ಹೊಸ ರೂಪಾಂತರಿ ಕೊರೊನಾ ತಳಿ ಅಪಾಯಕಾರಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಕಳವಳ
ಮಹಾರಾಷ್ಟ್ರ ಸೇರಿದಂತೆ ದೇಶದ ಐದು ರಾಜ್ಯಗಳಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ದಿಢೀರ್ ಹೆಚ್ಚಳಗೊಳ್ಳುತ್ತಿದ್ದು, ಮಹಾರಾಷ್ಟ್ರದಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ಕೊರೊನಾ ತಳಿ ಅಪಾಯಕಾರಿಯಾಗುವ ಸಾಧ್ಯತೆ ಇದೆ
Published: 21st February 2021 05:12 PM | Last Updated: 21st February 2021 05:12 PM | A+A A-

ಏಮ್ಸ್ ನಿರ್ದೇಶಕ ಡಾ.ಆರ್ ಗುಲೇರಿಯಾ
ನವದೆಹಲಿ: ಮಹಾರಾಷ್ಟ್ರ ಸೇರಿದಂತೆ ದೇಶದ ಐದು ರಾಜ್ಯಗಳಲ್ಲಿ ಕೊರೊನಾ ಸಾಂಕ್ರಾಮಿಕ ಪ್ರಕರಣಗಳು ದಿಢೀರ್ ಹೆಚ್ಚಳಗೊಳ್ಳುತ್ತಿದ್ದು, ಮಹಾರಾಷ್ಟ್ರದಲ್ಲಿ ಕಂಡುಬಂದಿರುವ ಹೊಸ ರೂಪಾಂತರಿ ಕೊರೊನಾ ತಳಿ ಅಪಾಯಕಾರಿಯಾಗುವ ಸಾಧ್ಯತೆ ಇದೆ ಎಂದು ದೆಹಲಿ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಹೇಳಿದ್ದಾರೆ.
ಮಾದ್ಯಮದೊಂದಿಗೆ ಮಾತನಾಡಿರುವ ಅವರು ಹೊಸ ರೂಪಾಂತರಿ ಕೊರೊನಾ ತಳಿ, ಪ್ರತಿಕಾಯ ಅಭಿವೃದ್ಧಿಗೊಂಡ ಜನರಲ್ಲಿ ಮತ್ತೆ ಸೋಂಕು ಉಂಟುಮಾಡಬಹುದು ಎಂದು ಅವರು ಎಚ್ಚರಿಸಿದ್ದಾರೆ.
ಮಹಾರಾಷ್ಟ್ರ, ಕೇರಳ, ಮಧ್ಯಪ್ರದೇಶ, ಛತ್ತೀಸ್ ಗಢ ಹಾಗೂ ಪಂಜಾಬ್ ರಾಜ್ಯಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಕಳೆದ ಕೆಲವು ದಿನಗಳಿಂದ ಹೆಚ್ಚಳಗೊಳ್ಳುತ್ತಿರುವುದಕ್ಕೆ ಎಂದು ಡಾ.ಗುಲೇರಿಯಾ ಕಳವಳ ವ್ಯಕ್ತಪಡಿಸಿದ್ದಾರೆ.
ಹೊಸ ತಳಿಯ ಕೊರೋನಾ ವೈರಸ್, ಪ್ರತಿಕಾಯಗಳನ್ನೂ ಮೀರಿ ಸೋಂಕು ಉಂಟುಮಾಡುವ ಸಾಮರ್ಥ್ಯ ಹೊಂದಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನು ಹರ್ಡ್ ಇಮ್ಯುನಿಟಿಯ ಬಗ್ಗೆಯೂ ಹೆಚ್ಚಿನ ವಿಶ್ವಾಸವಿಲ್ಲ ಏಕೆಂದರೆ ಇಡೀ ಜನಸಂಖ್ಯೆಯನ್ನು ರಕ್ಷಿಸಬೇಕಾದರೆ ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಕನಿಷ್ಟ ಶೇ.80 ರಷ್ಟು ಮಂದಿಯಲ್ಲಿ ಪ್ರತಿಕಾಯಗಳು ಉತ್ಪತ್ತಿಯಾಗಿರಬೇಕು ಎಂದು ಗುಲೇರಿಯಾ ಹೇಳಿದ್ದಾರೆ.
ಲಸಿಕೆಗಳು ಹೊಸ ಮಾದರಿಯ ಕೊರೋನಾ ವೈರಾಣುವಿನ ವಿರುದ್ಧ ಪರಿಣಾಮಕಾರಿಯೇ ಎಂಬ ಪ್ರಶ್ನೆಗೂ ಗುಲೇರಿಯ ಉತ್ತರ ನೀಡಿದ್ದು, ಲಸಿಕೆಗಳು ಪರಿಣಾಮಕಾರಿಯಾಗಿ ಇರಲಿವೆ. ಆದರೆ ಜನರಿಗೆ ಕೋವಿಡ್-19 ಸೋಂಕು ತಗುಲುವುದನ್ನು ತಪ್ಪಿಸಲು ಸಾಧ್ಯವಿಲ. ಲಸಿಕೆಗಳು ಪರಿಣಾಮಕಾರಿಯಾಗಿದೆ. ಆದರೆ ಅದರ ಫಲಪ್ರದತೆ ಕಡಿಮೆ ಇರುವ ಸಾಧ್ಯತೆಗಳಿವೆ. ಲಸಿಕೆ ಪಡೆಯುವುದರಿಂದ ವೈರಾಣುವಿನ ತೀವ್ರತೆ ಕಡಿಮೆಯಾಗಲಿದೆ ಆದರೆ ಲಸಿಕೆ ಪಡೆಯುವುದು ಅತ್ಯುತ್ತಮವಾದದ್ದು ಎಂದು ಅವರು ಹೇಳಿದ್ದಾರೆ.