ವಿಶ್ವಾಸಮತಯಾಚನೆ ವೇಳೆ ಸ್ಪೀಕರ್ ಮಾರ್ಗಸೂಚಿ ಉಲ್ಲಂಘಿಸಿದ್ದಾರೆ: ಪುದುಚೇರಿ ಮಾಜಿ ಸಿಎಂ
ಸ್ಪೀಕರ್ ವಿ ಪಿ ಶಿವಕೋಲುಂಟು ಅವರು ತಾವು ಮಂಡಿಸಿದ ವಿಶ್ವಾಸಮತ ನಿರ್ಣಯ ಘೋಷಿಸುವಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಪುದುಚೇರಿ ಸಿಎಂ ಸ್ಥಾನಕ್ಕೆ ರಾಜೀನಾಮೆ...
Published: 22nd February 2021 08:42 PM | Last Updated: 22nd February 2021 08:42 PM | A+A A-

ವಿಧಾನಸಭೆಯಲ್ಲಿ ನಾರಾಯಣಸ್ವಾಮಿ
ಪುದುಚೇರಿ: ಸ್ಪೀಕರ್ ವಿ ಪಿ ಶಿವಕೋಲುಂಟು ಅವರು ತಾವು ಮಂಡಿಸಿದ ವಿಶ್ವಾಸಮತ ನಿರ್ಣಯ ಘೋಷಿಸುವಲ್ಲಿ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಪುದುಚೇರಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ವಿ ನಾರಾಯಣಸ್ವಾಮಿ ಅವರು ಆರೋಪಿಸಿದ್ದಾರೆ.
ನಾನು ವಿಶ್ವಾಸಮತ ನಿರ್ಣಯ ಮಂಡಿಸಿ ಸದನವನ್ನು ಉದ್ದೇಶಿಸಿ ಮಾತನಾಡಿದ ನಂತರ, ನಾಮನಿರ್ದೇಶಿತ ಮೂವರು ಶಾಸಕರಿಗೆ ಮತ ಚಲಾಸುವ ಹಕ್ಕು ಇದೆಯೇ? ಎಂದು ಸರ್ಕಾರಿ ವಿಪ್ ಆರ್ ಕೆ ಆರ್ ಅನಂತರಾಮನ್ ಅವರು ಸ್ಪೀಕರ್ಗೆ ಪ್ರಶ್ನಿಸಿದರು.
ರಾಷ್ಟ್ರಪತಿ ಚುನಾವಣೆಯಲ್ಲಿ ನಾಮನಿರ್ದೇಶಿತ ಸದಸ್ಯರಿಗೆ ಮತ ಚಲಾಯಿಸುವ ಹಕ್ಕು. ಹೀಗಾಗಿ ಅವರು ವಿಶ್ವಾಸ ಮತದಾನದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಆದರೆ ಇದಕ್ಕೆ ಸ್ಪೀಕರ್ ಪ್ರತಿಕ್ರಿಯಿಸದಿದ್ದಾಗ, ನಾನು ನೇರವಾಗಿ ರಾಜಭವನಕ್ಕೆ ತೆರೆಳಿ ರಾಜೀನಾಮೆ ಸಲ್ಲಿಸಿದೆ ಎಂದು ನಾರಾಯಣಸ್ವಾಮಿ ಹೇಳಿದ್ದಾರೆ.
ನಾನು ಸದನದಿಂದ ಹೊರ ನಡೆದ ನಂತರ, ಸ್ಪೀಕರ್ ಅವರು ತಮ್ಮ ವಿಶ್ವಾಸಮತಕ್ಕೆ ಸೋಲಾಗಿದೆ ಎಂದು ಘೋಷಿಸಿದರು. ಮಾರ್ಗಸೂಚಿಗಳ ಪ್ರಕಾರ ಇದು ಸರಿಯಲ್ಲ ಮತ್ತು ಅವರು ವಿಶ್ವಾಸಮತದ ನಿರ್ಣಯವನ್ನು ಮತಕ್ಕೆ ಹಾಕಬೇಕಿತ್ತು ಎಂದು ಮಾಜಿ ಸಿಎಂ ತಿಳಿಸಿದ್ದಾರೆ.
ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಸಾಬೀತುಪಡಿಸಲು ವಿಫಲವಾದ ವಿ ನಾರಾಯಣಸ್ವಾಮಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.