ತಮಿಳುನಾಡು ವಿಧಾನಸಭೆ ಚುನಾವಣೆ: ತೃತೀಯ ರಂಗ ರಚನೆ ಸಾಧ್ಯತೆ ಇದೆ ಎಂದ ಕಮಲ್ ಹಾಸನ್
ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ನಾಯಕತ್ವದಲ್ಲಿ 'ತೃತೀಯ ರಂಗ'ದ ರಚನೆಯಾಗುವ ಸಾಧ್ಯತೆ ಇದೆ ಎಂದು ನಟ-ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
Published: 22nd February 2021 11:17 AM | Last Updated: 22nd February 2021 12:35 PM | A+A A-

ಕಮಲ್ ಹಾಸನ್
ಚೆನ್ನೈ: ತಮಿಳುನಾಡಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ತಮ್ಮ ನಾಯಕತ್ವದಲ್ಲಿ 'ತೃತೀಯ ರಂಗ'ದ ರಚನೆಯಾಗುವ ಸಾಧ್ಯತೆ ಇದೆ ಎಂದು ನಟ-ರಾಜಕಾರಣಿ ಕಮಲ್ ಹಾಸನ್ ಹೇಳಿದ್ದಾರೆ.
ಚೆನ್ನೈನ ನಡೆದ ಪಕ್ಷದ (ಮಕ್ಕಳ್ ನೀಧಿ ಮಯಂ) ನಾಲ್ಕನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಕಮಲ್ ಹಾಸನ್, ಡಿಎಂಕೆ ವರಿಷ್ಠರಿಂದ ಮೈತ್ರಿಯ ಆಹ್ವಾನ ಬಂದರೆ ಅದನ್ನೂ ತಾವು ಪರಿಗಣಿಸುವುದಾಗಿ ತಿಳಿಸಿದ್ದಾರೆ.
'ತೃತೀಯ ರಂಗ ರೂಪುಗೊಳ್ಳಲಿದೆ ಎಂದು ಭಾವಿಸುತ್ತೇನೆ. ಪರಿಸ್ಥಿತಿ ಅನುಕೂಲಕರವಾಗುತ್ತಿದೆ. ಶೀಘ್ರದಲ್ಲೇ ಅದು ನಡೆಯಬಹುದು'
ನಟ ರಜನಿಕಾಂತ್ ಅವರು ರಾಜಕೀಯಕ್ಕೆ ಬರುವರೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, 'ಆರೋಗ್ಯ ಪರಿಸ್ಥಿತಿಗಳ ಹಿನ್ನೆಲೆಯಲ್ಲಿ ತಾವು ರಾಜಕೀಯಕ್ಕೆ ಬರುವುದಿಲ್ಲ ಎಂದು ರಜನಿಕಾಂತ್ ಅವರೇ ಹೇಳಿದ್ದಾರೆ. ಹೀಗಿದ್ದೂ, ಅವರನ್ನು ಹೇಗೆ ರಾಜಕೀಯಕ್ಕೆ ಆಹ್ವಾನಿಸಲಿ,' ಎಂದು ಕಮಲ್ ಮಾಧ್ಯಮಗಳನ್ನು ಪ್ರಶ್ನೆ ಮಾಡಿದರು. ಇತ್ತೀಚೆಗೆ ಕಮಲ್ಹಾಸನ್ ಅವರು ರಜನಿಕಾಂತ್ ಅವರನ್ನು ಪೊಯಸ್ ಗಾರ್ಡನ್ನ ಅವರ ನಿವಾಸದಲ್ಲಿ ಭೇಟಿಯಾಗಿ ಚರ್ಚಿಸಿದ್ದರು.