ಪಾಂಗೊಂಗ್‌ ತ್ಸೊ ತೀರದಿಂದ ಸೇನಾಪಡೆ ಸಂಪೂರ್ಣ ಹಿಂತೆಗೆತ: ನಾಳೆ ಭಾರತ-ಚೀನಾ ಮಧ್ಯೆ 10ನೇ ಸುತ್ತಿನ ಮಾತುಕತೆ 

ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ 10ನೇ ಸುತ್ತಿನ ಮಾತುಕತೆ ನಾಳೆ ಏರ್ಪಡಲಿದೆ. ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಾಳೆ ನಡೆಯಲಿದೆ.

Published: 19th February 2021 01:36 PM  |   Last Updated: 19th February 2021 03:58 PM   |  A+A-


An Indian Army truck crosses Chang la pass near Pangong Lake in Ladakh region.

ಲಡಾಕ್ ನ ಪಾಂಗೊಂಗ್ ತ್ಸೊ ಸಮೀಪ ಚಂಗ್ ಲಾ ಪಾಸ್ ದಾಟುತ್ತಿರುವ ಭಾರತೀಯ ಸೇನಾಪಡೆಯ ಟ್ರಕ್

Posted By : Sumana Upadhyaya
Source : The New Indian Express

ನವದೆಹಲಿ: ಭಾರತ-ಚೀನಾ ಮಧ್ಯೆ ಪೂರ್ವ ಲಡಾಕ್ ಗಡಿ ವಿವಾದಕ್ಕೆ ಸಂಬಂಧಪಟ್ಟಂತೆ 10ನೇ ಸುತ್ತಿನ ಮಾತುಕತೆ ನಾಳೆ ಏರ್ಪಡಲಿದೆ. ಭಾರತ ಮತ್ತು ಚೀನಾದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಾಳೆ ನಡೆಯಲಿದ್ದು ಅದಕ್ಕೂ ಮುನ್ನ ಪಾಂಗೊಂಗ್‌ ತ್ಸೊ ಸರೋವರದ ಉತ್ತರ ಮತ್ತು ದಕ್ಷಿಣ ತೀರಗಳಿಂದ ಸೇನಾಪಡೆಗಳನ್ನು ಹಿಂಪಡೆಯುವ ಪ್ರಕ್ರಿಯೆ ಪೂರ್ಣಗೊಂಡಿದೆ.

ಈ ವಿದ್ಯಮಾನದ ಬಗ್ಗೆ ಮಾಹಿತಿ ನೀಡಿದ ಸೇನಾಪಡೆಯ ಹಿರಿಯ ಅಧಿಕಾರಿ ನಾಳೆ ಬೆಳಗ್ಗೆ 10 ಗಂಟೆಗೆ ಸಭೆ ಮೊಲ್ಡೊದಲ್ಲಿ ಆರಂಭವಾಗಲಿದೆ ಎಂದರು.

ಕಳೆದ ಜನವರಿ 24ರಂದು ಒಂಭತ್ತನೇ ಸುತ್ತಿನ ಮಾತುಕತೆ ಮೊಲ್ಡೊದಲ್ಲಿ ಏರ್ಪಟ್ಟಿತ್ತು. ಪೂರ್ವ ಲಡಾಕ್ ನ ಭಾರತೀಯ ಕುಶುಲ್ ವಲಯದ ಗಡಿ ವಾಸ್ತವ ರೇಖೆಯ ಚೀನಾದ ಭಾಗ ಮೊಲ್ಡೊದಲ್ಲಿಯೇ ಕಳೆದ ಬಾರಿ 9ನೇ ಸುತ್ತಿನ ಮಾತುಕತೆ ಏರ್ಪಟ್ಟಿತ್ತು.

ನಾಳೆಯ ಸಭೆಯಲ್ಲಿ ಭಾರತದ ಕಡೆಯಿಂದ ಲೆಫ್ಟಿನೆಂಟ್ ಜನರಲ್ ಪಿಜಿಕೆ ಮೆನನ್, 14 ಕಾರ್ಪ್ಸ್ ಕಮಾಂಡರ್ ಮತ್ತು ಚೀನಾದ ಕಡೆಯಿಂದ ಮೇಜರ್ ಜನರಲ್ ಲಿನ್ ಲಿಯು, ದಕ್ಷಿಣ ಕ್ಸಿಂಜಿಯಾನ್ ಮಿಲಿಟರಿ ಜಿಲ್ಲೆಯ ಕಮಾಂಡರ್ ಭಾಗವಹಿಸಲಿದ್ದಾರೆ.

ಕಳೆದ ಬಾರಿ ಸಂಸತ್ತಿನ ಬಜೆಟ್ ಅಧಿವೇಶನ ವೇಳೆ ಮಾತನಾಡಿದ್ದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಂಗೊಂಗ್ ಟ್ಸೊ ತೀರಗಳಿಂದ ಸಂಪೂರ್ಣವಾಗಿ ಎರಡೂ ದೇಶಗಳು ಸೇನೆಯನ್ನು ಹಿಂಪಡೆದು 48 ಗಂಟೆಗಳೊಳಗೆ 10ನೇ ಸುತ್ತಿನ ಮಾತುಕತೆ ನಡೆಯಲಿದೆ. 

ಭಾರತ ಮತ್ತು ಚೀನಾ ನಡುವೆ ಮಾಡಿಕೊಂಡಿರುವ ಒಪ್ಪಂದದಂತೆ, ಚೀನಾದ ಸೈನಿಕರು ಫಿಂಗರ್ 8 ರ ಪೂರ್ವಕ್ಕೆ ಸ್ಥಳಾಂತರಗೊಳ್ಳಲಿದ್ದಾರೆ ಮತ್ತು ಭಾರತೀಯ ಸೇನೆಯು ಪಾಂಗೊಂಗ್‌ ತ್ಸೊ ಸರೋವರದ ಉತ್ತರ ದಂಡೆಯಲ್ಲಿರುವ ಫಿಂಗರ್ 4 ಗೆ ಹತ್ತಿರವಿರುವ ಧನ್ ಸಿಂಗ್ ಥಾಪಾ ಪೋಸ್ಟ್‌ನಲ್ಲಿ ನಿಯೋಜನೆಗೊಳ್ಳಲಿದೆ. 

ಎರಡೂ ದೇಶಗಳ ಸೈನಿಕರು ತಮ್ಮ ಶಸ್ತ್ರಾಸ್ತ್ರ ವಾಹನಗಳನ್ನು ಹಿಂತೆಗೆದುಕೊಂಡಿವೆ, ಈ ಹಿಂದೆ ಸೇನಾ ವಾಹನಗಳು ಪರಸ್ಪರ 50 ಮೀಟರ್ ಗಳ ಹತ್ತಿರದಲ್ಲಿದ್ದವು. 

ಇದಕ್ಕೂ ಮುನ್ನ ನಡೆದ ಬೆಳವಣಿಗೆಯಲ್ಲಿ ಕಳೆದ ವರ್ಷ ಜೂನ್ ನಲ್ಲಿ ಗಾಲ್ವಾನ್ ಕಣಿವೆಯಲ್ಲಿ ನಡೆದಿದ್ದ ಸಂಘರ್ಷದಲ್ಲಿ ತಮ್ಮ ಕಡೆಯ ಐವರು ಅಧಿಕಾರಿಗಳು ಮತ್ತು ಸೈನಿಕರು ಮೃತಪಟ್ಟಿದ್ದಾರೆ ಎಂದು ಮೊದಲ ಬಾರಿಗೆ ಚೀನಾ ಒಪ್ಪಿಕೊಂಡಿದೆ.


Stay up to date on all the latest ರಾಷ್ಟ್ರೀಯ news
Poll
CBSE board exam

12 ನೇ ತರಗತಿ ಮೌಲ್ಯಮಾಪನಕ್ಕೆ 10 ನೇ ತರಗತಿ ಅಂಕಗಳನ್ನು ಸೇರಿಸುವ ಸಿಬಿಎಸ್‌ಇ ಸೂತ್ರವನ್ನು ನೀವು ಬೆಂಬಲಿಸುತ್ತೀರಾ?


Result
ಹೌದು
ಇಲ್ಲ
flipboard facebook twitter whatsapp