ಚೆನ್ನೈ ಮೆಟ್ರೋ ಪ್ರಯಾಣ ದರ 20 ರೂ. ಕಡಿತ, ಫೆಬ್ರವರಿ 22 ರಿಂದ ಜಾರಿ

ಚೆನ್ನೈ ಮೆಟ್ರೋ ರೈಲು ಪ್ರಯಾಣದ ಗರಿಷ್ಠ ಶುಲ್ಕವನ್ನು 20 ರೂ. ಕಡಿತಗೊಳಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಶನಿವಾರ ಪ್ರಕಟಿಸಿದ್ದಾರೆ. 

Published: 20th February 2021 04:03 PM  |   Last Updated: 20th February 2021 04:03 PM   |  A+A-


metro-channai

ಸಾಂದರ್ಭಿಕ ಚಿತ್ರ

Posted By : Lingaraj Badiger
Source : PTI

ಚೆನ್ನೈ: ಚೆನ್ನೈ ಮೆಟ್ರೋ ರೈಲು ಪ್ರಯಾಣದ ಗರಿಷ್ಠ ಶುಲ್ಕವನ್ನು 20 ರೂ. ಕಡಿತಗೊಳಿಸಲಾಗಿದೆ ಎಂದು ತಮಿಳುನಾಡು ಮುಖ್ಯಮಂತ್ರಿ ಕೆ.ಪಳನಿಸ್ವಾಮಿ ಅವರು ಶನಿವಾರ ಪ್ರಕಟಿಸಿದ್ದಾರೆ. 

ಪೂರ್ಣ-ಉದ್ದದ ಪ್ರಯಾಣದ ಶುಲ್ಕವನ್ನು 70 ರೂಪಾಯಿಯಿಂದ 50 ರೂ.ಗೆ ಇಳಿಸಲಾಗಿದ್ದು, ಹೊಸ ದರ ಫೆಬ್ರವರಿ 22ರಿಂದಲೇ ಜಾರಿಗೆ ಬರಲಿದೆ.

ಪ್ರಯಾಣಿಕರು 2 ಕಿಲೋಮೀಟರ್ ದೂರಕ್ಕೆ 10 ರೂ. ಎರಡು ರಿಂದ ಐದು ಕಿ.ಮೀ ದೂರಕ್ಕೆ 20 ರೂ. ಮತ್ತು 5 ರಿಂದ 12 ಕಿ.ಮೀ ದೂರಕ್ಕೆ 30 ರೂ.ದರ ನಿಗದಿಪಡಿಸಲಾಗಿದೆ.

12 ರಿಂದ 21 ಕಿ.ಮೀ ದೂರಕ್ಕೆ 40 ರೂಪಾಯಿ, ಮತ್ತು 21 ಕಿ.ಮೀ ಗಿಂತ ಹೆಚ್ಚಿನ (32 ಕಿ.ಮೀ ವರೆಗೆ) ಅಂತರಕ್ಕೆ 50 ರೂ. ದರ ನಿಗದಿಪಡಿಸಲಾಗಿದೆ.

ಇದಲ್ಲದೆ ಕ್ಯೂಆರ್ ಕೋಡ್ ಅಥವಾ ಸಿಎಮ್ಆರ್ ಎಲ್ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಿ ರಿಚಾರ್ಜ್ ಮಾಡುವವರಿಗೆ ಶೇಕಡಾ 20 ರಷ್ಟು ಶುಲ್ಕ ರಿಯಾಯಿತಿ ನೀಡಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp