 2019ರಲ್ಲಿ ಆತನ 5ನೇ ವಯಸ್ಸಿನಲ್ಲಿ ಐಕ್ಯೂಗಾಗಿ ಪ್ರಶಂಸಾ ಪತ್ರ ನೀಡಿದೆ.

ರಿಷಿ ಬಾಹ್ಯಾಕಾಶ, ವಿಜ್ಞಾನ, ತಂತ್ರಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ ಕುರಿತು ಆಸಕ್ತಿಯನ್ನು ೪ನೇ ವಯಸ್ಸಿನಲ್ಲಿಯೇ ಬೆಳೆಸಿಕೊಂಡನು. ಈ ಕುರಿತು ರಿಷಿ ಶಿವ್ ಪ್ರಸನ್ನ, “ನಾನು ಕೋಡಿಂಗ್ ಅನ್ನು ೫ನೇ ವಯಸ್ಸಿನಲ್ಲಿ ಕಲಿತೆನು ಮತ್ತು ಈಗ ನಾನು ಹಲವು ಬಳಕೆದಾರ ಸ್ನೇಹಿ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಿದ್ದೇನೆ. ಭೂಮಾತೆಯನ್ನು ರಕ್ಷಿಸಲು ನೆರವಾಗುವ ವಿಜ್ಞಾನಿಯಾಗಲು ಬಯಸಿದ್ದೇನೆ” ಎಂದರು.

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp