ಭೀಕರ ವಿಡಿಯೋ: ಹಾಡಹಗಲೇ ಪೊಲೀಸರ ಮೇಲೆ ಗುಂಡಿನ ಸುರಿಮಳೆಗರೆದು ಉಗ್ರ ಪರಾರಿ, ಇಬ್ಬರು ಪೊಲೀಸರ ಸಾವು!

ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಹಾಡಹಗಲೇ ಹತ್ತಾರು ಸಾರ್ವಜನಿಕರನ ನಡುವೆಯೇ ರಾಜಾರೋಷವಾಗಿ ಬಂದ ಉಗ್ರ ಪೊಲೀಸರ ಮೇಲೆ ಗುಂಡಿನಮಳೆಗರೆದು ಪರಾರಿಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ನಡೆದಿದೆ. 

Published: 19th February 2021 04:14 PM  |   Last Updated: 19th February 2021 04:14 PM   |  A+A-


fire bullets at security forces

ಉಗ್ರನಿಂದ ಗುಂಡಿನ ದಾಳಿ

Posted By : Srinivasamurthy VN
Source : ANI

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದು, ಹಾಡಹಗಲೇ ಹತ್ತಾರು ಸಾರ್ವಜನಿಕರನ ನಡುವೆಯೇ ರಾಜಾರೋಷವಾಗಿ ಬಂದ ಉಗ್ರ ಪೊಲೀಸರ ಮೇಲೆ ಗುಂಡಿನಮಳೆಗರೆದು ಪರಾರಿಯಾಗಿರುವ ಘಟನೆ ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದಲ್ಲಿ ನಡೆದಿದೆ. 

ಹೌದು.. ಒಂದೆಡೆ ಶೋಪಿಯಾನ್ ನಲ್ಲಿ ಉಗ್ರರ ವಿರುದ್ಧ ಭದ್ರತಾ ಪಡೆಗಳು ಎನ್ ಕೌಂಟರ್ ಕಾರ್ಯಾಚರಣೆ ನಡೆಸಿರುವಂತೆಯೇ ಇತ್ತ ಇದಕ್ಕೆ ಪ್ರತಿಯಾಗಿ ದಾಳಿ ನಡೆಸಿರುವ ಉಗ್ರರು ಶ್ರೀನಗರದ ಬಾಗಾಟ್ ಬಾರ್ಜುಲ್ಲಾ ಪ್ರದೇಶದಲ್ಲಿ ಹಾಡಹಗಲೇ ಪೊಲೀಸರ ಮೇಲೆ ಗುಂಡಿನಮಳೆಗರೆದು ಪರಾರಿಯಾಗಿದ್ದಾರೆ. ಶ್ರೀನಗರದ ಬಾಗಾಟ್ ಬಾರ್ಜುಲ್ಲಾ ಪ್ರದೇಶದಲ್ಲಿ ಅಂಗಡಿಯೊಂದರ ಬಳಿ  ಇಬ್ಬರು ಪೊಲೀಸರು ನಿಂತಿದ್ದ ವೇಳೆ ಅಲ್ಲಿಗೆ ಆಗಮಿಸಿದ ಶಸ್ತ್ರಧಾರಿ ಉಗ್ರ ನೋಡ ನೋಡುತ್ತಿದ್ದಂತೆಯೇ ಬಂದೂಕು ತೆಗೆದು ಪೊಲೀಸರ ಮೇಲೆ ಗುಂಡಿನ ಸುರಿಮಳೆಗರೆದಿದ್ದಾನೆ. 

ಬಳಿಕ ಅಲ್ಲಿಂದ ಕೂಡಲೇ ಪರಾರಿಯಾಗಿದ್ದಾನೆ. ಉಗ್ರ ಗುಂಡು ಹಾರಿಸುವ ವೇಳೆ ಪಕ್ಕದಲ್ಲೇ ಸಾಕಷ್ಟು ಜನರಿದ್ದರಾದರೂ ಆತನನ್ನು ಹಿಡಿಯುವ ಅಥವಾ ಆತನನ್ನು ತಡೆಯುವ ಪ್ರಯತ್ನವನ್ನು ಯಾರೂ ಮಾಡಿಲ್ಲ. ಬದಲಿಗೆ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದರು. ಇವಿಷ್ಟೂ ಘಟನೆ ಸ್ಥಳದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಈ ವಿಡಿಯೋ ಇದೀಗ ವೈರಲ್ ಆಗಿದೆ.

ಇನ್ನು ಉಗ್ರನ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸರು ತೀವ್ರ ಗಾಯಗೊಂಡಿದ್ದರು. ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ರಕ್ತಮಡುವಿನಲ್ಲಿ ಬಿದ್ದಿದ್ದ ಪೊಲೀಸರು ಆಸ್ಪತ್ರೆಗೆ ಸಾಗಿಸಿದ್ದಾರೆಯಾದರೂ ಇಬ್ಬರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೃತ ಪೊಲೀಸರನ್ನು ವಿಶೇಷ ಭದ್ರತಾ ಅಧಿಕಾರಿಗಳಾದ ಸಿಟಿ ಮೊಹಮ್ಮದ್ ಯೂಸುಫ್ ಮತ್ತು ಸಿಟಿ ಸುಹೇಲ್ ಅಹ್ಮದ್ ಎಂದು ಗುರುತಿಸಲಾಗಿದೆ.  

ಪ್ರಸ್ತುತ ಘಟನಾ ಪ್ರದೇಶದಲ್ಲಿ ಪೊಲೀಸರು ಮತ್ತು ಸೇನೆ ಪರಾರಿಯಾದ ಶೋಧ ಕಾರ್ಯಾಚರಣೆ ಆರಂಭಿಸಿದ್ದು, ಭಾಗತ್ ವಲಯ, ಬಾರಮುಲ್ಲಾ ಸೇರಿದಂತೆ ಕೆಲೆವೆಡೆ ಹೈ ಅಲರ್ಟ್ ಕೂಡ ಘೋಷಿಸಲಾಗಿದೆ.
 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp