ದಿಶಾ ರವಿ ನ್ಯಾಯಾಂಗ ಬಂಧನ ನಂತರ ಮಾನವ ಹಕ್ಕುಗಳು ಕುರಿತು ಗ್ರೇಟಾ ಥನ್ ಬರ್ಗ್ ಟ್ವೀಟ್!

ಟೂಲ್ ಕಿಟ್ ಪ್ರಕರಣದಲ್ಲಿ ದೇಶದ್ರೋಹ ಮತ್ತಿತರ ಆರೋಪಗಳಿಗಾಗಿ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ 22 ವರ್ಷ ದಿಶಾ ರವಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಅವರಿಗೆ  ಸ್ವಿಡೀಸ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಬೆಂಬಲ ವ್ಯಕ್ತಪಡಿಸಿದ್ದಾರೆ.

Published: 20th February 2021 11:47 AM  |   Last Updated: 20th February 2021 12:43 PM   |  A+A-


Greta_Thunberg1

ಗ್ರೇಟಾ ಥನ್ ಬರ್ಗ್

Posted By : Nagaraja AB
Source : PTI

ನವದೆಹಲಿ: ಟೂಲ್ ಕಿಟ್ ಪ್ರಕರಣದಲ್ಲಿ ದೇಶದ್ರೋಹ ಮತ್ತಿತರ ಆರೋಪಗಳಿಗಾಗಿ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ 22 ವರ್ಷ ದಿಶಾ ರವಿ ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಅವರಿಗೆ  ಸ್ವಿಡೀಸ್ ಹವಾಮಾನ ಕಾರ್ಯಕರ್ತೆ ಗ್ರೇಟಾ ಥನ್ ಬರ್ಗ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಪ್ರತಿಯೊಬ್ಬರಿಗೂ ನ್ಯಾಯವನ್ನು ಖಾತ್ರಿಪಡಿಸಲು ಶಾಂತಿಯುತ ಹಾಗೂ ಗೌರವಯುತವಾಗಿ ಧ್ವನಿ ಎತ್ತಿ ಎಂದು ಅವರು ಟ್ವೀಟ್ ಮಾಡಿದ್ದಾರೆ.

ವಾಕ್ ಸ್ವಾತಂತ್ರ್ಯ , ಶಾಂತಿಯುತ ಪ್ರತಿಭಟನೆ ಹಕ್ಕು ಮತ್ತು ಮೌನವಾಗಿ ಗುಂಪು ಸೇರುವುದು ಮಾನವ ಹಕ್ಕುಗಳಾಗಿವೆ. ಇವುಗಳು ಯಾವುದೇ ಪ್ರಜಾಪ್ರಭುತ್ವದ ಮೂಲಭೂತ ಭಾಗವಾಗಿವೆ ಎಂದು ಸ್ಟ್ಯಾಂಡ್ ವಿತ್ ದಿಶಾ ರವಿ ಹ್ಯಾಷ್ ಟ್ಯಾಗ್ ನಲ್ಲಿ ಗ್ರೇಟಾ ಥನ್ ಬರ್ಗ್ ಟ್ವಿೀಟ್ ಮಾಡಿದ್ದಾರೆ.

 

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ನಿಕಿತಾ, ಶಾಂತನು ಮತ್ತು ದಿಶಾ ರವಿ ಟೂಲ್ ಕಿಟ್ ಎಡಿಟ್ ಮಾಡಿದ್ದಾರೆ. ಇದು ದೇಶದ್ರೋಹ ಕೃತ್ಯವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp