ಐಎನ್ಎಕ್ಸ್ ಮೀಡಿಯಾ ಪ್ರಕರಣ: ಕಾರ್ತಿ ಚಿದಂಬರಂ ವಿದೇಶ ಪ್ರಯಾಣಕ್ಕೆ ಕೋರ್ಟ್ ಷರತ್ತುಬದ್ಧ ಅನುಮತಿ
ಐಎನ್ಎಕ್ಸ್ ಮೀಡೀಯಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂಗೆ ವಿದೇಶಕ್ಕೆ ಪ್ರಯಾಣಿಸುವುದಕ್ಕೆ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ.
Published: 22nd February 2021 03:32 PM | Last Updated: 22nd February 2021 03:32 PM | A+A A-

ಐಎನ್ಎಕ್ಸ್ ಮೀಡಿಯಾ ಪ್ರಕರಣ: ಕಾರ್ತಿ ಚಿದಂಬರಂ ವಿದೇಶ ಪ್ರಯಾಣಕ್ಕೆ ಕೋರ್ಟ್ ಷರತ್ತುಬದ್ಧ ಅನುಮತಿ
ನವದೆಹಲಿ: ಐಎನ್ಎಕ್ಸ್ ಮೀಡೀಯಾ ಪ್ರಕರಣದಲ್ಲಿ ಕಾರ್ತಿ ಚಿದಂಬರಂಗೆ ವಿದೇಶಕ್ಕೆ ಪ್ರಯಾಣಿಸುವುದಕ್ಕೆ ಸುಪ್ರೀಂ ಕೋರ್ಟ್ ಷರತ್ತು ಬದ್ಧ ಅನುಮತಿ ನೀಡಿದೆ.
ಕಾರ್ತಿ ಚಿದಂಬರಂ ವಿದೇಶಕ್ಕೆ ತೆರಳಬೇಕಾದಲ್ಲಿ, 2 ಕೋಟಿ ರೂಪಾಯಿ ಮೊತ್ತದ ಠೇವಣಿ ಹಾಗೂ ವಿದೇಶ ಪ್ರವಾಸದ ಸಂಪೂರ್ಣ ವಿವರಗಳನ್ನು ನೀಡಬೇಕಾಗುತ್ತದೆ. ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರೊನ್ನೊಳಗೊಂಡ ಐಎನ್ಎಕ್ಸ್ ಮೀಡಿಯಾ ಪ್ರಕರಣದಕ್ಕೆ ಸಂಬಂಧಪಟ್ಟಂತೆ ಸ್ವಿಸ್ ಅಧಿಕಾರಿಗಳಿಂದ ಸ್ವೀಕರಿಸಿದ್ದ ದಾಖಲೆಗಳನ್ನು ತನಿಖೆಗೆ ಒಳಪಡಿಸಲು ದೆಹಲಿ ಕೋರ್ಟ್ ಸಿಬಿಐಗೆ ಅನುಮತಿ ನೀಡಿತ್ತು.
ಸಿಬಿಐ ನ ವಿಶೇಷ ನ್ಯಾಯಾಧೀಶ ಎಂಕೆ ನಾಗ್ ಪಾಲ್ ಸಿಬಿಐಗೆ ದಾಖಲೆಗಳ ಬಗ್ಗೆ ತನಿಖೆ ನಡೆಸುವುದರ ಜೊತೆಗೆ ದಿನ ನಿತ್ಯದ ತನಿಖೆಗೆ ಪೂರಕವಾಗುವ ದತ್ತಾಂಶಗಳನ್ನು ಎನ್ಕ್ರಿಪ್ಟ್ ರೂಪದಲ್ಲಿರಿಸುವುದಕ್ಕೆ ನಿರ್ದೇಶನ ನೀಡಿದೆ.
ಆ.2019 ರಲ್ಲಿ ಸಿಬಿಐ ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರನ್ನು ಬಂಧಿಸಿ, ಇತರ 13 ಮಂದಿಯ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿತ್ತು. ಇದೇ ಪ್ರಕರಣದಲ್ಲಿ ಡಿಸೆಂಬರ್ ನಲ್ಲಿ ಪಿ.ಚಿದಂಬರಂ ಗೆ ಜಾಮೀನು ದೊರೆತಿತ್ತು.
ಯುಪಿಎ ಆಡಳಿತಾವಧಿಯಲ್ಲಿ ಐಎನ್ಎಕ್ಸ್ ಮೀಡಿಯಾ ವಿದೇಶದಿಂದ 307 ಕೋಟಿ ರೂಪಾಯಿಗಳಷ್ಟು ನಿಧಿಯನ್ನು ಸ್ವೀಕರಿಸುವುದಕ್ಕೆ ವಿದೇಶಿ ಹೂಡಿಕೆ ಉತ್ತೇಜನ ಮಂಡಳಿ (ಎಫ್ ಐಪಿಬಿ) ಅನುಮತಿ ನೀಡಿದ್ದರಲ್ಲಿ ಅಧಿಕಾರ ದುರುಪಯೋಗದ ಆರೋಪ ಕೇಳಿಬಂದಿದೆ.