ಕೇರಳದಲ್ಲಿ ಕಮಲ ಅರಳಿಸಲು ಮೆಗಾ ಪ್ಲಾನ್: ಬಿಜೆಪಿ 'ವಿಜಯ ಯಾತ್ರೆ'ಗೆ ಯೋಗಿ ಆದಿತ್ಯನಾಥ್ ಚಾಲನೆ
ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ನೇತೃತ್ವದ 'ವಿಜಯ ಯಾತ್ರೆ' ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಇಲ್ಲಿ ಚಾಲನೆ ನೀಡಿದರು.
Published: 21st February 2021 07:10 PM | Last Updated: 21st February 2021 08:02 PM | A+A A-

ಯೋಗಿ ಆದಿತ್ಯನಾಥ್
ಕಾಸರಗೋಡು: ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ನೇತೃತ್ವದ 'ವಿಜಯ ಯಾತ್ರೆ' ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾನುವಾರ ಇಲ್ಲಿ ಚಾಲನೆ ನೀಡಿದರು.
ಮಾರ್ಚ್ 7 ರಂದು ತಿರುವನಂತಪುರಂನಲ್ಲಿ ನಡೆಯುವ ವಿಜಯಯಾತ್ರೆ ಕೊನೆಯ ದಿನದ ಕಾರ್ಯಕ್ರಮದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾಗವಹಿಸಲಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ ಸುರೇಂದ್ರನ್, ಯಾತ್ರೆಯ ಮೂಲಕ ಭ್ರಷ್ಟಾಚಾರ ರಹಿತ ಕೇರಳ, ಓಲೈಕೆ ವಿರೋಧಿ ರಾಜಕೀಯ ಮತ್ತು ಕೇರಳದ ಸಮಗ್ರ ಅಭಿವೃದ್ಧಿ ಸೇರಿದಂತೆ ವಿವಿಧ ವಿಷಯಗಳನ್ನು ಪ್ರಸ್ತಾಪಿಸಲಾಗುವುದು ಎಂದು ಹೇಳಿದರು.
ಮೆಟ್ರೊ ರೈಲು ತಜ್ಞ ಇ ಶ್ರೀಧರನ್ ಅವರು ಬಿಜೆಪಿಗೆ ಸೇರ್ಪಡೆ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಅನೇಕ ಖ್ಯಾತನಾಮರು ಯಾತ್ರೆಯ ಸಮಯದಲ್ಲಿ ಬಿಜೆಪಿಗೆ ತಮ್ಮ ನಿಷ್ಠೆಯನ್ನು ತೋರಲಿದ್ದಾರೆ. ಇ ಶ್ರೀಧರನ್ ಅವರು ಕೇರಳದ ಮುಖ್ಯಮಂತ್ರಿಯಾಗಲು ಸಮರ್ಥ ವ್ಯಕ್ತಿಯಾಗಿದ್ದಾರೆ ಎಂದು ಹೇಳಿದರು.
ವಿಧಾನಸಭಾ ಚುನಾವಣಾ ಪ್ರಚಾರದ ಭಾಗವಾಗಿರುವ ಯಾತ್ರೆಯ ಅಂಗವಾಗಿ 14 ಬೃಹತ್ ಸಾರ್ವಜನಿಕ ಸಭೆಗಳು, 80 ಸಾಮಾನ್ಯ ಸಾರ್ವಜನಿಕ ಸಭೆಗಳನ್ನು ಆಯೋಜಿಸಲಾಗುವುದು ಎಂದು ಸರೇಂದ್ರನ್ ಹೇಳಿದ್ದಾರೆ.