ಇದೇ ಕಾರಣಕ್ಕೆ ಮೋದಿ ಕೃಷಿ ಕಾನೂನುಗಳನ್ನು ವಾಪಸ್ ಪಡೆಯುತ್ತಿಲ್ಲ: ರಾಹುಲ್ ಗಾಂಧಿ

ಇಡೀ ವಿಶ್ವ ಭಾರತೀಯ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ನೋಡುತ್ತಿದೆ ಆದರೆ, ಕೇಂದ್ರ ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

Published: 22nd February 2021 03:16 PM  |   Last Updated: 22nd February 2021 04:19 PM   |  A+A-


Rahul_Gandhi1

ರಾಹುಲ್ ಗಾಂಧಿ

Posted By : Nagaraja AB
Source : PTI

ವೈನಾಡು: ಇಡೀ ವಿಶ್ವ ಭಾರತೀಯ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ನೋಡುತ್ತಿದೆ ಆದರೆ, ಕೇಂದ್ರ ಸರ್ಕಾರ ರೈತರ ನೋವನ್ನು ಅರ್ಥ ಮಾಡಿಕೊಳ್ಳುತ್ತಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ಕೇರಳದ ವೈನಾಡು ಪ್ರದೇಶ ಮುತ್ತಿಲ್ ನಲ್ಲಿ ಮಾತನಾಡಿದ ಅವರು, ರೈತರ ಪರಿಸ್ಥಿತಿ ಬಗ್ಗೆ ಪಾಪ್ ಸ್ಟಾರ್ ಗಳು ಟೀಕೆ ಮಾಡುತ್ತಿದ್ದಾರೆ. ಆದರೆ, ಭಾರತ ಸರ್ಕಾರ ಮಾತ್ರ ಆಸಕ್ತಿ ತೋರುತ್ತಿಲ್ಲ ಎಂದರು.

ವಿವಾದಾತ್ಮಕ ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳದಿರಲು ಪ್ರಬಲವಾದ ಕಾರಣವಿದೆ. ಅದೇ ಕಾರಣದಿಂದ ಮೂರು ಕಾನೂನುಗಳಿಂದ  ದೇಶದ ಕೃಷಿ ವ್ಯವಸ್ಥೆಯನ್ನು ಹಾಳು ಮಾಡಲಾಗುತ್ತಿದೆ. ಅಲ್ಲದೇ, ವ್ಯವಹಾರವನ್ನು  ಪ್ರಧಾನಿ ನರೇಂದ್ರ ಮೋದಿ ಅವರ ಎರಡ್ಮೂರು ಗೆಳೆಯರಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ದೇಶದ ಬಹುತೇಕ ಜನರು ಕೃಷಿ ಮೇಲೆಯೆ ಅವಲಂಬನೆಯಾಗಿದ್ದಾರೆ. ಕೆಲ ಇನ್ನಿತರ ಕೆಲ ವ್ಯವಹಾರಗಳನ್ನು ಮಾಡುತ್ತಿದ್ದಾರೆ. ಕೇವಲ ಎರಡ್ಮೂರು ಜನರಿಗೆ ಅನುಕೂಲ ಮಾಡಿಕೊಡಲು ಮತ್ತು ದೇಶದ ಕೃಷಿ ಕ್ಷೇತ್ರವನ್ನು ನಿಯಂತ್ರಣ ಮಾಡಲು  ಈ ಕಾನೂನುಗಳನ್ನು ಮಾಡಲಾಗಿದೆ ಎಂದು  ಅವರು ಟೀಕಿಸಿದರು.

ಸರ್ಕಾರದಲ್ಲಿನ ಇಬ್ಬರು ವ್ಯಕ್ತಿಗಳು, ಹೊರಗಿನ ಇಬ್ಬರು ವ್ಯಕ್ತಿಗಳೊಂದಿಗೆ ಪಾಲುದಾರರಾಗಿರುವುದಾಗಿ ಸಂಸತ್ ನಲ್ಲಿ ಮಾಡಿದ ಭಾಷಣದಲ್ಲಿ ಹೇಳಿದ್ದಾಗಿ ರಾಹುಲ್ ಗಾಂಧಿ ತಿಳಿಸಿದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp