ದೇಶದ ರೈತರು, ಕುಶಲಕರ್ಮಿಗಳಿಗೆ ಜಾಗತಿಕ ಮಾರುಕಟ್ಟೆ ಹುಡುಕಲು ವಿಶ್ವ ಭಾರತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೆರವಾಗಿ!

ದೇಶದ ರೈತರು ಹಾಗೂ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಂಡುಹಿಡಿಯಲು ವಿಶ್ವ ಭಾರತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೆರವಾಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ.

Published: 19th February 2021 04:04 PM  |   Last Updated: 19th February 2021 04:04 PM   |  A+A-


Modi

ಮೋದಿ

Posted By : Vishwanath S
Source : PTI

ವಿಶ್ವಭಾರತಿ(ಪಶ್ಚಿಮ ಬಂಗಾಳ): ದೇಶದ ರೈತರು ಹಾಗೂ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಕಂಡುಹಿಡಿಯಲು ವಿಶ್ವ ಭಾರತಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೆರವಾಗಬೇಕು ಎಂದು ಪ್ರಧಾನಿ ಮೋದಿ ಕರೆ ನೀಡಿದ್ದಾರೆ. 

ವಿಶ್ವಭಾರತಿ ವಿಶ್ವ ವಿದ್ಯಾಲಯವನ್ನು ಗುರು ರವೀಂದ್ರನಾಥ ಟಾಗೋರ್ ಅವರು ಶಿಕ್ಷಣ ಸಂಸ್ಥೆಯಾಗಿ ಮಾತ್ರವೇ ಪರಿಗಣಿಸಿರಲಿಲ್ಲ. ಭಾರತದ ಸಂಸ್ಕೃತಿಯು ತನ್ನ ಪೂರ್ಣ ಸಾಮರ್ಥ್ಯವನ್ನು ಅರಿಯಲು ಸಹಕಾರಿಯಾಗಲಿ ಎಂದು ಇಚ್ಛಿಸಿದ್ದರು ಎಂದು ಹೇಳಿದ್ದಾರೆ. 

ವಿಶ್ವ ಭಾರತಿ ಪರಂಪರೆಯನ್ನು ಶ್ಲಾಘಿಸಿದ ಪ್ರಧಾನಿ ಮೋದಿ, ಜ್ಞಾನವೆಂಬುದು ಸ್ಥಿರ ಹಾಗೂ ಜಡತ್ವವಾಗಿರುವುದಿಲ್ಲ ಬದಲಿಗೆ ಅದೊಂದು ಕ್ರಿಯಾತ್ಮಕ ಪರಿಕಲ್ಪನೆಯಾಗಿರುತ್ತದೆ ಎಂಬ ಸಂದೇಶ ನೀಡಿದರು. 

ದೇಶದ ರೈತರು ಹಾಗೂ ಕುಶಲಕರ್ಮಿಗಳಿಗೆ ತಮ್ಮ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ಹುಡುಕಲು ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ನೆರವಾದರೆ ಆಗ ಆತ್ಮನಿರ್ಭರ್ ಭಾರತ ನಿರ್ಮಾಣಕ್ಕೆ ಬಹು ದೊಡ್ಡ ಪ್ರೇರಣೆಯಾಗಲಿದೆ ಎಂದು ಹೇಳಿದರು. 

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp