ಕೊರೋನಾ ಲಸಿಕೆ ಪಡೆಯಲು ಆಧಾರ್ ಗೆ ಮೊಬೈಲ್ ನಂಬರ್ ಜೋಡಣೆ: 861 ಅಂಚೆ ಕಚೇರಿಗಳಲ್ಲಿ ಸೇವೆ ಲಭ್ಯ
ಕೊರೋನಾ ಲಸಿಕೆ ಪಡೆಯುವುದಕ್ಕಾಗಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಜೋಡಣೆ ಮಾಡುವುದು ಅತ್ಯಗತ್ಯವಾಗಿದ್ದು, ಈ ಸೇವೆಗಳನ್ನು ಒದಗಿಸುವುದಕ್ಕೆ ಅಂಚೆ ಕಚೇರಿ ಮುಂದಾಗಿದೆ.
Published: 19th February 2021 07:56 PM | Last Updated: 19th February 2021 07:56 PM | A+A A-

ಕೊರೋನಾ ಲಸಿಕೆ ಪಡೆಯಲು ಆಧಾರ್ ಗೆ ಮೊಬೈಲ್ ನಂಬರ್ ಜೋಡಣೆ: 861 ಅಂಚೆ ಕಚೇರಿಗಳಲ್ಲಿ ಸೇವೆ ಲಭ್ಯ
ಬೆಂಗಳೂರು: ಕೊರೋನಾ ಲಸಿಕೆ ಪಡೆಯುವುದಕ್ಕಾಗಿ ಆಧಾರ್ ಕಾರ್ಡ್ ಗೆ ಮೊಬೈಲ್ ನಂಬರ್ ಜೋಡಣೆ ಮಾಡುವುದು ಅತ್ಯಗತ್ಯವಾಗಿದ್ದು, ಈ ಸೇವೆಗಳನ್ನು ಒದಗಿಸುವುದಕ್ಕೆ ಅಂಚೆ ಕಚೇರಿ ಮುಂದಾಗಿದೆ.
ರಾಜ್ಯಾದ್ಯಂತ 861 ಅಂಚೆ ಕಚೇರಿಗಳಲ್ಲಿ ಸಾರ್ವಜನಿಕರು ಈ ಸೇವೆಯ ಸೌಲಭ್ಯವನ್ನು ಪಡೆಯಬಹುದಾಗಿದೆ. ಮುಖ್ಯ ಪೋಸ್ಟ್ ಮಾಸ್ಟರ್ ಜನರಲ್, ಕರ್ನಾಟಕ ಸರ್ಕಲ್, ಶಾರ್ದಾ ಸಂಪತ್ ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆಗೆ ಮಾತನಾಡಿದ್ದು, ರಾಜ್ಯಾದ್ಯಂತ 861 ಅಂಚೆ ಕಚೇರಿಗಳು ಹಾಗೂ ಉಪ ಅಂಚೆ ಕಚೇರಿಗಳಲ್ಲಿ ಆಧಾರ್ ಸಂಬಂಧಿತ ಅಪ್ಡೇಟ್ ಕೆಲಸವನ್ನು ಮಾಡಿಕೊಳ್ಳಬಹುದಾಗಿದೆ. ಈ ಮೂಲಕ ಲಸಿಕೆ ಪಡೆಯುವುದಕ್ಕೆ ಅಗತ್ಯವಿರುವ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಲಸಿಕೆ ಪಡೆಯುವ ವ್ಯಕ್ತಿಗಳ ಮಾಹಿತಿಗಳನ್ನು ನಿಖರವಾಗಿ ಸಂಗ್ರಹಿಸುವುದಕ್ಕಾಗಿ ಮೊಬೈಲ್- ಆಧಾರ್ ಬಳಕೆ ಅಗತ್ಯ ಎಂದು ಜ.10 ರಂದು ಲಸಿಕೆಗೆ ಸಂಬಂಧಿಸಿದ ರಾಷ್ಟ್ರೀಯ ತಜ್ಞರ ಗುಂಪು ಹೇಳಿತ್ತು.
2017 ರಿಂದಲೂ ಆಧಾರ್ ಗೆ ಸಂಬಂಧಿಸಿದ ಅಪ್ಡೇಟ್ ಗಳ ಸೇವೆಗಳನ್ನು ಯುಐಡಿಎಐ ಗೆ ಅಂಚೆ ಕಚೇರಿ ಒದಗಿಸುತ್ತಿದೆ ಎಂದು ಅಂಚೆ ಸೇವೆಗಳ ನಿರ್ದೇಶಕ, ಬೆಂಗಳೂರು ಕೆ.ರವೀಂದ್ರನ್ ಮಾಹಿತಿ ನೀಡಿದ್ದಾರೆ. ಅಪ್ಡೇಟ್ ಮಾಡುವುದಕ್ಕಾಗಿ ಅಂಚೆ ಕಚೇರಿ ಯಾವುದೇ ಶುಲ್ಕ ವಿಧಿಸುವುದಿಲ್ಲ ಆದರೆ ಯುಐಡಿಎಐ ಮಾತ್ರ 30 ರೂಪಾಯಿ ಶುಲ್ಕ ವಿಧಿಸುತ್ತದೆ. ತಕ್ಷಣವೇ ಅಪ್ಡೇಟ್ ಮಾಡುವ ಸೇವೆಗಳನ್ನು ಅಂಚೆ ಇಲಾಖೆಯೂ ಒದಗಿಸುತ್ತದೆ ಎಂದು ಹೇಳಿದ್ದಾರೆ.
ಅಧಾರ್ ಗೆ ಸಂಬಂಧಿಸಿದಂತೆ ಮೊಬೈಲ್ ನಂಬರ್ ಗಳನ್ನು ಅಪ್ಡೇಟ್ ಮಾಡುವುದು ಸುಲಭವಾಗುವುದಕ್ಕೆ ಕ್ಯಾಂಪ್ ಗಳನ್ನು ಆಯೋಜನೆ ಮಾಡುತ್ತಿದೆ ಎಂದು ರವೀಂದ್ರನ್ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ದಿನನಿತ್ಯ ಸಾರ್ವಜನಿಕರೊಂದಿಗೆ ವ್ಯವಹರಿಸುವ ಕಾರಣಕ್ಕಾಗಿ 14,000 ಮಂದಿ ಅಂಚೆ ಇಲಾಖೆ ನೌಕರರನ್ನು (ಮುನ್ನೆಲೆ ಕಾರ್ಯಕರ್ತರು) ಕೊರೋನಾ ಸಂದರ್ಭದಲ್ಲಿ ಕೋವಿಡ್ ಯೋಧರೆಂದು ಪರಿಗಣಿಸಿ ಆದ್ಯತೆಯ ಆಧಾರದಲ್ಲಿ ಅವರಿಗೂ ಲಸಿಕೆ ನೀಡಬೇಕೆಂದು ರಾಜ್ಯ ಮುಖ್ಯಕಾರ್ಯದರ್ಶಿಗಳಿಗೆ ಮನವಿ ಮಾಡುವುದಾಗಿ ಸಿಪಿಎಂಜಿ ತಿಳಿಸಿದ್ದಾರೆ.