ಹೈದರಾಬಾದ್‌: 6ನೇ ನಿಜಾಮ್ ಕಟ್ಟಿಸಿದ್ದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಕುಸಿತ

ತೆಲಂಗಾಣದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಮಂಗಳವಾರ ಮಧ್ಯಾಹ್ನ ಭಾಗಶಃ ಕುಸಿದಿದೆ. ಈ ಕಟ್ಟಡವನ್ನು 1913ರಲ್ಲಿ ಆರನೇ ನಿಜಾಮ್ ಮಹಬೂಬ್ ಅಲಿ ಖಾನ್ ನಿರ್ಮಿಸಿದ್ದರು.

Published: 23rd February 2021 04:39 PM  |   Last Updated: 23rd February 2021 04:39 PM   |  A+A-


Minar

ಅಸೆಂಬ್ಲಿ ಕಟ್ಟಡದ ಮಿನಾರ್

Posted By : Lingaraj Badiger
Source : The New Indian Express

ಹೈದರಾಬಾದ್: ತೆಲಂಗಾಣದ ಹಳೆಯ ಅಸೆಂಬ್ಲಿ ಕಟ್ಟಡದ ಮಿನಾರ್ ಮಂಗಳವಾರ ಮಧ್ಯಾಹ್ನ ಭಾಗಶಃ ಕುಸಿದಿದೆ. ಈ ಕಟ್ಟಡವನ್ನು 1913ರಲ್ಲಿ ಆರನೇ ನಿಜಾಮ್ ಮಹಬೂಬ್ ಅಲಿ ಖಾನ್ ನಿರ್ಮಿಸಿದ್ದರು.

ಪ್ರಾಚೀನ ಕಟ್ಟಡದ ಒಳಗೆ ಕುಳಿತಿದ್ದ ಸಿಬ್ಬಂದಿ ಕುಸಿತದ ದೊಡ್ಡ ಸದ್ದು ಕೇಳಿಬಂದ ನಂತರ ತಮ್ಮ ಪ್ರಾಣ ಉಳಿಸಿಕೊಳ್ಳಲು ಕಟ್ಟಡದಿಂದ ಓಡಿಹೋದರು. ಅದೃಷ್ಟವಶಾತ್, ಘಟನೆಯಲ್ಲಿ ಯಾರೂ ಗಾಯಗೊಂಡಿಲ್ಲ.

ಈ ಕಟ್ಟಡವನ್ನು ಹೈದರಾಬಾದ್ ಸಿಟಿ ಟೌನ್ ಹಾಲ್ ಆಗಿ ಬಳಸಲಾಗುತ್ತಿತ್ತು, ಹಿಂದೆ ಇಲ್ಲಿ ನಿಜಾಮ್ ಜನರನ್ನು ಭೇಟಿಯಾಗುತ್ತಿದ್ದರು.

ಸ್ವಾತಂತ್ರ್ಯದ ನಂತರ, ಈ ಕಟ್ಟಡವನ್ನು ಅಸೆಂಬ್ಲಿ ಹಾಲ್ ಆಗಿ ಬಳಸಲು ಆರಂಭಿಸಲಾಯಿತು. ನಂತರ ಅಸೆಂಬ್ಲಿ ನಡೆಸಲು ಹೊಸ ಕಟ್ಟಡ ನಿರ್ಮಿಸಿದರೂ, ಕಚೇರಿ ಸಿಬ್ಬಂದಿ ಹಳೆಯ ಕಟ್ಟದಲ್ಲಿ ಕೆಲಸ ಮಾಡುತ್ತಿದ್ದರು.

Stay up to date on all the latest ರಾಷ್ಟ್ರೀಯ news
Poll
Second phase election for urban local bodies on May 29

ಪುದುಚೇರಿ ಮತ್ತು ಮಧ್ಯಪ್ರದೇಶದಲ್ಲಿ ಚುನಾಯಿತ ಸರ್ಕಾರಗಳು ಪತನಗೊಂಡ ಉದಾಹರಣೆ ನೋಡಿದರೆ, ಚುನಾವಣೆಗಳು ಕೇವಲ ಹಳೇಯ ಪ್ರಜಾಪ್ರಭುತ್ವದ ಸಂಕೇತಗಳಾಗಿವೆಯೇ?


Result
ಹೌದು
ಇಲ್ಲ
flipboard facebook twitter whatsapp