ಕೇರಳದಲ್ಲಿ 'ಲವ್ ಜಿಹಾದ್' ವಿರುದ್ಧ ಉತ್ತರ ಪ್ರದೇಶ ಮಾದರಿ ಕಾನೂನಿನ ಅಗತ್ಯವಿದೆ: ಯೋಗಿ ಆದಿತ್ಯನಾಥ್

"ಕೇರಳ ನ್ಯಾಯಾಲಯವು 2009ರಲ್ಲೇ ಲವ್ ಜಿಹಾದ್ ಬಗ್ಗೆ ಪ್ರಬಲ ಕಾಯ್ದೆ ಜಾರಿಯ ಸಂಬಂಧ ಪ್ರಸ್ತಾಪಿಸಿದ್ದರೂ ಇಲ್ಲಿನ ಸರ್ಕಾರ ಇದರ ವಿರುದ್ಧ ಕಾನೂನು ತರಲು ವಿಫಲವಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. 

Published: 22nd February 2021 12:31 AM  |   Last Updated: 22nd February 2021 12:31 PM   |  A+A-


ಯೋಗಿ ಆದಿತ್ಯನಾಥ್

Posted By : Raghavendra Adiga
Source : PTI

ಕಾಸರಗೊಡು: "ಕೇರಳ ನ್ಯಾಯಾಲಯವು 2009ರಲ್ಲೇ ಲವ್ ಜಿಹಾದ್ ಬಗ್ಗೆ ಪ್ರಬಲ ಕಾಯ್ದೆ ಜಾರಿಯ ಸಂಬಂಧ ಪ್ರಸ್ತಾಪಿಸಿದ್ದರೂ ಇಲ್ಲಿನ ಸರ್ಕಾರ ಇದರ ವಿರುದ್ಧ ಕಾನೂನು ತರಲು ವಿಫಲವಾಗಿದೆ, ಅಲ್ಲದೆ ಎಲ್ಡಿಎಫ್ ಮತ್ತು ಯುಡಿಎಫ್ ಪಕ್ಷಗಳು ಕೇರಳದಲ್ಲಿ ಲವ್ ಜಿಹಾದ್ ಅನ್ನು ಉತ್ತೇಜಿಸುತ್ತಿವೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಆರೋಪಿಸಿದ್ದಾರೆ. 

ಭಾನುವಾರ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿರುವ ಕೇರಳದಲ್ಲಿ ಕೇರಳ ಬಿಜೆಪಿ ಅಧ್ಯಕ್ಷ ಕೆ ಸುರೇಂದ್ರನ್ ನೇತೃತ್ವದ 'ವಿಜಯ ಯಾತ್ರೆ' ಗೆ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಚಾಲನೆ ನೀಡಿದ್ದಾರೆ.

ಕೇರಳ ಹೈಕೋರ್ಟ್ 2009 ರಲ್ಲಿ ಪ್ರೀತಿಯ ಸೋಗಿನಲ್ಲಿ 'ಬಲವಂತದ' ಧಾರ್ಮಿಕ ಮತಾಂತರದ ವಿರುದ್ಧ ಪ್ರಸ್ತಾಪಿಸಿತ್ತು. ಆದರೆ ಇಲ್ಲಿ ಆಡಳಿತ ನಡೆಸುವ ಸರ್ಕಾರ ಮಾತ್ರ ಇದರ ಬಗ್ಗೆ ಕಣ್ಣು ಮುಚ್ಚಿ ಕುಳಿತಿವೆ.ಸಿಪಿಐ (ಎಂ) ಮತ್ತು ರಾಜ್ಯದ ಕಾಂಗ್ರೆಸ್ ನೇತೃತ್ವದ ಸರ್ಕಾರಗಳು ಭ್ರಷ್ಟಾಚಾರ ಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ ಮತ್ತು ಜನರಿಗಾಗಿ ಏನನ್ನೂ ಮಾಡಿಲ್ಲ ಎಂದು ಸಿಎಂ ಯೋಗಿ ಆರೋಪಿಸಿದ್ದಾರೆ.

Image

"2009 ರಲ್ಲಿ ಕೇರಳ ಹೈಕೋರ್ಟ್ ಲವ್ ಜಿಹಾದ್ ಕೇರಳದಲ್ಲಿ ವ್ಯಾಪಕವಾಗಿದೆ ಎಂದು ಹೇಳಿತ್ತು. ಆದಾಗ್ಯೂ, ಇಲ್ಲಿನ ಸರ್ಕಾರಗಳು ಅದನ್ನು  ತಡೆಯಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ, ಬದಲಿಗೆ ಅದರ ಪರವಾಗಿ ಗಿ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ" ಎಂದು ಆದಿತ್ಯನಾಥ್ ಹೇಳಿದ್ದಾರೆ. ಉತ್ತರ ಪ್ರದೇಶದಲ್ಲಿ ತಮ್ಮ ಸರ್ಕಾರ "ಲವ್ ಜಿಹಾದ್" ಅನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಂಡಿದೆ ಮತ್ತು ಅದನ್ನು ನಿಯಂತ್ರಿಸಲು ಕಾನೂನುಗಳನ್ನು ಮಾಡಿದೆ, ಸ್ಪಷ್ಟವಾಗಿ ಧಾರ್ಮಿಕ ಸ್ವಾತಂತ್ರ್ಯ ಕಾನೂನುಗಳನ್ನು ಉಲ್ಲೇಖಿಸಿ ಮದುವೆಯ ಮೂಲಕ ಅಥವಾ ಇತರ ಯಾವುದೇ ಮೋಸದ ಮೂಲಕ ಮತಾಂತರ ಮಾಡುವುದನ್ನು ಅಪರಾಧ ಎಂದು ಪರಿಗಣಿಸಲಾಗುತ್ತದೆ.

Image

"ಲವ್ ಜಿಹಾದ್ ದೇವರ ನಾಡು ಕೇರಳವನ್ನು ಇಸ್ಲಾಮಿಕ್ ರಾಜ್ಯವನ್ನಾಗಿ ಪರಿವರ್ತಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ. ಆದರೆ ನಂತರದ ಸರ್ಕಾರಗಳು ರಾಜ್ಯ ಅಥವಾ ದೇಶದ ಸುರಕ್ಷತೆಗಾಗಿ ಆಡಳಿತ ನಡೆಸುತ್ತಲಿಲ್ಲ. ಲವ್ ಜಿಹಾದ್ ಅನ್ನು ತಡೆಯಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ನಾವು ಅದನ್ನು ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.

ಕೇರಳದಲ್ಲಿ "ಪ್ರೀತಿ" ಎಂಬ ಸೋಗಿನಲ್ಲಿ 'ಬಲವಂತದ' ಧಾರ್ಮಿಕ ಮತಾಂತರದ ಘಟನೆಗಳು ನಡೆಯುವುದನ್ನು ಗಮನಿಸಿದ ರಾಜ್ಯ ಹೈಕೋರ್ಟ್ 2009 ರ ಡಿಸೆಂಬರ್ 9 ರಂದು ಇಂತಹ "ವಂಚನೆಗೊಳಪಡಿಸುವ" ಕೃತ್ಯಗಳನ್ನು ನಿಷೇಧಿಸಲು ಕಾನೂನು ಜಾರಿಗೆ ಪರಿಗಣಿಸಬೇಕೆಂದು ಸರ್ಕಾರಕ್ಕೆ ಸೂಚಿಸಿತ್ತು. 

ಕೇರಳಕ್ಕೆ ಈಗ ಬಿಜೆಪಿ ಅಗತ್ಯವಿದೆ ಮತ್ತು ಇದು ದಕ್ಷಿಣ ರಾಜ್ಯಕ್ಕೆ ಸಮೃದ್ಧಿಯನ್ನು ತರುತ್ತದೆ ಮತ್ತು ಯಾವುದೇ ತಾರತಮ್ಯವಿಲ್ಲದೆ ಕಲ್ಯಾಣ ಕಾರ್ಯಕ್ರಮ ರೂಪಿಸುತ್ತದೆ ಎಂದು ಉತ್ತರಪ್ರದೇಶ ಸಿಎಂ ಹೇಳಿದ್ದಾರೆ.

ಶಬರಿಮಲೆ ವಿಷಯದ ಬಗ್ಗೆ ಪಿಣರಾಯಿ ವಿಜಯನ್ ಸರ್ಕಾರವನ್ನು ದೂಷಿಸಿದ ಬಿಜೆಪಿ ಮುಖಂಡರು ಸಿಪಿಐ (ಎಂ) ನೇತೃತ್ವದ ಎಡ ಪ್ರಜಾಪ್ರಭುತ್ವದ ಮುಖಂಡರು ಭಕ್ತರ ಭಾವನೆಗಳಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ ಆದರೆ ಉತ್ತರಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಭಗವಾನ್ ಶ್ರೀರಾಮನ ದೇವಾಲಯ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗಿದೆ ಎಂದರು. "ಹಿಂದೂಗಳ ವಿರುದ್ಧದ ಎಲ್ಡಿಎಫ್ ಸರ್ಕಾರ ನಡೆದುಕೊಳ್ಳುತ್ತದೆ ಎನ್ನಲು ಶಬರಿಮಲೆ ಒಂದು ಉತ್ತಮ ನಿದರ್ಶನ." ಅವರು ಹೇಳಿದ್ದಾರೆ.

Image

ಕೋವಿಡ್ -19 ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಅತ್ಯಂತ ಕೆಟ್ಟದಾಗಿ ನಿರ್ವಹಿಸುತ್ತಿದೆ ಎಂದ ಯೋಗಿ 24 ಕೋಟಿ ಜನರೊಡನೆ ಅತಿ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ರಾಜ್ಯ ಉತ್ತರ ಪ್ರದೇಶ ಪ್ರಸ್ತುತ ಸುಮಾರು 2,000 ಸಕ್ರಿಯ ಪ್ರಕರಣಗಳನ್ನು ಮಾತ್ರ ಹೊಂದಿದೆ ಏಕೆಂದರೆ ರಾಜ್ಯ ಸರ್ಕಾರವು ವೈರಸ್ ಅನ್ನು ನಿಭಾಯಿಸುವ ಮಾರ್ಗಗಳ ಬಗ್ಗೆ ಕೇಂದ್ರದ ಎಲ್ಲಾ ಸೂಚನೆಗಳನ್ನು ಸತ್ಯವಾಗಿ ಅನುಸರಿಸಿದೆ ಎಂದು ಅವರು ಹೇಳಿದ್ದಾರೆ. "ಕೋವಿಡ್ ಪರಿಸ್ಥಿತಿಯನ್ನು ನಿಯಂತ್ರಿಸುವಲ್ಲಿ ಕೇರಳ ಸರ್ಕಾರ ಏಕೆ ವಿಫಲವಾಗಿದೆ? ಹಿಂದಿನ ಕೇರಳ ಸಿಎಂ ಉತ್ತರ ಪ್ರದೇಶವನ್ನು ಗೇಲಿ ಮಾಡುತ್ತಿದ್ದರು ಆದರೆ ಈಗ ಕೋವಿಡ್ ನಿರ್ವಹಣೆ ಸಂಪೂರ್ಣ ವಿಫಲವಾದ ಕಾರಣ ಇಡೀ ಜಗತ್ತು ಕೇರಳವನ್ನು ನೋಡಿ ನಗುತ್ತಿದೆ" ಎಂದು ಅವರು ಹೇಳಿದರು.

ದಕ್ಷಿಣ ರಾಜ್ಯದ ಯುವಕರು ಉದ್ಯೋಗ ಅರಸಿಕೊಂಡು ಬೇರೆ ಸ್ಥಳಗಳಿಗೆ ತೆರಳಬೇಕಾಯಿತು, ಆದರೆ ಉತ್ತರಪ್ರದೇಶದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ನಾಲ್ಕು ಲಕ್ಷ ಯುವಕರಿಗೆ ಉದ್ಯೋಗ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ. ಕೇರಳ ಸರ್ಕಾರವು ಜನರಿಗೆ ಕೆಲಸ ಕೊಡಲು ಆಸಕ್ತಿ ಹೊಂದಿಲ್ಲ.ಕೇಂದ್ರ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸಲಿಲ್ಲ ಎಂದು ಆರೋಪಿಸಿದ ಯೋಗಿ ಕೇರಳಕ್ಕೆ ಕೇಂದ್ರದ ಹಣದ ಅವಶ್ಯಕತೆಯಿದೆ ಆದರೆ ಯೋಜನೆ ಜಾರಿ ಅಥವಾ ಮೋದಿ ಹೆಸರು ಬೇಕಾಗಿಲ್ಲ. "ಅವರು ಸಿಪಿಐ (ಎಂ) ಕೇಡರ್ನ ವಿಕಾಸಕ್ಕಾಗಿ ಮಾತ್ರ ಕೆಲಸ ಮಾಡುತ್ತಾರೆ, ಬಿಜೆಪಿ ಅದಕ್ಕೆ ಭಿನ್ನವಾಗಿ ಸಮಾಜದ ಎಲ್ಲಾ ವರ್ಗದ ಜನರಿಗಾಗಿ ಕೆಲಸ ಮಾಡುತ್ತದೆ" ಎಂದು ಆದಿತ್ಯನಾಥ್ ಹೇಳಿದರು.

ವಿಜಯ ಯಾತ್ರೆ ಉದ್ಘಾಟನೆಗೆ ಹಾಜರಾದವರಲ್ಲಿ ಕೇಂದ್ರ ಸಚಿವ ವಿ ಮುರಳೀಧರನ್, ಜೆಪಿ ರಾಜ್ಯ ಅಧ್ಯಕ್ಷ ಕೆ.ಸುರೇಂದ್ರನ್, ಮಿಜೋರಾಂ ಮಾಜಿ ಗವರ್ನರ್, ಕುಮ್ಮಾನಂ ರಾಜಶೇಖರನ್ ಮತ್ತು ರಾಜ್ಯದ ಹಿರಿಯ ನಾಯಕರು ಇದ್ದರು. ರಾಜ್ಯದ 14 ಜಿಲ್ಲೆಗಳ ಎಲ್ಲಾ ಪ್ರಮುಖ ಕ್ಷೇತ್ರಗಳನ್ನು ಒಳಗೊಂಡ 15 ದಿನಗಳ ವಿಜಯ ಯಾತ್ರೆ ಬಿಜೆಪಿಯ ಮತದಾನ ಅಭಿಯಾನದ ಅಧಿಕೃತ ಉದ್ಘಾಟನೆ ಆಗಿದೆ. ವಿವಿಧ ಕೇಂದ್ರ ಸಚಿವರು ಮತ್ತು ಬಿಜೆಪಿಯ ಜನಪ್ರಿಯ ನಾಯಕರು ಮತ್ತು ರಾಷ್ಟ್ರಮಟ್ಟದ ಸ್ಟಾರ್ ಪ್ರಚಾರಕರು ಮುಂದಿನ ದಿನಗಳಲ್ಲಿ ಯಾತ್ರೆಗೆ ಆಗಮಿಸುವ  ನಿರೀಕ್ಷೆಯಿದೆ.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp