16 ತಾಸು ನಡೆದ ಭಾರತ-ಚೀನಾ ಸೇನಾ ಮಾತುಕತೆ!

ಚೀನಾ-ಭಾರತ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಘರ್ಷಣೆ ನಡೆದಿದ್ದ ಕೇಂದ್ರಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ. 

Published: 21st February 2021 12:33 PM  |   Last Updated: 21st February 2021 12:33 PM   |  A+A-


India-China military talks last for around 16 hours

16 ತಾಸು ನಡೆದ ಭಾರತ-ಚೀನಾ ಸೇನಾ ಮಾತುಕತೆ!

Posted By : Srinivas Rao BV
Source : PTI

ಚೀನಾ-ಭಾರತ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಘರ್ಷಣೆ ನಡೆದಿದ್ದ ಕೇಂದ್ರಗಳಿಗೂ ವಿಸ್ತರಿಸುವ ನಿಟ್ಟಿನಲ್ಲಿ ವ್ಯಾಪಕ ಚರ್ಚೆಗಳು ನಡೆದಿವೆ. 

ಸತತ 16 ಗಂಟೆಗಳ ಕಾಲ 10 ನೇ ಸುತ್ತಿನ ಮಾತುಕತೆ ನಡೆದಿದೆ ಎಂಬ ಮಾಹಿತಿಯನ್ನು ಸೇನಾ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ. "ಚೀನಾದ ಗಡಿ ನಿಯಂತ್ರಣ ರೇಖೆಯಲ್ಲಿರುವ ಮೊಲ್ಡೊ ಗಡಿ ಕೇಂದ್ರದ ಬಳಿ ಫೆ.20 ರಂದು (ಶನಿವಾರ) ಬೆಳಿಗ್ಗೆ 10 ಕ್ಕೆ ಪ್ರಾರಂಭವಾದ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ರಾತ್ರಿ 2 ಗಂಟೆ ವರೆಗೆ ಮುಂದುವರೆಯಿತು" ಎಂದು ಸೇನಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 
 
ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಈಶಾನ್ಯ ಲಡಾಖ್ ನ ಹಾಟ್ ಸ್ಪ್ರಿಂಗ್ಸ್, ಗೋರ್ಗಾ ಹಾಗೂ ಡೆಪ್ಸಾಂಗ್ ಮುಂತಾದ ಘರ್ಷಣೆಯ ಕೇಂದ್ರಗಳಿಗೂ ವಿಸ್ತರಣೆ ಮಾಡುವುದು ಮಾತುಕತೆಯ ಪ್ರಮುಖ ವಿಷಯವಾಗಿತ್ತು. ಆದರೆ ಮಾತುಕತೆಯ ಬಗ್ಗೆ ಈ ವರೆಗೂ ಅಧಿಕೃತ ಮಾಹಿತಿಯನ್ನು ಬಹಿರಂಗಪಡಿಸಲಾಗಿಲ್ಲ. ಚೀನಾ-ಭಾರತದ ಎತ್ತರದ ಪ್ರದೇಶದಲ್ಲಿರುವ ಪ್ಯಾಂಗಾಂಗ್ ತ್ಸೋದ ಉತ್ತರ ಹಾಗೂ ದಕ್ಷಿಣ ತೀರಗಳಿಂದ ಸೇನಾ ಹಿಂತೆಗೆತ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ಬೆನ್ನಲ್ಲೇ 10 ನೇ ಸುತ್ತಿನ ಮಾತುಕತೆ ನಡೆದಿದೆ. 

ಪ್ರಕ್ಷುಬ್ಧ ಸ್ಥಿತಿಯನ್ನು ತಿಳಿಗೊಳಿಸುವುದಕ್ಕಾಗಿ ಹಾಟ್ ಸ್ಪ್ರಿಂಗ್ಸ್, ಗೋರ್ಗಾ ಹಾಗೂ ಡೆಪ್ಸಾಂಗ್ ಗಳಲ್ಲಿ ವೇಗವಾಗಿ ಸೇನಾ ಹಿಂತೆಗೆತ ಪ್ರಕ್ರಿಯೆ ತ್ವರಿತಗತಿಯಲ್ಲಿ ನಡೆಯಬೇಕೆಂದು ಭಾರತ ಚೀನಾಗೆ ಸಭೆಯಲ್ಲಿ ಒತ್ತಾಯಿಸಿದೆ. 

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp