ಸಿನಿಮೀಯ ರೀತಿಯಲ್ಲಿ ವಾಹನ ಬೆನ್ನಟ್ಟಿದ ಅರಣ್ಯ ಅಧಿಕಾರಿಗಳು: ಹತ್ಯೆಗೀಡಾಗಿದ್ದ ವನ್ಯಜೀವಿ ಪತ್ತೆ
ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಾಹನವೊಂದನ್ನು ನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಅರಣ್ಯ ಅಧಿಕಾರಿಗಳಿಗೆ ಹತ್ಯೆಗೀಡಾಗಿದ್ದ ವನ್ಯಜೀವಿ (ಕಾಡುಕೋಣ) ಪತ್ತೆಯಾಗಿದೆ.
Published: 22nd February 2021 05:41 PM | Last Updated: 22nd February 2021 05:41 PM | A+A A-

ಸಿನಿಮೀಯ ರೀತಿಯಲ್ಲಿ ವಾಹನ ಬೆನ್ನಟ್ಟಿದ ಅರಣ್ಯ ಅಧಿಕಾರಿಗಳು: ಹತ್ಯೆಗೀಡಾಗಿದ್ದ ವನ್ಯಜೀವಿ ಪತ್ತೆ
ಭಟ್ಕಳ: ಅನುಮಾನಾಸ್ಪದವಾಗಿ ಸಂಚರಿಸುತ್ತಿದ್ದ ವಾಹನವೊಂದನ್ನು ನಿಮೀಯ ರೀತಿಯಲ್ಲಿ ಬೆನ್ನಟ್ಟಿದ ಅರಣ್ಯ ಅಧಿಕಾರಿಗಳಿಗೆ ಹತ್ಯೆಗೀಡಾಗಿದ್ದ ವನ್ಯಜೀವಿ (ಕಾಡುಕೋಣ) ಪತ್ತೆಯಾಗಿದೆ.
ಭಟ್ಕಳ ವಿಭಾಗೀಯ ಅರಣ್ಯ ಅಧಿಕಾರಿಗಳು ಹತ್ಯೆಗೀಡಾಗಿದ್ದ ವನ್ಯಜೀವಿಯನ್ನು ವಶಕ್ಕೆ ಪಡೆದಿದ್ದಾರೆ.
ಹೊನ್ನಾವರದಿಂದ ಭಟ್ಕಳಕ್ಕೆ ಅತಿ ವೇಗವಾಗಿ ಚಲಿಸುತ್ತಿದ್ದ ವಾಹನವನ್ನು ಚೆಕ್ ಪೋಸ್ಟ್ ನಲ್ಲಿ ತಪಾಸಣೆಗಾಗಿ ತಡೆದಾಗ ನಿಲ್ಲಿಸದೇ ಇದ್ದದ್ದು ಅರಣ್ಯಾಧಿಕಾರಿಗಳಲ್ಲಿ ಸಂಶಯ ಮೂಡಿಸಿದೆ.
ವೆಂಕಟಪುರ ಶಿರಾಳಿ ಬಳಿ ಬ್ಯಾರಿಕೇಡ್ ಗಳಿಗೆ ಡಿಕ್ಕಿ ಹೊಡೆದಿದ್ದ ಈ ವಾಹನ ಭಟ್ಕಳಕ್ಕೆ ತಲುಪುವುದಕ್ಕಾಗಿ ತೆಂಗಿನಗುಂಡಿ ಗ್ರಾಮದ ಮೂಲಕ ಒಳ ರಸ್ತೆಯಲ್ಲಿ ಹಾದು ಹೋಗಲು ಯತ್ನಿಸಿತು. ಆದರೆ ಮದೀನಾ ರಸ್ತೆಯಲ್ಲಿ ಅದನ್ನು ಅಲ್ಲಿಯೇ ಬಿಟ್ಟು ವಾಹನ ಚಾಲಕ ಪರಾರಿಯಾಗಿದ್ದಾನೆ.
ಅರಣ್ಯಾಧಿಕಾರಿಗಳು ಅರ್ಧ ಕತ್ತರಿಸಿದ್ದ ವನ್ಯ ಜೀವಿಯನ್ನು ವಶಪಡಿಸಿಕೊಂಡಿದ್ದಾರೆ. ವಾಹನದಿಂದ ಟಿ ಶರ್ಟ್, ಕ್ಯಾಮರ, ನೀರಿನ ಬಾಟಲ್ ಗಳನ್ನು ವಶಕ್ಕೆ ಪಡೆಯಲಾಗಿದೆ. ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.