ವಿವಾಹವಾಗಿ ಪತಿಯ ಪಕ್ಷಕ್ಕೆ ಸೇರ್ಪಡೆ: ಬಿಜೆಪಿ ಸೇರಿದ ಬಿಹಾರದ ಏಕೈಕ ಎಲ್ಜೆಪಿ ಎಂಎಲ್ಸಿ

ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ ಸೋಮವಾರ ಮತ್ತೊಂದು ಹಿನ್ನಡೆಯಾಗಿದೆ.ಬಿಹಾರ ವಿಧಾನ ಪರಿಷತ್ ನಲ್ಲಿ ಪಕ್ಷದ ಏಕೈಕ ಸದಸ್ಯೆಯು ಭಾರತೀಯ ಜನತಾ ಪಕ್ಷದ ಮಂತ್ರಿಯೊಂದಿಗೆ ವಿವಾಹವಾಗಿ ಪತಿಯ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

Published: 22nd February 2021 11:53 PM  |   Last Updated: 22nd February 2021 11:53 PM   |  A+A-


ಜೆಪಿ ಸೇರಿದ ಬಿಹಾರದ ಏಕೈಕ ಎಲ್ಜೆಪಿ ಎಂಎಲ್ಸಿ

Posted By : Raghavendra Adiga
Source : PTI

ಪಾಟ್ನಾ: ಚಿರಾಗ್ ಪಾಸ್ವಾನ್ ನೇತೃತ್ವದ ಲೋಕ ಜನಶಕ್ತಿ ಪಕ್ಷಕ್ಕೆ ಸೋಮವಾರ ಮತ್ತೊಂದು ಹಿನ್ನಡೆಯಾಗಿದೆ.ಬಿಹಾರ ವಿಧಾನ ಪರಿಷತ್ ನಲ್ಲಿ ಪಕ್ಷದ ಏಕೈಕ ಸದಸ್ಯೆಯು ಭಾರತೀಯ ಜನತಾ ಪಕ್ಷದ ಮಂತ್ರಿಯೊಂದಿಗೆ ವಿವಾಹವಾಗಿ ಪತಿಯ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ನೂತನ್ ಸಿಂಗ್, ಪತಿ ನೀರಜ್ ಕುಮಾರ್ ಸಿಂಗ್ ಅಲಿಯಾಸ್ ಬಬ್ಲು ಅವರೊಡನೆ ಈ ತಿಂಗಳ ಪ್ರಾರಂಭದಲ್ಲಿ ವಿವಾಹವಾಗಿದ್ದು ಇಂದು ಪತಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಂಜಯ್ ಜೈಸ್ವಾಲ್ ಅವರ ಸಮ್ಮುಖದಲ್ಲಿ ಕೇಸರಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.

"ನನ್ನ ಪತಿ ಬಿಜೆಪಿಯಲ್ಲಿದ್ದಾರೆ.ರಾಜ್ಯದ ಪ್ರಗತಿಗೆ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಿದರೆ ಅದು ಸೂಕ್ತ ಎಂದು ನಾನು ಭಾವಿಸಿದ್ದೇನೆ."ಈ ವರ್ಷ ಜುಲೈನಲ್ಲಿ ಅಧಿಕಾರಾವಧಿ ಮುಕ್ತಾಯಗೊಳ್ಳುತ್ತಿರುವ ಎಂಎಲ್ಸಿ ನೂತನ್ ಸಿಂಗ್ ಸುದ್ದಿಗಾರರಿಗೆ ತಿಳಿಸಿದರು 

ಈ ಬಗ್ಗೆ ಪ್ರಶ್ನಿಸಿದಾಗ ಹೆಚ್ಚು ಮಾತನಾಡದ ಎಲ್ಜೆಪಿ ನಾಯಕರು "ಆಕೆಯ ಪತಿ ಬಿಜೆಪಿಯಲ್ಲಿರುವುದರಿಂದ ಇದು ಅಚ್ಚರಿಯ ಬೆಳವಣಿಗೆ ಅಲ್ಲ" ಎಂದಿದ್ದಾರೆ.

243 ಸದಸ್ಯರ ಬಿಹಾರ ವಿಧಾನಮಂಡಲದಲ್ಲಿ ಎಲ್ಜೆಪಿಯ ಒಬ್ಬ ಶಾಸಕ ಮಾತ್ರವೇ ಇದ್ದಾರೆ.

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp