ಮಾರ್ಚ್ 9 ರವರೆಗೆ ಭೂಗತ ಪಾತಕಿ ರವಿ ಪೂಜಾರಿ ಮುಂಬೈ ಪೊಲೀಸರ ವಶಕ್ಕೆ
ಮುಂಬೈನಲ್ಲಿ 2016ರಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಮಾರ್ಚ್ 9ರವರೆಗೆ ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ.
Published: 23rd February 2021 03:02 PM | Last Updated: 23rd February 2021 03:12 PM | A+A A-

ಭೂಗತ ಪಾತಕಿ ರವಿ ಪೂಜಾರಿ
ಮುಂಬೈ: ಮುಂಬೈನಲ್ಲಿ 2016ರಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿ ರವಿ ಪೂಜಾರಿಯನ್ನು ಮಾರ್ಚ್ 9ರವರೆಗೆ ಮುಂಬೈ ಪೊಲೀಸರ ವಶಕ್ಕೆ ನೀಡಲಾಗಿದೆ.
ಮಂಗಳವಾರ ಬೆಂಗಳೂರಿನಿಂದ ಮುಂಬೈಗೆ ಕರೆದೊಯ್ದು ರವಿ ಪೂಜಾರಿಯನ್ನು ವಿಶೇಷ ನ್ಯಾಯಾಲಯವೊಂದರ ಬಳಿ ವಿಚಾರಣೆಗೆ ಹಾಜರುಪಡಿಸಲಾಯಿತು. ವಿಚಾರಣೆ ನಡೆಸಿದ ನ್ಯಾಯಾಲಯ, ಮಾರ್ಚ್ 9ರವರೆಗೆ ಮುಂಬೈ ಪೊಲೀಸರ ವಶಕ್ಕೆ ರವಿ ಪೂಜಾರಿಯನ್ನು ಒಪ್ಪಿಸಿತು.
ಹಲವು ವರ್ಷಗಳ ಕಾಲ ವಿದೇಶದಲ್ಲಿ ಬಚ್ಚಿಟ್ಟುಕೊಂಡಿದ್ದ ರವಿ ಪೂಜಾರಿಯನ್ನು ಕಳೆದ ವರ್ಷ ಫೆಬ್ರವರಿ ತಿಂಗಳಿನಲ್ಲಿ ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಕರೆ ತರಲಾಗಿತ್ತು. ನಂತರ ಬೆಂಗಳೂರಿನ ಜೈಲಿನಲ್ಲಿ ಹಾಕಲಾಗಿತ್ತು.
ಶನಿವಾರ ಬೆಂಗಳೂರಿಗೆ ಬಂದ ಮುಂಬೈ ಪೊಲೀಸರ ತಂಡವೊಂದು, ಅಕ್ಟೋಬರ್ 21, 2016ರಲ್ಲಿ ವಿಲೆ ಪರ್ಲೆಯಲ್ಲಿ ಸಂಭವಿಸಿದ್ದ ಗುಂಡಿನ ದಾಳಿ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಭೂಗತ ಪಾತಕಿಯನ್ನು ತಮ್ಮ ವಶಕ್ಕೆ ನೀಡಬೇಕೆಂದು ಕರ್ನಾಟಕದಲ್ಲಿನ ನ್ಯಾಯಾಲವೊಂದರಲ್ಲಿ ಮನವಿ ಮಾಡಿದ್ದರು.
ಈ ಘಟನೆ ಆಧಾರದ ಮೇಲೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಮಂಗಳವಾರ ಬೆಳಿಗ್ಗೆ ರಸ್ತೆ ಮಾರ್ಗವಾಗಿ ಬೆಂಗಳೂರಿನಿಂದ ಮುಂಬೈಗೆ ರವಿ ಪೂಜಾರಿಯನ್ನು ಕರೆತರಲಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿಶೇಷ ನ್ಯಾಯಾಧೀಶ ಡಿಇ ಕೊಥಲಿಕರ್ ಮಾರ್ಚ್ 9ರವರೆಗೂ ಪೂಜಾರಿಯನ್ನು ಪೊಲೀಸರ ವಶಕ್ಕೆ ನೀಡಲು ಶಿಫಾರಸು ಮಾಡಿದರು. ಈ ಪ್ರಕರಣದಲ್ಲಿ ರವಿ ಪೂಜಾರಿಯ ಏಳು ಸಹಚರರು ಈಗಾಗಲೇ ಜೈಲಿನಲ್ಲಿ ಇರುವುದಾಗಿ ಪೊಲೀಸರು ಈ ಹಿಂದೆಯೇ ತಿಳಿಸಿದ್ದರು.
ಉಡುಪಿ ಮೂಲದ ಪೂಜಾರಿ ವಿದೇಶದಲ್ಲಿ ಇದ್ದುಕೊಂಡೇ ಉದ್ಯಮಿಗಳು, ಚಲನಚಿತ್ರರಂಗದವರನ್ನು ಗುರಿಯಾಗಿಟ್ಟುಕೊಂಡು ದರೋಡೆ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.