ಅಯೋಧ್ಯೆ ಶ್ರೀರಾಮ ವಿಮಾನ ನಿಲ್ದಾಣಕ್ಕೆ ಬಜೆಟ್ ನಲ್ಲಿ 101 ಕೋಟಿ ಮೀಸಲು
ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ವಿಮಾನ ನಿಲ್ದಾಣಕ್ಕೆ ಮರ್ಯಾದ ಪುರುಷೋತ್ತಮ ಶ್ರೀರಾಮನ ಹೆಸರಿಡಲಾಗುತ್ತಿದೆ. ಇದಕ್ಕಾಗಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಮಂಡನೆಯಾದ ಬಜೆಟ್ ನಲ್ಲಿ 101 ಕೋಟಿ ರೂ. ಮೀಸಲಿಡಲಾಗಿದೆ.
Published: 22nd February 2021 06:38 PM | Last Updated: 22nd February 2021 07:33 PM | A+A A-

ಶ್ರೀರಾಮನ ಚಿತ್ರ
ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಿಸಲಾಗುತ್ತಿರುವ ಹೊಸ ವಿಮಾನ ನಿಲ್ದಾಣಕ್ಕೆ ಮರ್ಯಾದ ಪುರುಷೋತ್ತಮ ಶ್ರೀರಾಮನ ಹೆಸರಿಡಲಾಗುತ್ತಿದೆ. ಇದಕ್ಕಾಗಿ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಸೋಮವಾರ ಮಂಡನೆಯಾದ ಬಜೆಟ್ ನಲ್ಲಿ 101 ಕೋಟಿ ರೂ. ಮೀಸಲಿಡಲಾಗಿದೆ.
ಹೊಸ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನಾಗಿ ಮಾಡಲಾಗುತ್ತಿದ್ದು, ಜಿವಾರು ವಿಮಾನ ನಿಲ್ದಾಣದಲ್ಲಿ ವಾಯುನೆಲೆಗಳ ಸಂಖ್ಯೆಯಲ್ಲಿ 2ರಿಂದ 6ಕ್ಕೆ ಹೆಚ್ಚಿಸಲು 2 ಸಾವಿರ ಕೋಟಿ ರೂಪಾಯಿಯನ್ನು ನೀಡಲಾಗುತ್ತಿದೆ.
ಆಲಿಘರ್, ಮೊರಾದಾಬಾದ್, ಮೀರತ್ ನಂತಹ ನಗರಗಳನ್ನು ಶೀಘ್ರದಲ್ಲಿಯೇ ವಿಮಾನ ಸೇವೆಗೆ ಸೇರಿಸಲಾಗುವುದು ಎಂದು ಬಜೆಟ್ ಮಂಡನೆ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸುದ್ದಿಗಾರರಿಗೆ ತಿಳಿಸಿದರು.
ವಿಶೇಷ ಪ್ರದೇಶ ಕಾರ್ಯಕ್ರಮದಡಿಯಲ್ಲಿ ಪುರ್ವಾಂಚಲದ ವಿಶೇಷ ಯೋಜನೆಗಳಿಗಾಗಿ 300 ಕೋಟಿಯನ್ನು ಬಜೆಟ್ ನಲ್ಲಿ ಪ್ರಸ್ತಾಪಿಸಲಾಗಿದೆ.