
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್
ನವದೆಹಲಿ: ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತದ ವಾಯುಪ್ರದೇಶವನ್ನು ಬಳಕೆ ಮಾಡುವುದಕ್ಕೆ ಭಾರತ ಸರ್ಕಾರ ಅನುಮತಿ ನೀಡಿದೆ.
ಫೆ.23 ರಂದು ಇಮ್ರಾನ್ ಖಾನ್ ಶ್ರೀಲಂಕಾಗೆ ತೆರಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ವಾಯು ಪ್ರದೇಶ ಬಳಕೆ ಮಾಡಬೇಕಾಗಿದೆ. 2019 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಅಮೆರಿಕ ಹಾಗೂ ಸೌದಿ ಅರೇಬಿಯಾಗೆ ತೆರಳುವುದಕ್ಕಾಗಿ ಭಾರತದ ವಿಮಾನ ಪಾಕಿಸ್ತಾನದ ವಾಯುಪ್ರದೇಶವನ್ನು ಬಳಕೆ ಮಾಡಿಕೊಳ್ಳಲು ಪಾಕಿಸ್ತಾನ ಅನುಮತಿ ನಿರಾಕರಿಸಿತ್ತು. ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ಕಾರಣವಾಗಿ ನೀಡಿತ್ತು.
ಆದರೆ ನಂತರ ವಿವಿಐಪಿ ವಿಮಾನ ಅನುಮತಿ ನಿರಕಾರಣೆಯನ್ನು ಭಾರತ ನಾಗರಿಕ ವಿಮಾನಯಾನ ಸಂಸ್ಥೆಯ ಗಮನಕ್ಕೆ ತಂದಿತ್ತು. ಸಾಮಾನ್ಯವಾಗಿ ವಿವಿಐಪಿ ಏರ್ ಕ್ರಾಫ್ಟ್ ಗಳು ತಮ್ಮ ದೇಶದ ವಾಯುಗಡಿ ಮೂಲಕ ಹಾದು ಹೋಗುವುದಕ್ಕೆ ಎಲ್ಲಾ ದೇಶಗಳು ಅನುಮತಿ ನೀಡುತ್ತವೆ. ಆದರೆ 2019 ರಲ್ಲಿ ಪಾಕಿಸ್ತಾನದ ಕ್ರಮ ಅಸಹಜವಾಗಿತ್ತು.