ಚಂದ್ರಯಾನ-3 ಉಡಾವಣೆ ಮತ್ತಷ್ಟು ವಿಳಂಬ! 

ಚಂದ್ರಯಾನ-3 ಉಡಾವಣೆ ಮತ್ತಷ್ಟು ವಿಳಂಬವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಮಾಹಿತಿ ನೀಡಿದ್ದಾರೆ. 

Published: 21st February 2021 04:57 PM  |   Last Updated: 21st February 2021 04:57 PM   |  A+A-


ಇಸ್ರೋ

Posted By : Srinivas Rao BV
Source : PTI

ಬೆಂಗಳೂರು: ಚಂದ್ರಯಾನ-3 ಉಡಾವಣೆ ಮತ್ತಷ್ಟು ವಿಳಂಬವಾಗಲಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಮಾಹಿತಿ ನೀಡಿದ್ದಾರೆ. 

ಕೋವಿಡ್-19 ಲಾಕ್ ಡೌನ್ ನ ಪರಿಣಾಮವಾಗಿ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಯ ಹಲವು ಯೋಜನೆಗಳು ವಿಳಂಬವಾಗಿದ್ದವು. 

2020 ರ ವರ್ಷಾಂತ್ಯಕ್ಕೆ ಉಡಾವಣೆಯಾಗಬೇಕಿದ್ದ ಚಂದ್ರಯಾನ-3 ಹಾಗೂ ಗಗನ್ ಯಾನ್ (ಮೊದಲ ಬಾರಿಗೆ ಮಾನವ ಸಹಿತ ಬಾಹ್ಯಾಕಾಶ ಯಾನ) ಯೋಜನೆಗಳು ಮುಂದೂಡಲ್ಪಟ್ಟಿವೆ.

ಈ ಹಿಂದಿನ ಚಂದ್ರಯಾನಗಳಲ್ಲಿ ಆರ್ಬಿಟರ್ ಇತ್ತು. ಆದರೆ ಚಂದ್ರಯಾನ-3 ಆರ್ಬಿಟರ್ ರಹಿತವಾಗಿರಲಿದೆ. ಚಂದ್ರಯಾನ-3 ರೆಡೆಗೆ ನಾವು ಕೆಲಸ ಮಾಡುತ್ತಿದ್ದೇವೆ, ಚಂದ್ರಯಾನ-2 ಮಾದರಿಯಲ್ಲೇ ಚಂದ್ರಯಾನ-3 ರ  ಸಂರಚನೆ ಇರಲಿದ್ದು, 2022 ಕ್ಕೆ ಉಡಾವಣೆಯಾಗುವ ನಿರೀಕ್ಷೆ ಇದೆ ಎಂದು ಶಿವನ್ ಪಿಟಿಐ ಗೆ ತಿಳಿಸಿದ್ದಾರೆ. 

ಚಂದ್ರಯಾನ-2 ರೋವರ್ ನ್ನು ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಸಿ ಅಲ್ಲಿನ ಅನ್ವೇಷಣೆಗೆ ಉದ್ದೇಶಿಸಲಾಗಿತ್ತು. ಆದರೆ ಹಾರ್ಡ್ ಲ್ಯಾಂಡಿಂಗ್ ನಿಂದಾಗಿ ಯೋಜನೆ ನಿರೀಕ್ಷೆಯಂತೆ ಕಲಸ ಮಾಡಲಿಲ್ಲ. 


Stay up to date on all the latest ರಾಷ್ಟ್ರೀಯ news
Poll
Yediyurappa

ಯಡಿಯೂರಪ್ಪ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಾಧ್ಯವಾಗುವುದೇ?


Result
ಹೌದು
ಇಲ್ಲ
flipboard facebook twitter whatsapp