'ಬಂಗಾಳವು ತನ್ನ ಸ್ವಂತ ಮಗಳನ್ನು ಬಯಸುತ್ತದೆ': ಟಿಎಂಸಿ ಪಕ್ಷದ ಚುನಾವಣಾ ಘೋಷವಾಕ್ಯ

ಮುಂಬರುವ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಶನಿವಾರ ತನ್ನ ಘೋಷ ವಾಕ್ಯವನ್ನು ಅನಾವರಣಗೊಳಿಸಿದೆ. ವಲಸಿಗರು ಮತ್ತು ಒಳಗಿನವರು ಎಂಬ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದ ಪುತ್ರಿ ಎಂದು ಬಿಂಬಿಸಿಕೊಂಡಿದ್ದಾರೆ.

Published: 20th February 2021 04:52 PM  |   Last Updated: 20th February 2021 07:58 PM   |  A+A-


Mamata_Banerjee1

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

Posted By : Nagaraja AB
Source : PTI

ಕೊಲ್ಕತ್ತಾ: ಮುಂಬರುವ ವಿಧಾನಸಭಾ ಚುನಾವಣೆಗೆ ತೃಣಮೂಲ ಕಾಂಗ್ರೆಸ್ ಶನಿವಾರ ತನ್ನ ಘೋಷ ವಾಕ್ಯವನ್ನು ಅನಾವರಣಗೊಳಿಸಿದೆ. ವಲಸಿಗರು ಮತ್ತು ಒಳಗಿನವರು ಎಂಬ ಚರ್ಚೆ ನಡೆಯುತ್ತಿರುವಾಗಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಂಗಾಳದ ಪುತ್ರಿ ಎಂದು ಬಿಂಬಿಸಿಕೊಂಡಿದ್ದಾರೆ.

ಆಡಳಿತರೂಢ ಟಿಎಂಸಿ ಅಧಿಕೃತವಾಗಿ ತನ್ನ ಕೇಂದ್ರ ಕಚೇರಿಯಲ್ಲಿ ಅನಾವರಣಗೊಳಿಸಿರುವ 'ಬಂಗಾಳವು ತನ್ನ ಸ್ವಂತ ಮಗಳನ್ನು ಬಯಸುತ್ತದೆ' ಎನ್ನುವ ಘೋಷಣೆಯುಳ್ಳ ಬ್ಯಾನರ್ಜಿಯ ಹೋರ್ಡಿಂಗ್ಸ್ ಗಳನ್ನು ಕೊಲ್ಕತ್ತಾದೆಲ್ಲೆಡೆ ಹಾಕಲಾಗುತ್ತಿದೆ.

ರಾಜ್ಯದ ಜನರು ಹಲವು ವರ್ಷಗಳಿಂದ ಮುಖ್ಯಮಂತ್ರಿಯಾಗಿರುವ ತಮ್ಮ ಸ್ವಂತ ಮಗಳನ್ನು ಬಯಸುತ್ತಾರೆ. ನಮಗೆ ಹೊರಗಿನವರು ಬೇಡ ಎಂದು ಟಿಎಂಸಿ ಪ್ರದಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಹೇಳಿದರು.

ಬಿಜೆಪಿ ವಿರುದ್ಧ ಹೋರಾಟದಲ್ಲಿ ತೊಡಗಿರುವ ಟಿಎಂಸಿ, ಪ್ರತಿಪಕ್ಷ ಮುಖಂಡರನ್ನು ಹೊರಗಿನವರು, ಅವರು ಚುನಾವಣಾ ಪ್ರವಾಸೋದ್ಯಮಕ್ಕಾಗಿ ರಾಜ್ಯಕ್ಕೆ ಬಂದಿದ್ದಾರೆ ಎಂದು ಹೇಳುವ ಮೂಲಕ ಚುನಾವಣೆಯಲ್ಲಿ ಬಿಜೆಪಿಗೆ ತಕ್ಕ ಪ್ರತ್ಯುತ್ತರ ನೀಡಲು ಮುಂದಾಗಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp