ರೈತರು ಒಂದು ಬೆಳೆ ತ್ಯಾಗಕ್ಕೂ ಸಿದ್ಧ, ಆದರೆ, ಚಳವಳಿಯನ್ನು ದುರ್ಬಲಗೊಳಿಸಲ್ಲ: ರಾಕೇಶ್ ಟಿಕಾಯತ್
ರೈತರು ಒಂದು ಬೆಳೆ ತ್ಯಾಗಕ್ಕೂ ಸಿದ್ಧರಿದ್ದಾರೆ ಆದರೆ, ಪ್ರತಿಭಟನಾ ಸ್ಥಳದಿಂದ ಕದಲಲ್ಲ, ಯಾವುದೇ ಕಾರಣಕ್ಕೂ ಚಳವಳಿಯನ್ನು ದುರ್ಬಲಗೊಳಿಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ ಹೇಳಿದ್ದಾರೆ.
Published: 19th February 2021 04:01 PM | Last Updated: 19th February 2021 04:05 PM | A+A A-

ರಾಕೇಶ್ ಟಿಕಾಯತ್
ಗಾಜಿಯಾಬಾದ್: ರೈತರು ಒಂದು ಬೆಳೆ ತ್ಯಾಗಕ್ಕೂ ಸಿದ್ಧರಿದ್ದಾರೆ ಆದರೆ, ಪ್ರತಿಭಟನಾ ಸ್ಥಳದಿಂದ ಕದಲಲ್ಲ, ಯಾವುದೇ ಕಾರಣಕ್ಕೂ ಚಳವಳಿಯನ್ನು ದುರ್ಬಲಗೊಳಿಸುವುದಿಲ್ಲ ಎಂದು ಭಾರತೀಯ ಕಿಸಾನ್ ಯೂನಿಯನ್ ಮುಖಂಡ ರಾಕೇಶ್ ಟಿಕಾಯತ್ ಶುಕ್ರವಾರ ಹೇಳಿದ್ದಾರೆ.
ಒಂದು ವೇಳೆ ಸರ್ಕಾರ ಏದ್ದೇಳದಿದ್ದರೆ ನಾವು ಏನು ಮಾಡಲಿಕ್ಕೆ ಆಗುವುದಿಲ್ಲ. ಆದರೆ, ನಾವು ಎಲ್ಲಿಗೂ ಹೋಗುವುದಿಲ್ಲ. ಕಳೆದ 70 ವರ್ಷಗಳಿಂದಲೂ ಕೃಷಿಯಲ್ಲಿ ಕಷ್ಟ ಅನುಭವಿಸುತ್ತಿರುವ ರೈತರು, ಒಂದು ಬೆಳೆ ತ್ಯಾಗ ಮಾಡಲು ಹಿಂಜರಿಯುವುದಿಲ್ಲ. ಹೆಚ್ಚಿನ ಸಂಖ್ಯೆಯ ಕಾರ್ಮಿಕರನ್ನು ತೆಗೆದುಕೊಂಡು ಕೃಷಿ ಬೆಳೆಯನ್ನು ನೋಡಿಕೊಳ್ಳುತ್ತೇವೆ ಆದರೆ, ಪ್ರತಿಭಟನೆಯನ್ನು ಮಾತ್ರ ದುರ್ಬಲಗೊಳಿಸಲ್ಲ ಎಂದಿದ್ದಾರೆ.
ಪಶ್ಟಿಮ ಬಂಗಾಳಕ್ಕೆ ಟ್ರಾಕ್ಟರ್ ಮೆರವಣಿಗೆ ನಡೆಸುವ ಬಗ್ಗೆ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ ಟಿಕಾಯತ್, ಬೇಸಿಗೆಯಲ್ಲಿ ದೇಹವನ್ನು ಉಷ್ಣತೆಯಿಂದ ರಕ್ಷಿಸಿಕೊಳ್ಳಲು ಪ್ಯಾನ್ ಮತ್ತು ಹವಾನಿಯಂತ್ರಿತ ಸಾಧನಗಳನ್ನು ರೈತರು ಅಳವಡಿಸಿಕೊಳ್ಳುತ್ತಿದ್ದಾರೆ. ವಿದ್ಯುತ್ ಸೌಕರ್ಯ ಕಲ್ಪಿಸುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ಕೇಳಿಕೊಂಡಿದ್ದೇವೆ. ಒಂದು ವೇಳೆ ಅವರು ಒಪ್ಪದಿದ್ದರೆ ದೆಹಲಿ ಸರ್ಕಾರಕ್ಕೆ ಮನವಿ ಮಾಡಲಾಗುವುದು, ಅವರು ಕೂಡಾ ನೀಡದಿದ್ದಲ್ಲಿ ಜನರೆಟರ್ ಗೆ ವ್ಯವಸ್ಥೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.