ಗಗನಕ್ಕೇರಿದ ತೈಲ ಬೆಲೆ: ಕೇಂದ್ರ ಸರ್ಕಾರದ ವಿರುದ್ದ ರಾಹುಲ್ ವಾಗ್ದಾಳಿ

ದೇಶದ ಜನರ ಜೇಬುಗಳನ್ನು ಖಾಲಿ ಮಾಡುವ ಮಹತ್ತರ, ಘನ ಕಾರ್ಯಗಳನ್ನು ಕೇಂದ್ರದ ಹಾಗೂ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಯುವ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ.

Published: 22nd February 2021 11:41 AM  |   Last Updated: 22nd February 2021 12:53 PM   |  A+A-


Rahul gandhi

ರಾಹುಲ್ ಗಾಂಧಿ

Posted By : Manjula VN
Source : Online Desk

ನವದೆಹಲಿ: ದೇಶದ ಜನರ ಜೇಬುಗಳನ್ನು ಖಾಲಿ ಮಾಡುವ ಮಹತ್ತರ, ಘನ ಕಾರ್ಯಗಳನ್ನು ಕೇಂದ್ರದ ಹಾಗೂ ಮೋದಿ ನೇತೃತ್ವದ ಬಿಜೆಪಿ ಸರಕಾರ ಮಾಡುತ್ತಿದೆ ಎಂದು ಯುವ ನಾಯಕ ರಾಹುಲ್ ಗಾಂಧಿ ದೂರಿದ್ದಾರೆ.

ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಟ್ವೀಟ್ ಮಾಡಿರುವ ರಾಹುಲ್ ಗಾಂಧಿಯವರು, ಪೆಟ್ರೋಲ್ ಪಂಪ್‌ನಲ್ಲಿ ನಿಮ್ಮ ಕಾರನ್ನು ಮರು ಇಂಧನಗೊಳಿಸುವಾಗ, ವೇಗವಾಗಿ ಏರುತ್ತಿರುವ ಮೀಟರ್ ಅನ್ನು ನೋಡಿದಾಗ, ಕಚ್ಚಾ ತೈಲದ ಬೆಲೆ ಹೆಚ್ಚಾಗದೇ ಇಳಿದಿದೆ ಎಂಬುದನ್ನು ನೆನಪಿನಲ್ಲಿಡಬೇಕು. ಮೋದಿ ಸರ್ಕಾರ ಜನರ ಜೇಬು ಖಾಲಿ ಮಾಡುವ ದೊಡ್ಡ ಕೆಲಸವನ್ನು ಮಾಡುತ್ತಿದೆ ಎಂದೂ ಕಿಡಿಕಾರಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಇಂಧನ ಬೆಲೆಗಳು ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ 100 ರೂ.ಗಳ ಗಡಿಯನ್ನು ದಾಟಿವೆ . ಹೆಚ್ಚಳಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನಿರಂತರವಾಗಿ ಕೇಂದ್ರವನ್ನು ಗುರಿಯಾಗಿಸಿಕೊಂಡಿದ್ದರೆ, ಆಮದು ಅವಲಂಬನೆಯನ್ನು ಕಡಿಮೆ ಮಾಡಿಲ್ಲ ಎಂದು ಪ್ರಧಾನಿ ಮೋದಿ ಇದಕ್ಕೆ ಹಿಂದಿನ ಸರ್ಕಾರಗಳನ್ನೇ ದೂಷಿಸಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರಧಾನಿಗೆ ಪತ್ರ ಬರೆದು ಅಬಕಾರಿ ಸುಂಕವನ್ನು ಭಾಗಶಃ ಹಿಂತೆಗೆದುಕೊಳ್ಳುವ ಮೂಲಕ ಇಂಧನ ಬೆಲೆ ಕಡಿಮೆ ಮಾಡಿ ಜನರ ಭಾರ ಕಡಿಮೆ ಮಾಡಬೇಕು ಎಂದೂ ಆಗ್ರಹಪಡಿಸಿದ್ದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp