ಲೈವ್ ವಿಡಿಯೋ ಕಾನ್ಫರೆನ್ಸ್ ಎಡವಟ್ಟು: ಕಿಸ್ ಕೊಡಲು ಬಂದ ಅರ್ಧಾಂಗಿ, ಪೇಚಿಗೆ ಸಿಲುಕಿದ ಪತಿ, ವಿಡಿಯೋ ವೈರಲ್!

ಕೊರೊನಾದಿಂದಾಗಿ ಹಲವಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಂ’ ಸೌಲಭ್ಯ ಕಲ್ಪಿಸಿವೆ. 

Published: 20th February 2021 06:12 PM  |   Last Updated: 20th February 2021 08:00 PM   |  A+A-


Incident Photo

ಪ್ರತ್ಯಕ್ಷ ಚಿತ್ರ

Posted By : Vishwanath S
Source : UNI

ನವದೆಹಲಿ: ಕೊರೊನಾದಿಂದಾಗಿ ಹಲವಾರು ಸಂಸ್ಥೆಗಳು ತಮ್ಮ ಉದ್ಯೋಗಿಗಳಿಗೆ ‘ವರ್ಕ್ ಫ್ರಮ್ ಹೋಂ’ ಸೌಲಭ್ಯ ಕಲ್ಪಿಸಿವೆ.

ಇದರಿಂದ ಎಲ್ಲಾ ಉದ್ಯೋಗಿಗಳು ಮನೆಗಳಿಂದಲೇ ಕೆಲಸ ಮಾಡುತ್ತಿದ್ದಾರೆ. ಈ ಕ್ರಮದಲ್ಲಿ ಕೆಲವೊಮ್ಮೆ ವಿಚಿತ್ರ ಘಟನೆಗಳು ನಡೆಯುತ್ತಿವೆ. ಅದರಲ್ಲಿ ಖಾಸಗಿಯಾಗಿರಬೇಕಾದ ಪತಿ-ಪತ್ನಿ ರೋಮಾನ್ಸ್ ಕೂಡಾ ಕೆಲವೊಮ್ಮೆ ಬಹಿರಂಗಗೊಳ್ಳುತ್ತಿದೆ. ಅಂತಹ ಒಂದು ಘಟನೆ ಇತ್ತೀಚೆಗೆ ಉದ್ಯೋಗಿಯೊಬ್ಬರಿಗೆ ಎದುರಾಗಿದೆ.

ವ್ಯಕ್ತಿಯೊಬ್ಬರು ವಿಡಿಯೋ ಕಾನ್ಫರೆನ್ಸ್‌ನಲ್ಲಿ ಮಾತನಾಡುತ್ತ ಭಾರತದ ಜಿಡಿಪಿ ಕುರಿತು ಗಂಭೀರ ಉಪನ್ಯಾಸ ನೀಡುತ್ತಿರುತ್ತಾರೆ. ಅಷ್ಟರಲ್ಲಿ ಅವರ ಪತ್ನಿ ದೃಶ್ಯದಲ್ಲಿ ಕಾಣಿಸಿಕೊಂಡು, ಪತಿಯನ್ನು ಚುಂಬಿಸಲು ಮುಂದಾಗುತ್ತಾರೆ. ಇದರಿಂದ ಗಾಬರಿಗೊಂಡ  ಆತ... ಕ್ಯಾಮೆರಾ ಆನ್ ನಲ್ಲಿದೆ.. ಪಾಗಲ್, ವಾಟ್ ನಾನ್ ಸೆನ್ಸ್ ಎಂದು ಹುಸಿ ಕೋಪ ಪ್ರದರ್ಶಿಸುತ್ತಾರೆ.

ಇದರಿಂದ ಕೂಡಲೇ ಹಿಂದೆ ಸರಿದ ಪತ್ನಿ.. ‘ಸರಿ ಸರಿ ಮೀಟಿಂಗ್ ಎಂದು ಆಕೆ ಮುಸಿ ಮುಸಿ ನಗುತ್ತಾರೆ. ಇವೆಲ್ಲವೂ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿರುವು ಕಾರಣ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ‘ಅಬ್ಬಾ..! ಪತಿ ಎಂದರೆ ಆಕೆಗೆ ಎಷ್ಟು ಪ್ರೀತಿ ಅಲ್ಲವೇ.. ಎಂದು ಕೆಲ ನೆಟಿಜನ್‌ಗಳು ಪ್ರತಿಕ್ರಿಯಿಸಿದ್ದಾರೆ. ಏನೇ ಇರಲಿ ಕೊನೆಯಲ್ಲಿ... ಆಕೆಯ ನಗುವೇ ಹೈಲೈಟ್ ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp