ಆನೆಯನ್ನು ಮರಕ್ಕೆ ಕಟ್ಟಿ ಮನಬಂದತೆ ಥಳಿಸಿದ ಮಾವುತರು: ವ್ಯಾಪಕ ಆಕ್ರೋಶ, ವಿಡಿಯೋ ವೈರಲ್

ಇಬ್ಬರು ಮಾವುತರು ಆನೆಯೊಂದನ್ನು ಮರಕ್ಕೆ ಕಟ್ಟಿ ಮನಬಂದಂತ ಥಳಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

Published: 23rd February 2021 09:03 AM  |   Last Updated: 23rd February 2021 09:03 AM   |  A+A-


Mahout-brutally-beating-Ele

ಆನೆಗೆ ಥಳಿಸಿದ ಮಾವುತರು

Posted By : Srinivasamurthy VN
Source : Online Desk

ಚೆನ್ನೈ: ಇಬ್ಬರು ಮಾವುತರು ಆನೆಯೊಂದನ್ನು ಮರಕ್ಕೆ ಕಟ್ಟಿ ಮನಬಂದಂತ ಥಳಿಸುತ್ತಿರುವ ವಿಡಿಯೋ ಇದೀಗ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಶುಭಂ ಜೈನ್ ಎಂಬುವವರು ಈ ವಿಡಿಯೋವನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದು, ಅವರು ಟ್ವೀಟ್ ಮಾಡಿರುವಂತೆ ತಮಿಳುನಾಡಿನ ತೆಕ್ಕಂಪಟ್ಟಿಯ ಆನೆ ಶಿಬಿರದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.

ಮೊದಲು ಆನೆಯನ್ನು ಮರಕ್ಕೆ ಕಟ್ಟಿಹಾಕಿದ ಇಬ್ಬರು ಮಾವುತರು ಬಳಿಕ ಎರಡು ದೊಣ್ಣೆಗಳಿಂದ ಒಬ್ಬರ ಮೇಲೊಬ್ಬರಂತೆ ನಿರಂತರವಾಗಿ ಥಳಿಸಿದ್ದಾರೆ. ಅವರ ಥಳಿತಕ್ಕೆ ಒಳಗಾದ ಆನೆ ನೋವಿನಿಂದ ಜೋರಾಗಿ ಕೂಗುತ್ತಿತ್ತು. ವಿಡಿಯೋದಲ್ಲಿ ಆನೆ ನೋವಿನಿಂದ ಕೂಗುತ್ತಿರುವುದು ಕೂಡ ಕೇಳುತ್ತದೆ. ಕೂಡಲೇ ಅಮಾನವೀಯ ಮಾವುತರನ್ನು ಶಿಕ್ಷೆಗೆ ಗುರಿ ಪಡಿಸಿ ಎಂದು ಟ್ವೀಟ್ ನಲ್ಲಿ ಆಗ್ರಹಿಸಲಾಗಿದೆ.

ಇನ್ನು ಈ ವಿಡಿಯೋ ವ್ಯಾಪಕ ವೈರಲ್ ಆಗಿದ್ದು, ಈ ವಿಡಿಯೋ ಎಂದು ದಾಖಲಾಗಿದ್ದು ಎಂಬುದರ ಕುರಿತು ಮಾಹಿತಿ ಲಭ್ಯವಾಗಿಲ್ಲ.
 

Stay up to date on all the latest ರಾಷ್ಟ್ರೀಯ news
Poll
Congress logo

ನಾಯಕತ್ವದ ಕೊರತೆಯಿಂದಾಗಿ ಕಾಂಗ್ರೆಸ್ ಪಕ್ಷ ಒಡಕಿನತ್ತ ಸಾಗುತ್ತಿದೆಯೇ?


Result
ಹೌದು
ಇಲ್ಲ
flipboard facebook twitter whatsapp