ಎನ್ ಸಿಪಿ ಮುಖಂಡ, 'ಮಹಾ' ಸಚಿವ ಏಕನಾಥ್ ಖಡ್ಸೆಗೆ 2ನೇ ಬಾರಿ ಕೊರೋನಾ ಸೋಂಕು
ಈ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ಎನ್ ಸಿಪಿ ಮುಖಂಡ ಏಕನಾಥ್ ಖಡ್ಸೆ ಮತ್ತು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಬಚ್ಚು ಕಡು ಅವರಿಗೆ 2ನೇ ಬಾರಿಗೆ ಕೊರೋನಾ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.
Published: 20th February 2021 11:06 AM | Last Updated: 20th February 2021 12:42 PM | A+A A-

ಏಕನಾಥ್ ಖಡ್ಸೆ ಮತ್ತು ಬಚ್ಚು ಕಡು
ಮುಂಬೈ: ಈ ಹಿಂದೆ ಕೋವಿಡ್ ಸೋಂಕಿಗೆ ತುತ್ತಾಗಿ ಗುಣಮುಖರಾಗಿದ್ದ ಎನ್ ಸಿಪಿ ಮುಖಂಡ ಏಕನಾಥ್ ಖಡ್ಸೆ ಮತ್ತು ಮಹಾರಾಷ್ಟ್ರ ಜಲಸಂಪನ್ಮೂಲ ಸಚಿವ ಬಚ್ಚು ಕಡು ಅವರಿಗೆ 2ನೇ ಬಾರಿಗೆ ಕೊರೋನಾ ಸೋಂಕು ಒಕ್ಕರಿಸಿದೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಸ್ವತಃ ಏಕನಾಥ್ ಖಡ್ಸೆ ಅವರೇ ಟ್ವೀಟ್ ಮೂಲಕ ಮಾಹಿತಿ ನೀಡಿದ್ದು, ನನಗೆ ಜ್ವರ ಮತ್ತು ಶೀತ ಸೇರಿದಂತೆ ಕೋವಿಡ್ ರೋಗಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದೆ. ಅದರ ವರದಿ ಬಂದಿದ್ದು, ನನಗೆ ಕೋವಿಡ್ ಸೋಂಕು ಇರುವುದು ದೃಢವಾಗಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ನನ್ನ ಸಂಪರ್ಕಕ್ಕೆ ಬಂದವರು ಮುಂಜಾಗ್ರತಾ ಕ್ರಮವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.
माझी कोरोना चाचणी केली असता ती पॉझिटिव्ह आली असून माझी तब्येत चांगली आहे, काळजीचे कारण नाही. गेल्या काही दिवसात माझ्या संपर्कात आलेल्यांनी आपली कोरोना चाचणी करून घ्यावी अशी मी विनंती करतो.
— Eknath Khadse (@EknathGKhadse) February 18, 2021
ಪ್ರಸ್ತುತ ಅವರನ್ನು ಬಾಂಬೇ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಲಾಗಿದೆ. ಈ ಹಿಂದೆಯೂ ಕೂಡ ಏಕನಾಥ್ ಖಡ್ಸೆ ಅವರಿಗೆ ಕೊರೋನಾ ಸೋಂಕು ಕಾಡಿತ್ತು. ಕಳೆದ ನವೆಂಬರ್ ನಲ್ಲಿ ಏಕನಾಥ್ ಖಡ್ಸೆ ಸೋಂಕಿಗೆ ತುತ್ತಾಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದರು.
ಅಂತೆಯೇ ಮಹಾರಾಷ್ಟ್ರ ಜಲ ಸಂಪನ್ಮೂಲ ಸಚಿವ ಬಚ್ಚುಕಡು ಅವರಿಗೂ 2ನೇ ಬಾರಿಗೆ ಸೋಂಕು ಒಕ್ಕರಿಸಿದ್ದು, ಪ್ರಸ್ತುತ ಅವರು ಹೋಮ್ ಕ್ವಾರಂಟೈನ್ ನಲ್ಲಿರುವುದಾಗಿ ಹೇಳಿದ್ದಾರೆ. ಅಂತೆಯೇ ನನ್ನ ಸಂಪರ್ಕಕ್ಕೆ ಬಂದವರು ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ. ಕಳೆದ ಸೆಪ್ಟೆಂಬರ್ ನಲ್ಲಿ ಬಚ್ಚುಕಡು ಅವರಿಗೂ ಸೋಂಕು ಕಾಣಿಸಿಕೊಂಡಿತ್ತು.
माझी कोरोना चाचणी दुसर्यांदा पॉजिटीव्ह आली असून, सध्या मी आयसोलेशनमध्ये आहे. मागील काही दिवसांत माझ्या संपर्कात आलेल्या सर्वांनी स्वत:ची काळजी घ्यावी, आवश्यक वाटत असेल, तर स्वतःची चाचणी करून घ्यावी.
— BACCHU KADU (@RealBacchuKadu) February 19, 2021