2020ರಲ್ಲಿ 32 ಉಗ್ರರ ಬಂಧನ, ಅತಿ ದೊಡ್ಡ ಮಾದಕ ವಸ್ತು ಸಾಗಾಣೆ ಜಾಲ ಪತ್ತೆ: ದೆಹಲಿ ಪೊಲೀಸ್

ಕಳೆದ 2020ರಲ್ಲಿ ದೆಹಲಿಯಲ್ಲಿ ಒಟ್ಟು 32 ಉಗ್ರರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

Published: 20th February 2021 08:03 AM  |   Last Updated: 20th February 2021 08:03 AM   |  A+A-


Delhi Police

ದೆಹಲಿ ಪೊಲೀಸರು

Posted By : Srinivasamurthy VN
Source : PTI

ನವದೆಹಲಿ: ಕಳೆದ 2020ರಲ್ಲಿ ದೆಹಲಿಯಲ್ಲಿ ಒಟ್ಟು 32 ಉಗ್ರರನ್ನು ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಕಳೆದ ವರ್ಷದ ದತ್ತಾಂಶಗಳ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಪೊಲೀಸರು, 2020ನೇ ವರ್ಷದಲ್ಲಿ ದೆಹಲಿ ಪೊಲೀಸರು 32 ಉಗ್ರರನ್ನು ಬಂಧಿಸಿದ್ದಾರೆ. ಇದು 2016ರ ನಂತರ ದಾಖಲಾದ ಗರಿಷ್ಠ ಸಂಖ್ಯೆಯಾಗಿದೆ ಎಂದು ಹೇಳಿದ್ದಾರೆ.

ಅಂತೆಯೇ ಕಳೆದ ವರ್ಷ ಇದೇ ದೆಹಲಿಯಲ್ಲಿದ್ದ ಐಸಿಸ್ ಉಗ್ರ ಕೇಂದ್ರವನ್ನು ಪತ್ತೆ ಹಚ್ಚಲಾಗಿತ್ತು. ಈ ಮೂಲಕ ಉಗ್ರ ಚಟುವಟಿಕೆಗಳಿಗೆ ಮಟ್ಟ ಹಾಕುವಲ್ಲಿ ಇಲಾಖೆ ಯಶ ಕಂಡಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಪಾಕ್ ನಿಂದ ಜಿಹಾದ್ ಕುಮ್ಮಕ್ಕು
ಇನ್ನು ನೆರೆಯ ಪಾಕಿಸ್ತಾನ ಭಾರತದಲ್ಲಿ ಜಿಹಾದ್ (ಧರ್ಮಯುದ್ಧ)ಗೆ ಕುಮ್ಮಕ್ಕು ನೀಡುತ್ತಿದ್ದು, ಈ ಸಂಬಂಧ ಆರ್ಥಿಕ ಮತ್ತು ಬಾಹ್ಯ ನೆರವು ನೀಡುತ್ತಿದೆ. ಅಂತೆಯೇ ಭಾರತದ ಆರ್ಥಿಕತೆಯನ್ನು ಬುಡಮೇಲು ಮಾಡಲು ಅಲ್‌ಖೈದಾ ಮುಂದಾಳತ್ವದಲ್ಲಿ ಭಾರತದ ನಕಲಿ ಕರೆನ್ಸಿಗಳನ್ನು ಮುದ್ರಿಸುತ್ತಿದೆ. ಈ ಸಂಬಂಧ ನಡೆದ ಕಾರ್ಯಾಚರಣೆಯಲ್ಲಿ 7.8 ಲಕ್ಷ ರೂ.ಗಳ ಮುಖಬೆಲೆಯ ನಕಲಿ ಭಾರತೀಯ ಕರೆನ್ಸಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಎಂಟು ಮಂದಿಯನ್ನು ಬಂಧಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಲ್ಲದೆ ದೆಹಲಿಯಲ್ಲಿ ಅತಿ ದೊಡ್ಡ ಮಾದಕ ವಸ್ತು ಸಾಗಾಣೆ ಜಾಲವನ್ನು ಪತ್ತೆ ಹಚ್ಚಿದ್ದು, ಕಂದಹಾರ್‌ನಿಂದ ಇರಾನ್‌ ಮತ್ತು ಮುಂಬೈನಿಂದ ಚಬಹಾರ್ ಬಂದರು ಈ ಹೊಸ ಮಾರ್ಗದಲ್ಲಿ ಸರಬರಾಜಾಗುತ್ತಿದ್ದ ಡ್ರಗ್ಸ್ ಪ್ರಕರಣಗಳನ್ನು ಬೇಧಿಸಿದ್ದಾರೆ. ಅಂತೆಯೇ ನ್ಹಾ ಶೆವಾ ಬಂದರಿನಲ್ಲಿ ಕಂಟೇನರ್‌ ನಲ್ಲಿ ಇಡಲಾಗಿದ್ದ 330 ಕೆ.ಜಿ ಹೆರಾಯಿನ್ ಅನ್ನು ವಶಪಡಿಸಲಾಗಿದೆ. ಈ ಸಂಬಂಧ ಪೊಲೀಸರು ಆರೋಪಿಗಳಿಂದ 549 ಪಿಸ್ತೂಲ್ ಮತ್ತು ರೈಫಲ್ ಮತ್ತು 1,505 ಕಾರ್ಟ್ರಿಜ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಒಟ್ಟು 33 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದೆ.

ಈ ಹಿಂದೆ ದೆಹಲಿ ಪೊಲೀಸರು ನಡೆಸಿದ್ದ ಕಾರ್ಯಾಚರಣೆಗಳಲ್ಲಿ 2019ರಲ್ಲಿ 5, 2018ರಲ್ಲಿ 8, 2017ರಲ್ಲಿ 11 ಮತ್ತು 2016ರಲ್ಲಿ 16 ಭಯೋತ್ಪಾದಕರನ್ನು ಬಂಧಿಸಲಾಗಿತ್ತು ಎಂದು ವರದಿಯಲ್ಲಿ ಹೇಳಲಾಗಿದೆ.
 

Stay up to date on all the latest ರಾಷ್ಟ್ರೀಯ news
Poll
Rahul_Gandhi1

ರಾಹುಲ್ ಗಾಂಧಿ ಟೀಕೆ ಮಾಡುವುದನ್ನು ನಿಲ್ಲಿಸಿ ಕೋವಿಡ್ ಬಿಕ್ಕಟ್ಟಿನ ವಿರುದ್ಧ ಹೋರಾಡಲು ಪಕ್ಷವನ್ನು ಸಜ್ಜುಗೊಳಿಸಬೇಕೇ?


Result
ಹೌದು, ರಾಹುಲ್ ಮುಂದಾಳತ್ವ ವಹಿಸಬೇಕು.
ಇಲ್ಲ, ಇದು ಕೇಂದ್ರ ಸರ್ಕಾರದ ಜವಾಬ್ದಾರಿ.
flipboard facebook twitter whatsapp