ಕರ್ನಾಟಕ ಭವನದ ಜಾಲತಾಣ, ಕೊಠಡಿ ಕಾಯ್ದಿರಿಸುವಿಕೆ ಪೋರ್ಟಲ್ ಲೋಕಾರ್ಪಣೆ

ನವದೆಹಲಿಯ ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿನ ಕರ್ನಾಟಕ ಭವನ-1ರ ಕಾವೇರಿಯಲ್ಲಿ ಕರ್ನಾಟಕ ಭವನದ ಜಾಲತಾಣ ಹಾಗೂ ಕೊಠಡಿ ಕಾಯ್ದಿರಿಸುವಿಕೆ ಪೋರ್ಟಲ್ ನ್ನು ಅಪರ ಮುಖ್ಯ ಕಾರ್ಯದರ್ಶಿ...

Published: 20th February 2021 07:21 PM  |   Last Updated: 20th February 2021 07:21 PM   |  A+A-


karnataka-bhavan

ಕರ್ನಾಟಕ ಭವನ

Posted By : Lingaraj Badiger
Source : UNI

ನವದೆಹಲಿ: ನವದೆಹಲಿಯ ಚಾಣಕ್ಯಪುರಿಯ ಕೌಟಿಲ್ಯ ಮಾರ್ಗದಲ್ಲಿನ ಕರ್ನಾಟಕ ಭವನ-1ರ ಕಾವೇರಿಯಲ್ಲಿ ಕರ್ನಾಟಕ ಭವನದ ಜಾಲತಾಣ ಹಾಗೂ ಕೊಠಡಿ ಕಾಯ್ದಿರಿಸುವಿಕೆ ಪೋರ್ಟಲ್ ನ್ನು ಅಪರ ಮುಖ್ಯ ಕಾರ್ಯದರ್ಶಿ ಹಾಗೂ ನವದೆಹಲಿಯ ಕರ್ನಾಟಕ ಭವನದ ಆಯುಕ್ತರೂ ಆದ ಡಾ.ಸಂದೀಪ್ ದವೆ ಅವರು ಶನಿವಾರ ಲೋಕಾರ್ಪಣೆ ಮಾಡಿದರು.

ದೆಹಲಿಯ ಕರ್ನಾಟಕ ಭವನವು ಅತಿಗಣ್ಯ ಅತಿಥಿಗಳು ಆಗಮಿಸುವ ರಾಜ್ಯದ ಆತಿಥ್ಯ ಸಂಸ್ಥೆಯಾಗಿದೆ. ಮತ್ತಷ್ಟು ಕ್ರಿಯಾ ಶೀಲವಾಗಿ ಕಾರ್ಯನಿರ್ವಹಿಸುವ ಹಿನ್ನೆಲೆಯಲ್ಲಿ ಈ ಜಾಲತಾಣ ಬಳಸಿಕೊಂಡು ಕಾರ್ಯನಿರ್ವಹಿಸಲು ಅನುವಾಗುವತ್ತ ಹಾಗೂ ಭವನದ ಎಲ್ಲಾ ಕಾರ್ಯಚಟುವಟಿಕೆಗಳನ್ನು ವಿದ್ಯುನ್ಮಾನೀಕರಿಸುವ ನಿಟ್ಟಿನಲ್ಲಿ ನಾವೀನ್ಯತೆಯನ್ನೊಳಗೊಂಡಿರುವ ಜಾಲತಾಣ(ವೆಬ್ ಸೈಟ್) ಹಾಗೂ ಪೋರ್ಟಲ್ ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.

ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿ ವಿವರಗಳು ಈ ಜಾಲತಾಣದಲ್ಲಿ ಅಳವಡಿಸಲಾಗಿದೆ. ರಾಜ್ಯದಿಂದ ದೆಹಲಿಗೆ ಆಗಮಿಸುವ ಗಣ್ಯರೂ ಸೇರಿದಂತೆ ಸಾರ್ವಜನಿಕರಿಗೆ ಸುಲಭವಾಗಿ ಮಾಹಿತಿ ದೊರೆಯಲಿ ಎಂಬ ಉದ್ಧೇಶದಿಂದ ಈ ಜಾಲತಾಣವನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿದೆ.

ಈ ಹಿಂದೆ ಕರ್ನಾಟಕ ಭವನವು ಜಾಲತಾಣ ಹೊಂದಿತ್ತು. ಸಕಾಲಿಕವಾಗಿ ಹಾಗೂ ಸಮಗ್ರವಾಗಿ ಮಾಹಿತಿಯನ್ನೊಳಗೊಂಡ ನೂತನ ತಂತ್ರಾಂಶವನ್ನು ಅಳವಡಿಸಿಕೊಂಡು ಕರ್ನಾಟಕ ಮುನ್ಸಿಪಲ್ ಡಾಟಾ ಸೋಸೈಟಿ, ಬೆಂಗಳೂರು ಅವರು ಈ ವೆಬ್ ಸೈಟ್ ಅನ್ನು ಅಭಿವೃದ್ಧಿಪಡಿಸಿದ್ದಾರೆ ಎಂದರು.

ಹೊಸದಾಗಿ ಪ್ರಾರಂಭಗೊಂಡ www.karnatakabhavan.karnataka.gov.in ಈ ವೆಬ್ ತಾಣದಲ್ಲಿ ರಾಜ್ಯದ ರಾಯಭಾರಿ ಕಚೇರಿ ಎನಿಸಿಕೊಂಡಿರುವ ನವದೆಹಲಿಯ ಕರ್ನಾಟಕ ಭವನಕ್ಕೆ ಸಂಬಂಧಿಸಿದ ಮಾಹಿತಿ, ಸರ್ಕಾರದ ಪ್ರಮುಖ ಆದೇಶಗಳು, ಸೌಲಭ್ಯಗಳು, ವಿಮಾನ ನಿಲ್ದಾಣದಿಂದ ಹಾಗೂ ರೈಲ್ವೆ ನಿಲ್ದಾಣದಿಂದ ಭವನಕ್ಕಿರುವ ದೂರ, ರಾಜ್ಯಕ್ಕೆ ಸಂಬಂಧಿಸಿದ ಮಾಹಿತಿ ಈ ಜಾಲತಾಣ ಒಳಗೊಂಡಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp