ರಿಂಕು ಶರ್ಮ ಹತ್ಯೆ ಪ್ರಕರಣ: ಮತ್ತೆ ನಾಲ್ವರ ಬಂಧನ

ರಿಂಕು ಶರ್ಮ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತೆ ನಾಲ್ವರು ಮಂದಿಯನ್ನು ಬಂಧಿಸಿದ್ದಾರೆ. 

Published: 21st February 2021 01:12 PM  |   Last Updated: 21st February 2021 01:12 PM   |  A+A-


4 more arrested in Rinku Sharma murder case

ರಿಂಕು ಶರ್ಮ ಹತ್ಯೆ ಪ್ರಕರಣ: ಮತ್ತೆ ನಾಲ್ವರ ಬಂಧನ

Posted By : Srinivas Rao BV
Source : PTI

ನವದೆಹಲಿ: ರಿಂಕು ಶರ್ಮ ಹತ್ಯೆ ಪ್ರಕರಣದಲ್ಲಿ ಪೊಲೀಸರು ಮತ್ತೆ ನಾಲ್ವರು ಮಂದಿಯನ್ನು ಬಂಧಿಸಿದ್ದಾರೆ. 

ಮಂಗೋಲ್ ಪುರಿಯ ನಿವಾಸಿಗಳಾದ ದೀನ್ ಮೊಹಮ್ಮದ್ (40) ದಿಲ್ಶನ್ (22) ಫಯಾಜ್ (21) ಫೈಜನ್ (21) ಬಂಧಿತ ಆರೋಪಿಗಳಾಗಿದ್ದು, ಮಂಗೋಲ್ ಪುರಿ ಪೊಲೀಸರು ಇವರನ್ನು ಬಂಧಿಸಿದ್ದಾರೆ. 
 
ರಿಂಕು ಶರ್ಮಾ ಹತ್ಯೆ ಪ್ರಕರಣವನ್ನು ತನಿಖೆ ಮಾಡುತ್ತಿರುವ ದೆಹಲಿ ಅಪರಾಧ ವಿಭಾಗದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ದೆಹಲಿ ಪೊಲೀಸ್ ಇಲಾಖೆಯ ಹೆಚ್ಚುವರಿ ಪಿಆರ್ ಒ ಅನಿಲ್ ಮಿತ್ತಲ್ ಮಾಹಿತಿ ನೀಡಿದ್ದು, ಸಿಸಿಟಿವಿ ದೃಶ್ಯಾವಳಿಗಳು, ಸಾಕ್ಷ್ಯಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
 
ಸಿಸಿಟಿವಿ ದೃಶ್ಯಾವಳಿಗಳಲ್ಲಿ ರಿಂಕು ಶರ್ಮಾ ಮೇಲೆ ಈ ನಾಲ್ವರು ದಾಳಿ ನಡೆಸುತ್ತಿರುವುದು ದಾಖಲಾಗಿದೆ. 

ಫೆ.10 ರಂದು ರಿಂಕು ಶರ್ಮಾ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಆಹಾರಕ್ಕೆ ಸಂಬಂಧಪಟ್ಟಂತೆ ರಿಂಕು ಶರ್ಮಾ ಹಾಗೂ ಮತ್ತೊಂದು ಗುಂಪಿನ ನಡುವೆ ವಾಗ್ವಾದ ಉಂಟಾಗಿತ್ತು. ಪರಸ್ಪರ ಥಳಿಸಿ ಬೆದರಿಕೆ ಹಾಕಿರುವುದು ಸಿಸಿಟಿವಿ ದೃಶ್ಯಾವಳಿಗಳಲ್ಲಿ ದಾಖಲಾಗಿದೆ. ಇದೇ ಮಾದರಿಯಲ್ಲಿ ಹಿಂದೊಮ್ಮೆ ರಿಂಕು ಶರ್ಮಾಗೂ ಅದೇ ವ್ಯಕ್ತಿಗಳಿಗೂ ಘರ್ಷಣೆ ನಡೆದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

"ಸಮಾರಂಭದಲ್ಲಿ ವಾಗ್ವಾದ,ಹಲ್ಲೆ ನಡಿಸಿದ ಬಳಿಕವೂ ಈ ನಾಲ್ವರು ವ್ಯಕ್ತಿಗಳು ರಿಂಕು ಶರ್ಮಾ ಮನೆಗೇ ತೆರಳಿ ಹಲ್ಲೆ ನಡೆಸಿದ್ದು, ರಿಂಕು ಶರ್ಮಾಗೆ ಇರಿದಿದ್ದಾರೆ" ಎನ್ನುತ್ತಾರೆ ಹಿರಿಯ ಪೊಲೀಸ್ ಅಧಿಕಾರಿ. 

ರಿಂಕು ಶರ್ಮಾ ರಾಮ ಮಂದಿರ ನಿರ್ಮಾಣಕ್ಕಾಗಿ ನಡೆಯುತ್ತಿದ್ದ ನಿಧಿ ಸಂಗ್ರಹ ಅಭಿಯಾನದ್ಲಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರಿಂದಲೇ ಆತನನ್ನು ಹತ್ಯೆ ಮಾಡಲಾಯಿತು ಎಂದು ರಿಂಕು ಶರ್ಮಾನ ಕಿರಿಯ ಸಹೋದರ ಮನ್ನು (19) ಹೇಳಿದ್ದಾರೆ. 

ಆದರೆ ದೆಹಲಿ ಪೊಲೀಸರು ಈ ಹತ್ಯೆಗೆ ಕೋಮುದ್ವೇಷದ ಆಯಾಮವನ್ನು ನೀಡಿಲ್ಲ. ಬಹುಶಃ ಉದ್ಯಮದ ದ್ವೇಷದಿಂದ ನಡೆದಿರುವ ಸಾಧ್ಯತೆಗಳಿವೆ ಎಂದು ಹೇಳಿದ್ದಾರೆ.    

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp